ಡಿಕೆಶಿ ತರಹ ಲೀಡರ್ ಆಗ್ಬೇಕು ಅಂದ್ರೆ ಕಾರ್ಯಕರ್ತರು ಏನ್ಮಾಡ್ಬೇಕು?

Recommended Video

      ತಮ್ಮ ಯಶಸ್ಸಿನ ಗುಟ್ಟನ್ನ ಬಿಟ್ಟುಕೊಟ್ಟ ಡಿ ಕೆ ಶಿವಕುಮಾರ್ | Oneindia kannada

      ಹುಬ್ಬಳ್ಳಿ, ಮೇ 8:ಕ್ಷೇತ್ರದ ಪ್ರತಿ ಮತಗಟ್ಟೆಗಳಲ್ಲಿ ಲೀಡ್ ತಂದು ಕೊಟ್ಟವರು ನನ್ನ ತರಹ ಲೀಡರ್ ಆಗುತ್ತಾರೆ ಎಂದು ಸಚಿವ ಡಿಕೆ ಶಿವಕುಮಾರ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.

      ಪ್ರಚಾರದ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಬಿಳಿಬಟ್ಟೆ ತೊಟ್ಟಾಕ್ಷಣ ಯಾರು ಲೀಡರ್ ಆಗಲು ಸಾದ್ಯವಿಲ್ಲ, ಬೂತ್‌ಗಳಿಂದ ಲೀಡ್ ತಂದುಕೊಡಬೇಕು ಎಂದು ಕುಂದಗೋಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಿದರು.

      ಬಿಳಿ ಬಟ್ಟೆ ತೊಟ್ಟು ನನ್ನ ಜೊತೆ ಬಂದರೆ ನಾನು ಅವರನ್ನು ನಂಬುದುವುದಿಲ್ಲ. ಯಾರು ಏನೇ ಹೇಳಿದರು ನೀವು ಎಲ್ಲರ ಮನೆಗೆ ಹೋಗಿ ಪ್ರಚಾರ ಮಾಡಲೇಬೇಕು. ಕ್ಷೇತ್ರದಲ್ಲಿ ಕುಸುಮಾ ಶಿವಳ್ಳಿಯವರನ್ನ ಗೆಲ್ಲಿಸುವುದು ನಮ್ಮ ಜವಾಬ್ದಾರಿ ಎಂದರು.

      DKS reveals his success Mantra with Congress workers

      ಬಿಜೆಪಿಯ ಸ್ಥಳೀಯ ನಾಯಕರಿಗೆ ಆಹ್ವಾನ ಕೊಡುತ್ತೇನೆ, ನಮ್ಮ ಪಕ್ಷದ ಜೊತೆಗೆ ನೀವು ಕೈ ಜೋಡಿಸಬೇಕು ಎಂದರು. ಈ ಚುನಾವಣೆ ನಡೆಯುತ್ತಿರುವುದು, ಮೋದಿಗಾಗಿ ಅಲ್ಲ. ಇಲ್ಲಿ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಅಭ್ಯರ್ಥಿಗಳಲ್ಲ.

      ಇಲ್ಲಿ ನಡೆಯುತ್ತಿರುವುದು ಸಿ.ಎಸ್.ಶಿವಳ್ಳಿಯವರ ಚುನಾವಣೆ, ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನ ಇಟ್ಟುಕೊಂಡು ಚುನಾವಣೆ ಮಾಡುತ್ತೇವೆ. ಮತ ಕೇಳುತ್ತಿದ್ದೇವೆ ಎಂದು ನುಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+