Power Cut in Hubli–Dharwad: ನವೆಂಬರ್ 26ರಂದು ಧಾರವಾಡದ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ- ಎಲ್ಲೆಲ್ಲಿ? ಮಾಹಿತಿ, ವಿವರ
ಧಾರವಾಡ, ನವೆಂಬರ್ 25: ಧಾರವಾಡದ ಲಕಮನಹಳ್ಳಿ ವ್ಯಾಪ್ತಿಯಲ್ಲಿ ಬರುವ 110 ಕೆವಿ ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನವೆಂಬರ್ 26 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ 3ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳಲಿದೆ. ಈ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ನವೆಂಬರ್ 26 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಪ್ರದೇಶಗಳು
ಹುಬ್ಬಳ್ಳಿ-ಧಾರವಾಡದ ಹೆಸ್ಕಾಂ ಹೊರಡಿಸಿದ ಪ್ರಕಟಣೆಯಂತೆ, ಲಕ್ಷ್ಮೀನಗರ, ಗಾಂಧಿ ನಗರ, ಕಲಘಟಗಿ ರಸ್ತೆ, ಟೋಲ್-ನಾಕಾ, ಮಾಳಮಡ್ಡಿ, ನಗರಕರ ಕಾಲೋನಿ, ಬಾಗಲಕೋಟ ಪೆಟ್ರೋಲ ಪಂಪ್, ರಾಜೀವಗಾಂಧಿ ನಗರ, ಸರಸ್ವತಿನಗರ, ತೇಜಸ್ವಿನಗರ, ಸಂಗೊಳ್ಳಿ ರಾಯಣ್ಣ ನಗರ, ಗಿರಿನಗರ, ರಜತಗಿರಿ, ಸಪ್ತಗಿರಿ, ವೈಎಸ್ ಕಾಲೋನಿ, ಲಕ್ಕಮ್ಮನಹಳ್ಳಿ ಕಕ್ಕಯ್ಯಾ ನಗರ, ಗುರುದೇವ ನಗರ, ವಿದ್ಯಾಗಿರಿ ಭಾಗಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಲಿದೆ.

ಗಾರ್ಡನ್ ಪಾಲಿಮರ, ಜೆಎಸ್ಎಸ್ ಮಾದರಮಡ್ಡಿ, ಗೋಪಾಲಪುರ, ದಾನೇಶ್ವರಿ ನಗರ, ಸನ್ಮತಿ ಮಾರ್ಗ, ಸ್ಟೇಶನ್ ರೋಡ್, ನುಗ್ಗಿಕೇರಿ, ವಿವೇಕಾನಂದ ನಗರ, ಕೆಎಮ್ಪಿ, ವೆಂಕಟೇಶ್ವರ, ಸೋಮೇಶ್ವರ, ನವಲೂರ, ಲಕ್ಕಮ್ಮನಹಳ್ಳಿ ಕೈಗಾರಿಕಾ ಪ್ರದೇಶ, ರಾಯಾಪುರ ಕೈಗಾರಿಕಾ ಪ್ರದೇಶ, ಜನ್ನತ ನಗರ, ಲಕ್ಷ್ಮೀಸಿಂಗನಕೇರಿ, ಪಿಬಿ ರಸ್ತೆ, ಮೂಗಬಸವೇಶ್ವರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸಂಗಮ ಸರ್ಕಲ್, ಲೈನ್ ಬಜಾರ್, ದರೋಗಾ ಓಣಿ, ತುಪ್ಪದ ಓಣಿ, ಸೌದಾಗರ ಗಲ್ಲಿ, ಹೊಸ ಎಲ್ಲಾಪುರ, ಜೈ ಕೆಫೆ ಸರ್ಕಲ್, ನುಚ್ಚಂಬ್ಲಿ ಭಾವಿ, ದುಂಡಿ ಓಣಿ, ಯಲಿಗಾರ ಓಣಿ, ಭೂಸಪ್ಪ ಚೌಕ್, ಶಿವಾನಂದ ನಗರ, ಚಪ್ಪರ್‍ಬಂದ್ ಕಾಲೋನಿ, ರಾಮನಗರ, ಟಿಕಾರೆ ರೋಡ್, ಮಾರ್ಕೆಟ್ ಪೋಲಿಸ್ ಸ್ಟೇಶನ್, ಸಿಬಿಟಿ, ಓಲ್ಡ್ ಬಸ್ಟ್ಯಾಂಡ್, ರಿಗಲ್ ಸರ್ಕಲ್, ಟಿಪ್ಪು ಸರ್ಕಲ್, ಭಾರತ ಸ್ಕೂಲ್, ಗ್ರಾಸ್ ಮಾರ್ಕೆಟ್, ಕಾಮತ ಹೊಟೆಲ್, ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ, ಸೋಮಾಪುರ, ಗೋವನಕೊಪ್ಪದಲ್ಲಿ ವಿದ್ಯುತ್ ಕಡಿತವಾಗಲಿದೆ.

ರಾಯಾಪುರ ಆಶ್ರಯ ಕಾಲೋನಿ, ವಿಠ್ಠಲ ನಗರ, ಮಯೂರ ಆದಿತ್ಯ ರೆಸಾರ್ಟ, ರೇಷ್ಮೆ ಇಲಾಖೆ, ಇಸ್ಕಾನ್, ದೊಂಗಡಿಕೊಪ್ಪ ಗ್ರಾಮ, ನಿಗದಿ, ದೇವರ ಹುಬ್ಬಳ್ಳಿ, ಕಲಕೇರಿ, ಹಳ್ಳಿಗೇರಿ, ಮನಸೂರು ಮತ್ತು ಮನಗುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳು, ರಾಯಾಪುರ ಗ್ರಾಮ, ರಾಯಾಪುರ ಮತ್ತು 110ಕೆವಿ. ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications