ಉದ್ಯಮಗಳು ಬೆಳೆದರೆ ಯವಕರಿಗೆ ಹೆಚ್ಚಿನ ಉದ್ಯೋಗಗಳು: ಶೆಟ್ಟರ್

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಡಿಸೆಂಬರ್. 04 : ಕರ್ನಾಟಕದಲ್ಲಿ ಹೆಚ್ಚು ಉದ್ಯಮಗಳು ಬೆಳೆದರೆ ಯವಕರಿಗೆ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಮಾಜಿ ಮುಖ್ಯಮಂತ್ರಿ, ವಿರೋದ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಧಾರವಾಡ ಜಿಲ್ಲಾಡಳಿತ ಸಹಯೋಗದಲ್ಲಿ ಏರ್ಪಡಿಸಲಾಗಿರುವ ಇನ್‌ಕಾಮೆಕ್ಸ್-2016 ಬೃಹತ್ ಕೈಗಾರಿಕೆ ವಸ್ತು ಪ್ರದರ್ಶನ ಹಾಗೂ ಮಳಿಗೆಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಜಗದೀಶ್ ಶೆಟ್ಟರ್ ಅವರು,

'ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗೆ ಪೂರಕವಾದ ವಾತಾವರಣವಿದ್ದು ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಿನ ಕೈಗಾರಿಕೆಗಳು ಆರಂಭವಾಗಬೇಕಿದೆ' ಎಂದರು.

Ex CM Jagadish Shetter inagurated incomex-2016 industrial exhibition at hubballi

ಕೈಗಾರಿಕಾ ವಸ್ತು ಪ್ರರ್ದಶನಕ್ಕಾಗಿ ಶಾಶ್ವತ ಜಾಗವಿದ್ದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯವರು ನಿರಂತರವಾಗಿ ಕೈಗಾರಿಕಾ ವಸ್ತು ಪ್ರರ್ದಶನಗಳನ್ನು ಹಮ್ಮಿಕೊಳ್ಳಬೇಕು. ಇದಕ್ಕಾಗಿ ಸರಕಾರದಿಂದ ಸಿಗುವ ನೆರವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ದೇಶದ ಆರ್ಥಿಕತೆಯಲ್ಲಿ ಸಣ್ಣ ಹಾಗೂ ಮದ್ಯಮ ಕೈಗಾರಿಕೆಗಳ ಕೊಡುಗೆ ಅಪಾರವಾಗಿದೆ. ಇಂತಹ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ಸಿಗಬೇಕು.

Ex CM Jagadish Shetter inagurated incomex-2016 industrial exhibition at hubballi

ಇಂದು ಭಾರತ ಜಾಗತಿಕವಾಗಿ ಪ್ರಬಲ ರಾಷ್ಟ್ರವಾಗಿ ರೂಪಗೊಳ್ಳುತ್ತಿದ್ದು ಬ್ರಿಕ್ಸ ಹಾಗೂ ಜಿ-20 ರಾಷ್ರ್ಟಗಳ ಗುಂಪಿನಲ್ಲಿ ಅಗ್ರಗಣ್ಯವಾಗಿದೆ.

ಮೇಕ್ ಇನ್ ಇಂಡಿಯಾ ಹಾಗು ಸ್ಟಾರ್ಟ ಅಪ್ ನಂತಹ ಕಾರ್ಯಕ್ರಮಗಳು ಕೈಗಾರಿಕೆ ಅಭಿವೃದ್ದಿಗೆ ಸಹಾಯಕವಾಗಿವೆ. ಹುಬ್ಬಳ್ಳಿ-ಧಾರವಾಡವನ್ನು ಕೈಗಾರಿಕಾ ಸ್ನೇಹಿ ನಗರವನ್ನಾಗಿ ಬಿಂಬಿಸುವ ಕೆಲಸವನ್ನು ಕರ್ನಾಟಕ ವಾಣಿಜ್ಯೋದ್ಯಮ ಸಂಸೆ ಮಾಡಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಇನ್‌ಕಾಮೆಕ್ಸ್-2016ನ ಅಂಗವಾಗಿ ಬಿಎಸ್ಎನ್ ಎಲ್ ಒದಗಿಸಿರುವ ಉಚಿತ ವೈಪೈ ಸೌಲಭ್ಯ ಸಹ ಉದ್ಘಾಟಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ex CM Jagadish Shetter inagurated incomex-2016 industrial exhibition at hubballi, on December 03.
Please Wait while comments are loading...