ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Kannada Sahitya Sammelana 2023: 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ಆಕರ್ಷಣೆಗಳು, ಇಲ್ಲಿದೆ ವಿವರ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹಾವೇರಿ, ಜನವರಿ, 06; ಹಾವೇರಿಯಲ್ಲಿ ಶುಕ್ರವಾರ (ಜನವರಿ 06)ರಿಂದ ಪ್ರಾರಂಭವಾಗಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಜನರು ಕಿಕ್ಕಿರಿದು ಬರುತ್ತಲೇ ಇದ್ದಾರೆ. ಸುಮಾರು 128 ಹೆಕ್ಟೇರ್‌ ವಿಸ್ತೀರ್ಣದಲ್ಲಿ ವಿವಿಧ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಪ್ರಧಾನ ವೇದಿಕೆಯಲ್ಲಿ ಸುಮಾರು 30 ಸಾವಿರ ಜನರು ಕುಳಿತುಕೊಳ್ಳಲು ಆಸನ ಕಲ್ಪಿಸಲಾಗಿದೆ. ಜೊತೆಗೆ ಸಮಾನಾಂತರ ವೇದಿಕೆ ನಿರ್ಮಿಸಲಾಗಿದ್ದು, ಅಲ್ಲಿಯೂ ಸಹ ಸಾವಿರಾರು ಜನರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

ಈಗಾಗಲೇ 86ನೇ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದ್ದು, ಇಂದಿನಿಂದ (ಜನವರಿ 06) ಮೂರು ದಿನಗಳ ಕಾಲ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನಗರ ಪ್ರವೇಶಿಸುವ ದ್ವಾರಗಳಲ್ಲಿ ಹಾಕಿರುವ ಬೃಹತ್ ಬ್ಯಾನರ್‌ಗಳು ಸಾಹಿತ್ಯಾಸಕ್ತರನ್ನು ಸ್ವಾಗತ ಕೋರುತ್ತೀವೆ. ಹಾಗೆಯೇ ಹಾವೇರಿ ನಗರದ ಪ್ರಮುಖ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಇದು ಕೂಡ ಪ್ರಮುಖ ಆಕರ್ಷಣೆ ಆಗಿದೆ. ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ಲೈಟ್ ಸರಗಳನ್ನ ಹಾಕಲಾಗಿದೆ. ಸಮ್ಮೇಳನ ವೇದಿಕೆ ಜಾಗದ ಸುಮಾರು ನಾಲ್ಕು ಕೀಲೂಮೀಟರ್ ಅಕ್ಕಪಕ್ಕದ ಮರಗಳಿಗೂ ಸಹ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಅಲ್ಲದೆ ಪ್ರಮುಖ ವೃತ್ತಗಳಲ್ಲಿ ಕನ್ನಡದ್ವಜಗಳನ್ನು ಹಾಕಲಾಗಿದ್ದು, ಕನ್ನಡ ದ್ವಜ ರಾರಾಜಿಸುತ್ತಿವೆ.

Kannada Sahitya Sammelana : ಇಂದಿನಿಂದ ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನKannada Sahitya Sammelana : ಇಂದಿನಿಂದ ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

 ಸಮ್ಮೇಳನದ ಬಗ್ಗೆ ಕನ್ನಡಿಗರ ಅಭಿಪ್ರಾಯ

ಸಮ್ಮೇಳನದ ಬಗ್ಗೆ ಕನ್ನಡಿಗರ ಅಭಿಪ್ರಾಯ

ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹಾವೇರಿ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾಗಿತ್ತು. ಇನ್ನು ವೇದಿಕೆ ಅದ್ಭುತವಾಗಿ ನಿರ್ಮಾಣವಾಗಿದ್ದು, ಸಮ್ಮೇಳನಕ್ಕೆ ಬರುವ ಕನ್ನಡಿಗರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿ ಅಚ್ಚಕಟ್ಟು ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ. ಹಾವೇರಿ ಸಮ್ಮೇಳನ ಮುಂದಿನ ಸಮ್ಮೇಳನಗಳಿಗೆ ಮಾದರಿ ಆಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ ಪುಸ್ತಕ ಮತ್ತು ವಾಣಿಜ್ಯ ಬಳಕೆಗೆ ಸುಮಾರು 600 ಮಳಿಗೆಗಳನ್ನು ಸಿದ್ದಪಡಿಸಲಾಗಿದೆ. ಪ್ರಮುಖವಾಗಿ ಮೂರು ಬೃಹತ್ ಮಳಿಗೆಗಳಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ. ಒಂದರಲ್ಲಿ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ, ಎರಡನೇಯದರಲ್ಲಿ ವಾರ್ತಾ ಇಲಾಖೆ ಪ್ರದರ್ಶನ ಮತ್ತು ಮೂರನೇಯ ಪ್ರದರ್ಶನವನ್ನು ಕಸಾಪ ಏರ್ಪಡಿಸಿತ್ತು. ಕಸಾಪ ಪ್ರದರ್ಶನದಲ್ಲಿ ವಿಶೇಷವಾಗಿ ಕನ್ನಡದ ಪ್ರಥಮಗಳ ಪುಸ್ತಕಗಳ ಪ್ರದರ್ಶನ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು.

 ಗಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ

ಗಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ

ಇನ್ನು ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ತೋಟಗಾರಿಕಾ ಇಲಾಖೆ ಮತ್ತು ಅರಣ್ಯ ಇಲಾಖೆ ಸೇರಿದಂತೆ ಮೂರು ಇಲಾಖೆಗಳ ಪ್ರದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಹಾವೇರಿ ಜಿಲ್ಲಾ ತೋಟಗಾರಿಗೆ ಇಲಾಖೆ ಸುಮಾರು 1 ಲಕ್ಷ 50 ಸಾವಿರ ಪುಷ್ಪಗಳಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಿದೆ. ಜಿಲ್ಲಾಡಳಿತ ಫಲಫುಷ್ಪ ಪ್ರದರ್ಶನಕ್ಕೆ 10 ಗುಂಟೆ ಪ್ರದೇಶ ನೀಡಿದ್ದು, ಇಲಾಖೆ ಸಿದ್ದತೆ ಕೈಗೊಂಡಿದೆ. ಫಲಪುಷ್ಪಪ್ರದರ್ಶನದಲ್ಲಿ ಪುಷ್ಪಗಳಿಂದ, ತರಕಾರಿಗಳಿಂದ ಹಣ್ಣುಗಳಿಂದ ಮತ್ತು ಸಿರಿಧಾನ್ಯಗಳಿಂದ ವಿವಿಧ ಕಲಾಕೃತಿ ರಚಿಸಲಾಗಿದ್ದು, ಇವು ನೋಡುಗರನ್ನು ತನ್ನತ್ತ ಸೆಳೆಯುತ್ತಲೇ ಇವೆ.

 ರಂಗೋಲಿಯಲ್ಲಿ ಅರಳಿದ ಪುನೀತ್‌ ರಾಜ್‌ಕುಮಾರ್‌

ರಂಗೋಲಿಯಲ್ಲಿ ಅರಳಿದ ಪುನೀತ್‌ ರಾಜ್‌ಕುಮಾರ್‌

ಹಾಗೆಯೇ ಫಲಪುಷ್ಪ ಪ್ರದರ್ಶನದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಕಲಾಕೃತಿಗೆ ಪ್ರತ್ಯೇಕವಾದ ಕಲಾಪ್ರದರ್ಶನ ವಿಭಾಗ ತೆರೆಯಲಾಗಿದೆ. ನಾಡದ್ವಜದಲ್ಲಿ ಪುನೀತ್‌ ರಾಜ್‌ಕುಮಾರ್ ಕಲಾಕೃತಿ ರಚಿಸಲಾಗಿದೆ. ರಂಗೋಲಿಯಲ್ಲಿ ಸಹ ಪುನೀತ್‌ ರಾಜ್‌ಕುಮಾರ್ ಚಿತ್ರ ರಚಿಸಲಾಗಿದೆ. ಕಲ್ಲಂಗಡಿ ಹಣ್ಣುಗಳಲ್ಲಿ ಚಿತ್ರಪ್ರದರ್ಶನ, ತರಕಾರಿಗಳಲ್ಲಿ ವಿವಿಧ ಕಲಾಕೃತಿ ರಚನೆ, ಸಿರಿಧಾನ್ಯಗಳಿಂದ ಮೂರ್ತಿ ರಚನೆ ಮತ್ತು 3,200 ಸಾವಿರ ಪುಷ್ಪಗಳಿಂದ ಕಲಾಕೃತಿ ರಚಿಸಿರುವುದಾಗಿ ತೋಟಗಾರಿಕಾ ಇಲಾಖೆ ಮಾಹಿತಿ ನೀಡಿದೆ.

 ಪುಷ್ಪಗಳಲ್ಲಿ ರಚನೆಯಾದ 25 ಕಲಾಕೃತಿಗಳು

ಪುಷ್ಪಗಳಲ್ಲಿ ರಚನೆಯಾದ 25 ಕಲಾಕೃತಿಗಳು

ಮಹಾರಾಷ್ಟ್ರದ ಪೂನಾದಿಂದ 3,200 ಪ್ಲವರ್ ಪಾಟ್‌ಗಳನ್ನ ತರಿಸಲಾಗಿದ್ದು, ತರಕಾರಿ ಕೆತ್ತನೆ ಶಾವಿಗೆಯಲ್ಲಿ ನಿರ್ಮಾಣಗೊಳ್ಳಲಿರುವ ಪುನೀತ್‌ ರಾಜ್‌ಕುಮಾರ್ ಕಲಾಕೃತಿಗಳು ಕನ್ನಡಾಭಿಮಾನಿಗಳನ್ನು ಆಕರ್ಶಿಸಲಿವೆ. ಆನೆ, ನಂದಿ, ನವಿಲು, ಛೋಟಾ ಭೀಮ ಸೇರಿದಂತೆ 25 ಕಲಾಕೃತಿಗಳು ಪುಷ್ಪಗಳಲ್ಲಿ ರಚನೆಯಾಗಿವೆ. ಒಂದು ಲಕ್ಷ 50 ಸಾವಿರ ಹೂಗಳಲ್ಲಿ ಪ್ರದರ್ಶನ ಮಾಡಲಾಗಿದೆ. ಹಾಗೆಯೇ ಜಿಲ್ಲೆಯ ಕನ್ನಡ ರತ್ನಗಳನ್ನು ಸಿರಿಧಾನ್ಯಗಳಲ್ಲಿ ರಚಿಸಲಾಗಿದೆ. ಸಾಹಿತ್ಯ ಸಮ್ಮೇಳನ ನಡೆಯುವ 6,7 ಮತ್ತು 8ರಂದು ಸಂಜೆ 7 ಗಂಟೆಯಿಂದ 10 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮತ್ತು ನಾವಾಡುವ ನುಡಿಯೇ ಕನ್ನಡ ನುಡಿ ಶಿರ್ಷಿಕೆಯಲ್ಲಿ ಚಲನಚಿತ್ರಗಳಲ್ಲಿ ಕವಿಗಳ ರಚಿಸಿದ ಕವನಗಳನ್ನ ಈ ಕಾರ್ಯಕ್ರಮದಲ್ಲಿ ಬಳಿಸಲಾಗುವದು ಎಂದು ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ತಿಳಿಸಿದ್ದರು.

English summary
Kannada Sahitya Sammelana 2023: Kannada Sahitya Sammelana 2023 in Haveri, Attractions of 86th Kannada Sahitya Sammelana, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X