ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ
ಹುಬ್ಬಳ್ಳಿ, ಜುಲೈ 9: ಕುಡಿದ ಮತ್ತಿನಲ್ಲಿ ಗ್ರಾಮ ಪಂಚಾಯತಿಯ ವಾಟರ್ ಮ್ಯಾನ್ ಇಬ್ಬರು ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಕುಂದಗೋಳ ತಾಲೂಕಿನ ಕಮಡೋಳಿ ಗ್ರಾಮದಲ್ಲಿ ನಡೆದಿದೆ.
ಕಮಡೋಳಿ ಗ್ರಾಮ ಪಂಚಾಯಿತಿ ವಾಟರ್ ಮ್ಯಾನ್ ಹುಸೇನ್ ಸಾಠಬ್ ದಂಡಿನ (60) ಎಂಬಾತನೇ ಕೃತ್ಯ ಎಸಗಿರುವ ಆರೋಪಿ. ಈತ ಶನಿವಾರ ಆಟವಾಡುತ್ತಿದ್ದ11 ವರ್ಷದ ಶಾಲಾ ಬಾಲಕಿಯರಿಬ್ಬರನ್ನು ಗ್ರಾಮದ ಚಾವಡಿಯೊಳಗೆ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಸಂಜೆ ವಿಷಯ ಬೆಳಕಿಗೆ ಬರುತ್ತಿದಂತೆ ಬಾಲಕಿಯರ ಪೋಷಕರು ಕುಂದಗೋಳ ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸದ್ಯ ಬಾಲಕಿಯರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications