• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿಯಲ್ಲಿ ಬಿಸಿ ತುಪ್ಪದಂತೆ ಮಾರಾಟವಾಯ್ತು ಈಜಿಪ್ಟ್ ಈರುಳ್ಳಿ

By ಹುಬ್ಬಳ್ಳಿ ಪ್ರತಿನಿಧಿ
|

ಹುಬ್ಬಳ್ಳಿ, ಡಿಸೆಂಬರ್ 6: ಏಷ್ಯಾ ಖಂಡದಲ್ಲೇ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎನ್ನುವ ಕೀರ್ತಿ ಹೊಂದಿರುವ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಈಜಿಪ್ಟ್ ದೇಶದಿಂದ ಈರುಳ್ಳಿ ಬಂದಿದ್ದು, ಬಿಸಿ ತುಪ್ಪದ ಹಾಗೆ ಮಾರಾಟವಾಗಿದೆ. ವ್ಯಾಪಾರಸ್ಥರು ನಾ ಮುಂದು ತಾ ಮುಂದು ಎಂದು ದಾಖಲೆಯ ಬೆಲೆ ನೀಡಿ "ಕೆಂಪು ಸುಂದರಿ"ಯನ್ನು ಖರೀದಿ ಮಾಡಿದ್ದಾರೆ.

ಹುಬ್ಬಳ್ಳಿಯ ಎಪಿಎಂಸಿ ಮಾರುಕಟ್ಟೆ ಇತಿಹಾಸದಲ್ಲಿ ಅತೀ ಹೆಚ್ಚು ಬೆಲೆಗೆ ಈ ಬಾರಿ ಕೆಂಪು ಈರುಳ್ಳಿ ಮಾರಾಟವಾಗಿದೆ.

 ಕ್ಷಣಾರ್ಧದಲ್ಲೇ ಈರುಳ್ಳಿ ಖಾಲಿ

ಕ್ಷಣಾರ್ಧದಲ್ಲೇ ಈರುಳ್ಳಿ ಖಾಲಿ

ಹುಬ್ಬಳ್ಳಿಯ ಅಮರಗೋಳ ಜಗಜ್ಯೋತಿ ಬಸವೇಶ್ವರ ಎಪಿಎಂಸಿ ಮಾರುಕಟ್ಟೆಗೆ 25 ಕಂಟೇನರ್ ‌ಗಳಲ್ಲಿ ಈಜಿಪ್ಟ್‌ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದೆ. ಕೆಂಪು ಈರುಳ್ಳಿ ನೋಡಿದ ವ್ಯಾಪಾರಸ್ಥರು ಹೆಚ್ಚಿನ ಬೆಲೆ ನೀಡಿ ಬಿಸಿ ತುಪ್ಪವನ್ನು ಖರೀದ ಮಾಡಿದ ಹಾಗೆ ಕ್ಷಣಾರ್ಧದಲ್ಲಿ ಖರೀದಿ ಮಾಡಿದ್ದಾರೆ.

ಟರ್ಕಿ ಟು ಮಂಗಳೂರು; ಬೆಲೆ ಕಡಿವಾಣಕ್ಕೆ ಬಂದ ಈರುಳ್ಳಿ ಬೆಲೆಯೂ ಹೀಗಾಯ್ತು ನೋಡಿ!

 ಅತಿ ಹೆಚ್ಚಿನ ಬೆಲೆಗೆ ಮಾರಾಟದಿಂದ ದಾಖಲೆ

ಅತಿ ಹೆಚ್ಚಿನ ಬೆಲೆಗೆ ಮಾರಾಟದಿಂದ ದಾಖಲೆ

ಈಜಿಪ್ಟ್ ನಿಂದ ಬಂದ ಈರುಳ್ಳಿ ಎಪಿಎಂಸಿ ಇತಿಹಾಸದಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುವ ಮೂಲಕ ನೂತನ ದಾಖಲೆಯನ್ನು ಮಾಡಿದೆ. ಕ್ವಿಂಟಲ್ ‌ಗೆ 12,000ಕ್ಕೆ ಮಾರಾಟವಾಗಿದೆ. ಈ ಹಿಂದೆ, ಅಂದರೆ ನಾಲ್ಕೈದು ದಿನಗಳ ಹಿಂದೆ ಮೊದಲ ಬಾರಿಗೆ ಕ್ವಿಂಟಲ್ ಈರುಳ್ಳಿ 10,500 ಗಡಿ ದಾಟುವ ಮೂಲಕ ದಾಖಲೆ ಮಾಡಿದ್ದು, ಆ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ‌ಮಾಡಿದೆ.

 ಅತಿವೃಷ್ಠಿಯಿಂದ ಈರುಳ್ಳಿ ಬೆಳೆ ಹಾನಿ

ಅತಿವೃಷ್ಠಿಯಿಂದ ಈರುಳ್ಳಿ ಬೆಳೆ ಹಾನಿ

ಉತ್ತರ ಕರ್ನಾಟಕದಲ್ಲಿ ಈ ಬಾರಿ ಅತಿವೃಷ್ಠಿ ಸಂಭವಿಸಿ ಭಾರೀ ಪ್ರಮಾಣದಲ್ಲಿ ಬೆಳೆ ಹಾನಿಯಾಗಿತ್ತು. ಉತ್ತರ ಕರ್ನಾಟಕದ ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಈ ಮಾರುಕಟ್ಟೆಗೆ ಈರುಳ್ಳಿ ಬರುತ್ತಿತ್ತು. ಆದರೆ ಈ ಕಡೆಗಳಲ್ಲಿ ಈರುಳ್ಳಿ ಬೆಳೆ ಬಹುತೇಕ ನಾಶವಾಗಿದ್ದು, ನಿರೀಕ್ಷೆ ಮಾಡಿದಷ್ಟು ಈರುಳ್ಳಿ ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಈರುಳ್ಳಿ ಬೆಲೆ ಗಗನಕ್ಕೇರಿದೆ.

ದಾಖಲೆ ಬರೆದ ಈರುಳ್ಳಿ ದರ; ಕೆ. ಜಿ. ಗೆ 180 ರೂ.!

 ನಿನ್ನೆ 180 ರೂ ತಲುಪಿದ್ದ ಈರುಳ್ಳಿ

ನಿನ್ನೆ 180 ರೂ ತಲುಪಿದ್ದ ಈರುಳ್ಳಿ

ಬೆಂಗಳೂರು, ಹೈದರಾಬಾದ್‌, ಕೋಲ್ಕತ್ತಾಗೂ ಹುಬ್ಬಳ್ಳಿಯಿಂದ ಈರುಳ್ಳಿ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈರುಳ್ಳಿ ಕೊರತೆ ಉಂಟಾಗಿದೆ. ಹೀಗಾಗಿ ಬಹಿರಂಗ ಹರಾಜಿನಲ್ಲಿ ಈರುಳ್ಳಿ ದಾಖಲೆ ಬೆಲೆಗೆ ಮಾರಾಟವಾಗಿದೆ.

English summary
Onion imported from egypt came to apmc yard of Hubballi and sold as hot ghee
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X