ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಬ್ಜಿ ಆಡುತ್ತಾ ನೀರಿಗೆ ಬಿದ್ದ; ಹುಬ್ಬಳ್ಳಿಯಲ್ಲಿ ನಾಲ್ವರ ಪ್ರಾಣಕ್ಕೇ ಎರವಾಯ್ತ ಆಟ?

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್ 12: ಹುಬ್ಬಳ್ಳಿಯಲ್ಲಿ ನಿನ್ನೆಯಷ್ಟೆ ನೀರಿನಲ್ಲಿ ಮುಳುಗಿ ನಾಲ್ವರು ಯುವಕರು ಸಾವನ್ನಪ್ಪಿದ್ದಕ್ಕೆ ಪಬ್ಜಿ ಆಟವೇ ಪರೋಕ್ಷ ಕಾರಣ ಎನ್ನಲಾಗುತ್ತಿದೆ.

ನೀರಿಗೆ ಹಾರಿದ ನಾಲ್ವರು ನಿಲ್ಲಿಸಿ ಬಿಟ್ಟರಲ್ಲ ಉಸಿರಾಟ! ನೀರಿಗೆ ಹಾರಿದ ನಾಲ್ವರು ನಿಲ್ಲಿಸಿ ಬಿಟ್ಟರಲ್ಲ ಉಸಿರಾಟ!

ನವೆಂಬರ್ 11 ಸೋಮವಾರ ನದಿಯಲ್ಲಿ ಮುಳುಗಿ ನಾಲ್ವರು ಯುವಕರು ಸಾವನ್ನಪ್ಪಿದ ಘಟನೆ ನಡೆದಿತ್ತು. ಇದೀಗ ಆ ಯುವಕರ ಸಾವಿಗೆ ಪಬ್ಜಿ ಆಡುತ್ತಿದ್ದುದೇ ಕಾರಣ ಎಂಬುದು ತಿಳಿದುಬಂದಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ...

 ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ನಾಲ್ವರು ಸ್ನೇಹಿತರು

ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ನಾಲ್ವರು ಸ್ನೇಹಿತರು

ನಿನ್ನೆ ಸೋಮವಾರ ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮಕ್ಕೆ ಸ್ನೇಹಿತನ ಹುಟ್ಟುಹಬ್ಬ ಆಚರಣೆಗೆ ಪಾರ್ಟಿ ಮಾಡಲು ಏಳು ಜನ ಸ್ನೇಹಿತರು ಬಂದಿದ್ದು, ಆ ಸಮಯದಲ್ಲಿ ಕೆರೆಗೆ ಈಜಲು ಹೋಗಿದ್ದರು. ಅದರಲ್ಲಿ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಮೂರು ಮಂದಿ ಬದುಕುಳಿದಿದ್ದರು. ಹುಬ್ಬಳ್ಳಿಯ ಮಚ್ಚಿ ಮಾರ್ಕೆಟ್ ನಿವಾಸಿಗಳಾದ 18 ವರ್ಷದ ಜುನೈದ್, ಸುಭಾನಿ, ಐಯಾನ್, ಸುಭಾನಿ ಮೃತರು ಎಂದು ಗುರುತಿಸಲಾಗಿತ್ತು. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಟೆಕ್ಕಿಯನ್ನು ನಿಮ್ಹಾನ್ಸ್‌ವರೆಗೆ ಕರೆದೊಯ್ದ ಆನ್‌ಲೈನ್ ಡೇಟಿಂಗ್ ಆ್ಯಪ್ಟೆಕ್ಕಿಯನ್ನು ನಿಮ್ಹಾನ್ಸ್‌ವರೆಗೆ ಕರೆದೊಯ್ದ ಆನ್‌ಲೈನ್ ಡೇಟಿಂಗ್ ಆ್ಯಪ್

 ಸಾವಿಗೆ ಕಾರಣ ಪಬ್ಜಿ?

ಸಾವಿಗೆ ಕಾರಣ ಪಬ್ಜಿ?

ನಿನ್ನೆ ನಡೆದ ಈ ದುರಂತಕ್ಕೆ ಈಗ ತಿರುವು ದೊರೆತಿದೆ. ನೀರಿನಲ್ಲಿ ಮುಳುಗಿ ಯುವಕರು ಸಾವನ್ನಪ್ಪಿದ್ದಕ್ಕೆ ಮೂಲ ಪಬ್ಜಿ ಆಟ ಆಡುತ್ತಿದ್ದುದು ಕಾರಣ ಎಂಬುದು ತಿಳಿದುಬಂದಿದೆ. ಹುಬ್ಬಳ್ಳಿಯ ಸಮೀಪದ ಗುಡಿಹಾಳ ಗ್ರಾಮಕ್ಕೆ ಪಾರ್ಟಿ ಮಾಡಲು ಹೋಗಿದ್ದ ಸ್ನೇಹಿತರಲ್ಲಿ ಒಬ್ಬ ಪಬ್ ಜಿ ಆಟ ಆಡುತ್ತಾ ನೀರಿನಲ್ಲಿ ಆಯ ತಪ್ಪಿ ಬಿದ್ದಿದ್ದಾನೆ. ಅವನನ್ನ ರಕ್ಷಿಸಲು ಮುಂದಾಗಿದ್ದ ಇನ್ನೊಬ್ಬ ಗೆಳೆಯನೂ ನೀರಿಗೆ ಹಾರಿದ್ದಾನೆ.

 ಒಬ್ಬನ ಉಳಿಸಲು ಹೋಗಿ ನಾಲ್ವರು ಬಿದ್ದರು

ಒಬ್ಬನ ಉಳಿಸಲು ಹೋಗಿ ನಾಲ್ವರು ಬಿದ್ದರು

ಹೀಗೆ ಒಬ್ಬರಾದ ಮೇಲೆ ಒಬ್ಬರಂತೆ ಒಬ್ಬನನ್ನು ಉಳಿಸಲು ಹೋಗಿ ನಾಲ್ಕು ಜನ ಸ್ನೇಹಿತರು ನೀರಿಗೆ ಬಿದ್ದಿದ್ದಾರೆ. ಅವರೆಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನುಳಿದ ಸ್ನೇಹಿತರು ಪೊಲೀಸರ ಮುಂದೆ ಈ ಸತ್ಯವನ್ನು ತಿಳಿಸಿದ್ದಾರೆ. ಮೃತರೆಲ್ಲರೂ ಹುಬ್ಬಳ್ಳಿಯ ಗಣೇಶ ಪೇಟ್ ನಿವಾಸಿಗಳಾಗಿದ್ದು, ಪಬ್ ಜಿ ಗೇಮ್ ನಲ್ಲಿ ಮಗ್ನವಾಗಿದ್ದ ಯುವಕನ ಹೆಸರು ಸೋಹೆಲ್ ಸಯ್ಯದ್ ಎಂಬುದು ತಿಳಿದುಬಂದಿದೆ.

 ಸ್ನೇಹಿತರ ಉಳಿಸಲಾಗದೆ ಗೋಳಿಟ್ಟ ಸ್ನೇಹಿತರು

ಸ್ನೇಹಿತರ ಉಳಿಸಲಾಗದೆ ಗೋಳಿಟ್ಟ ಸ್ನೇಹಿತರು

ನೀರು ಪಾಲಾದ ಸ್ನೇಹಿತರನ್ನು ಉಳಿಸಿಕೊಳ್ಳಲು ಎಷ್ಟು ಪ್ರಯತ್ನ ಮಾಡಿದರೂ ಅದು ಫಲಕಾರಿಯಾಗಿಲ್ಲ ಎಂದು ಜೊತೆಗಿದ್ದ ಸ್ನೇಹಿತರು ಗೋಳಿಟ್ಟಿದ್ದಾರೆ. ಸ್ಥಳೀಯರು ಅಗ್ನಿ ಶಾಮಕ ದಳ ಹಾಗೂ ಹುಬ್ಬಳ್ಳಿ ಗ್ರಾಮೀಣ ಪೊಲೀಸರಿಗೆ ನಿನ್ನೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮನಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರ ತೆಗೆದಿದ್ದರು.

English summary
Four youth have died in Hubballi due to the Pabg game,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X