ಧಾರವಾಡ: ಚಿಗರಿಗೆ 4 ವರ್ಷದಲ್ಲಿ 5 ಕೋಟಿ ನಷ್ಟ ಆದ್ರೆ, ವಾಯುವ್ಯ ಸಾರಿಗೆಗೆ ಪ್ರತಿದಿನ ಆಗುವ ನಷ್ಟ ಎಷ್ಟು? ವಿವರ ಇಲ್ಲಿದೆ
ಹುಬ್ಬಳ್ಳಿ -ಧಾರವಾಡದಲ್ಲಿ ಚಿಗರಿ, ವಾಯುವ್ಯ ಸಾರಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಹಾಗಾದರೆ ಇವೆರಡು ಸಂಸ್ಥೆಗಳಿಗೆ ಆದ ನಷ್ಟ ಎಷ್ಟು ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಹುಬ್ಬಳ್ಳಿ, ಫೆಬ್ರವರಿ, 24: ಹುಬ್ಬಳ್ಳಿ- ಧಾರವಾಡ ಅವಳಿನಗರದ ಸಾರಿಗೆ ವ್ಯವಸ್ಥೆಗೆ ಅದ್ಯಾವ ವಕ್ರ ದೃಷ್ಟಿ ಬಿದ್ದಿದೆಯೋ ಗೊತ್ತಿಲ್ಲ. ವಿಶ್ವದರ್ಜೆಯ ಸಾರಿಗೆ ಯೋಜನೆಯಾಗಿರುವ ಬಿ.ಆರ್.ಟಿ.ಎಸ್ ಭಾರಿ ನಷ್ಟ ಅನುಭವಿಸುತ್ತಿದೆ. ಮತ್ತೊಂದು ಕಡೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯೂ ಕೂಡ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಹಾಗಾದರೆ ಎರಡೂ ಸಾರಿಗೆಗೂ ಆದ ಒಟ್ಟು ನಷ್ಟ ಎಷ್ಟು ಎಂದು ಇಲ್ಲಿ ತಿಳಿಯಿರಿ.
ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ತ್ವರಿತ ಸಂಚಾರ ಸೇವೆ ನೀಡುವ ಸದುದ್ದೇಶದಿಂದ ಬಿ.ಆರ್.ಟಿ.ಎಸ್. ಉತ್ತಮ ಯೋಜನೆಯನ್ನು ಹಾಕಿಕೊಂಡಿತ್ತು. ಇದು ಕರ್ನಾಟಕದ ಮೊದಲ ವಿಶ್ವದರ್ಜೆಯ ಸಾರಿಗೆ ಸೌಲಭ್ಯ ಹೊಂದಿರುವ ಯೋಜನೆಯಾಗಿದೆ. ಈ ಸಂಸ್ಥೆ ಹುಬ್ಬಳಿ- ಧಾರವಾಡ 22 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ.

ಚಿಗರಿ ಸಂಸ್ಥೆಗೆ ಆದ ನಷ್ಟದ ವಿವರ
ಆದರೆ ಕೇವಲ ನಾಲ್ಕು ವರ್ಷಗಳ ಅಂತರದಲ್ಲಿ ಈ ಸಂಸ್ಥೆಗೆ 5 ಕೋಟಿಗೂ ಅಧಿಕ ನಷ್ಟ ಉಂಟಾಗಿರುವುದು ವರದಿಯಲ್ಲಿ ಬಹಿರಂಗವಾಗಿದೆ. ಅಧುನಿಕ ತಂತ್ರಜ್ಞಾನದ ಬಸ್ ಹಾಗೂ ಹೆಚ್ಚುತ್ತಿರುವ ಇಂಧನ ದರದ ನಡುವೆಯೂ ಕಡಿಮೆ ದರದಲ್ಲಿ ಬಸ್ ಸಂಚಾರ ಮಾಡುತ್ತಿರುವುದು ನಷ್ಟಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ವಾಯುವ್ಯ ಸಾರಿಗೆಗೆ ಆದ ನಷ್ಟದ ವಿವರ
ಇನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಕೂಡ ದಿನಕ್ಕೆ ಎರಡು ಕೋಟಿಯಷ್ಟು, ಅಂದರೇ ತಿಂಗಳಿಗೆ 60 ಕೋಟಿ ಆರ್ಥಿಕ ನಷ್ಟ ಅನುಭವಿಸುತ್ತಿದೆ. ಅಲ್ಲದೆ ಚಿಗರಿಗೆ ಆರ್ಥಿಕ ನಷ್ಟದಿಂದ ನಿರ್ವಹಣೆಯ ಹೊರೆಯಾದರೇ. ವಾಯುವ್ಯ ಸಾರಿಗೆಗೆ ಸಿಬ್ಬಂದಿ ವೇತನ, ಸೇವಾ ಭದ್ರತೆ ನೀಡುವುದು ಕೂಡ ಕಷ್ಟವಾಗಿದೆ. ಅಲ್ಲದೇ ಈಗಾಗಲೇ ಅರ್ಧ ವೇತನದಲ್ಲಿಯೇ ಸಾರಿಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಹೆಚ್ಚಿನ ಅನುದಾನದ ಜೊತೆಗೆ ಯೋಜನೆ ಬಲಪಡಿಸುವ ಮತ್ತಷ್ಟು ನಿರ್ಧಾರವನ್ನು ಕೈಗೊಳ್ಳಬೇಕಿದೆ.

ಒಟ್ಟಿನಲ್ಲಿ ಚಿಗರಿಗೆ ಆರ್ಥಿಕ ನಷ್ಟವಾದರೇ, ವಾಯುವ್ಯ ಸಾರಿಗೆಗೆ ಸಿಬ್ಬಂದಿಗಳಿಗೆ ವೇತನ ನೀಡುವುದೇ ಒಂದು ದೊಡ್ಡ ಸವಾಲಾಗಿದೆ. ಎರಡು ಯೋಜನೆ ಪ್ರತ್ಯೇಕವಾಗಿದ್ದರೂ ಕೂಡ ಜನರಿಗೆ ಸೇವೆ ನೀಡುತ್ತಿರುವುದು ಮಾತ್ರ ಒಂದೆ ಆಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಧಾರವನ್ನು ಕೈಗೊಂಡು ಆರ್ಥಿಕ ವ್ಯವಸ್ಥೆ ಸುಧಾರಣೆಗೆ ಹೊಸ ಯೋಜನೆ ಜಾರಿಗೆ ತರಬೇಕಿದೆ ಎನ್ನುವ ಆಗ್ರಹಗಳು ಕೇಳಿಬರುತ್ತಿವೆ.












Click it and Unblock the Notifications