Get Updates
Get notified of breaking news, exclusive insights, and must-see stories!

ಧಾರವಾಡದಿಂದ ದಿಂಗಾಲೇಶ್ವರ ಶ್ರೀ ಪಕ್ಷೇತರ ಸ್ಪರ್ಧೆ?: ಏ.2ಕ್ಕೆ ಮಹತ್ವದ ಸಭೆ: ಶ್ರೀಗಳು ಹೇಳಿದ್ದೇನು?

ಹುಬ್ಬಳ್ಳಿ, ಮಾರ್ಚ್ 31: ಧಾರವಾಡ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾಯಿಸಬೇಕೆಂಬ ವಿಚಾರ, ಮುಂದೆ ಇಟ್ಟ ಹೆಜ್ಜೆ ಹಿಂತೆಗೆಯುವ ಮಾತೇ ಇಲ್ಲ. ಗುಡುವಿನೊಳಗೆ ನಮಗೆ ಉತ್ತರ ಸಿಕ್ಕಿದೆ. ಬಿಜೆಪಿ ಅಭ್ಯರ್ಥಿ ಸೋಲಿಸುವುದು ನಮಗೆ ಅನಿವಾರ್ಯ ಎಂದು ಶ್ರೀ ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.

ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಬದಲಾಯಿಸಬೇಕು ಎಂದು ಮಾರ್ಚ್ 31ರ ಗಡುವು ನೀಡಲಾಗಿತ್ತು. ಈಗಾಗಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಜೋಶಿಯವರ ಬದಲಾವಣೆ ಪ್ರಶ್ನೆಯ ಇಲ್ಲ ಎಂದು ಉತ್ತರಿಸಿದ್ದಾರೆ.

Dharwad Dingaleshwar Swamiji Will Decide to Contest Independent against Pralhad Joshi On April 2nd

ಈ ಮೂಲಕ ಗಡುವಿನೊಳಗೆ ನಮಗೆ ಉತ್ತರ ಸಿಕ್ಕಿದ್ದು, ಅನಿವಾರ್ಯವಾಗಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ. ನಾವು ಧಾರವಾಡದಿಂದ ಪಕ್ಷೇತರವಾಗಿ ಕಣಕ್ಕಿಳಿಯುವುದು, ಜೋಶಿಯವರನ್ನ ಸೋಲಿಸುವುದು ಅನಿವಾರ್ಯ. ನಮಗೆ ಕ್ಷೇತ್ರದ ಮತದಾರರ ಹೈಕಮಾಂಡ್. ಜೋಶಿಯವರನ್ನು ಸೋಲಿಸುತ್ತೇನೆ ಎಂದು ಹುಚ್ಚುತನದಲ್ಲಿ ಮಾತನಾಡುವುದಿಲ್ಲ. ಅದನ್ನು ಮತದಾರರ ತೀರ್ಮಾನಿಸುತ್ತಾರೆ ಎಂದು ಶ್ರೀಗಳು ಹೇಳಿದರು.

ಕ್ಷಮಿಸುವಂತೆ ಮನವಿ: ಶ್ರೀಗಳ ಸ್ಪಷ್ಟನೆ ಏನು?

ಪಕ್ಷೇತರ ಕಣ್ಣಕ್ಕೆ ಇಳಿಯುವುದಾಗಿ ಹೇಳುತ್ತಿದ್ದಂತೆ ನಮ್ಮ ಮೇಲೆ ಒತ್ತಡಕ್ಕೆ ಮುಂದಾದರೂ, ಕ್ಷಮೇ ಮಾಡಿ ಜೋಶಿವಯರಿಗೆ ಅವರಿಗೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು. ಕಳೆದ ಹತ್ತು ವರ್ಷಗಳಿಂದ ನಾವು ಜೋಶಿವಯರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಅವರಿಗೆ ಗೌರವ ಕೊಟ್ಟಿದ್ದೇವೆ. ಆದರೆ ಈಗಲೂ ಬೆಂಬಲ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದರು.

ನಮ್ಮ ನೀರ್ಧಾರ ಪ್ರಕಟಿಸುತ್ತಿದ್ದಂತೆ ಬಹುಸಂಖ್ಯಾತ ನಾಯಕರು ದೂರವಾಣಿ ಕರೆ ಮಾಡಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೆದರಿಕೆ ಹಾಕುತ್ತಾರೆ ಎಂದು ಬಹುಸಂಖ್ಯಾತರು ನಮಗೆ ಕರೆ ಮಾಡಿ ಹೇಳಿದರು. ಆದರೆ ನಾವು ಮುಂದೆ ಇಟ್ಟ ಹೆಜ್ಜೆ ಹಿಂದೆ ತೆಗೆದುಕೊಳ್ಳುವ ಮಾತೇ ಇಲ್ಲ. ಜೋಶಿಯವರ ವಿಚಾರದಲ್ಲಿ ನಾವು ಹೇಳಿದಂತೆ ನಡೆದುಕೊಳ್ಳುತ್ತೇವೆ.

Dharwad Dingaleshwar Swamiji Will Decide to Contest Independent against Pralhad Joshi On April 2nd

ಆಮಿಷಕ್ಕೆ ಒಳಗಾಗಲೇ ಸಮರ ಸಾರುತ್ತೇವೆ

ಒತ್ತಡಕ್ಕೆ ಮಣಿಯಬಹುದೇ ಎಂಬ ದುಗುಡ ಭಕ್ತರಲ್ಲಿದೆ. ನಾವು ಯಾವುದೇ ಆಮೀಷಗಳಿಗೆ ಒಳಗಾಗುದಿಲ್ಲ. ಚುನಾವಣೆ ಮುಗಿಯುವ ವರೆಗೂ ಅವರ ವಿರುದ್ಧ ಸಮರ ಸಾರುತ್ತೇವೆ. ನೊಂದರವರ ಧ್ವನಿಯಾಗಿ ನಾವು ಕೆಲಸ ಮಾಡುತ್ತೇವೆ. ಲಿಂಗಾಯತರೇ ಬಹುಸಂಖ್ಯಾತರಿರುವ ಧಾರವಾಡದಲ್ಲಿ ಅವರ ಮಾತ್ರಲ್ಲವಲ್ಲದೇ ಎಲ್ಲ ಸಮಾಜದವರು ಪ್ರಹ್ಲಾದ್ ಜೋಶಿಯವರಿಂದ ನೊಂದಿದ್ದಾರೆ ಎಂದು ಶ್ರೀಗಳು ಆರೋಪಿಸಿದರು.

ಏಪ್ರಿಲ್ 2ರಂದು ಶ್ರೀಗಳ ಮಹತ್ವದ ಸಭೆ

ಮುಂದಿನ ತಿರ್ಮಾನ ಕುರಿತು ಏಪ್ರಿಲ್ 2ರಂದು ಬೆಳಗ್ಗೆ 10.30ಕ್ಕೆ ಧಾರವಾಡದಲ್ಲಿ ಸಭೆ ಸೇರುತ್ತೆವೆ. ಮಠಾಧಿಪತಿಗಳು ಸ್ವತಂತ್ರರಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಭಕ್ತರ ಜೊತೆ ಚರ್ಚೆ ಮಾಡುತ್ತೇವೆ. ನಂತರ ಮುಂದಿನ ನಡೆ ಬಗ್ಗೆ ತಿಳಿಸುತ್ತೇವೆ. ನಾವು ನಮ್ಮ ನಿಲುವು ಅಚಲವಾಗಿದೆ. ನಾವು ಯಾವ ಪಕ್ಷದ ಪರ ಹಾಗೂ ವಿರೋಧಿಗಳು ಅಲ್ಲ.

ಪ್ರಹ್ಲಾದ್ ಜೋಶಿ ವಿರುದ್ಧ ಗುಡುಗು

ಧಾರವಾಡದಿಂದ ಕಣಕ್ಕಿಳಿಯುವುದು ರಾಜ್ಯದ ಬೇರೆ ರಾಜ್ಯದ ಯಾವುದೇ ಮಠದವರಿಗೆ ಸಂಬಂಧಿಸದ್ದಲ್ಲ ಎಂದು ಸ್ಪಷ್ಟಪಡಿಸಿ ಸ್ವಾಮೀಜಿಗಳು, ಕಳೆದ ಹತ್ತು ವರ್ಷಗಳನ್ನು ಜೋಶಿಯವರಿಗೆ ಸಮಯ ಕೊಟ್ಟಿದ್ದೇವೆ. ಆದರೆ ಅವರು ಚುನಾವಣೆ ಬಂದಾಗ ಕ್ಷಮೇ ಕೇಳುತ್ತಾರೆ. ಚುನಾವಣೆ ಬಳಿಕ ನಿಮ್ಮನ್ನ ನೋಡಿಕೊಳ್ಳುತ್ತೀನಿ ಎಂದು ಹೇಳುತ್ತಾರೆ. ಅದಕ್ಕೆ ಈ ಬಾರಿ ಅವರಿಗೆ ಅವಕಾಶ ಕೊಡುವ ಪ್ರಮೇಯವೇ ಇಲ್ಲ ಎಂದು ಪ್ರಹ್ಲಾದ್ ಜೋಶಿ ವಿರುದ್ಧ ಶ್ರೀಗಳು ಕಿಡಿ ಕಾರಿದರು.

ಕ್ಷೇತ್ರದಲ್ಲಿರುವ ಬಹುಸಂಖ್ಯಾತ ಲಿಂಗಾಯತ ನಾಯಕರಿಗೆ ಹೇಳಿದ್ದೇನೆ, ನಿಮಗೆ ಆ ಅಭ್ಯರ್ಥಿ ಬೇಕು, ನನಗೆ ಈ ಜಿಲ್ಲೆಯ ಮತದಾರರ ನೋವಿನ ನುಡಿ ಬೇಕು. ಪ್ರಹ್ಲಾದ್ ಜೋಶಿಯವರು ನಮ್ಮನ್ನು ಕೈಹಿಡಿದು ಕರೆದುಕೊಂಡು ಬಂದು ಶಾಸಕರನ್ನಾಗಿ ಮಾಡಿದ್ದಾರೆ ಲಿಂಗಾಯತ ಶಾಕಸರು ಹೇಳುತ್ತಿದ್ದಾರೆ. ಒಂದು ನನೆಪಿರಲಿ ನೀವು ಶಾಸಕರಾಗಲು ಜೋಶಿಯವರು ಕಾರಣವಲ್ಲ ಮತದಾರರು ಎಂದು ತಿಳಿಸಿದರು.

ನಿಮ್ಮನ್ನು ಕೈ ಹಿಡಿಯುವುದು ಅವಕಾಶ, ಪಕ್ಷವೇ ಹೊರತು ಜೋಶಿಯವರಲ್ಲ. ಬಿಜೆಪಿಗೆ ಪ್ರಹ್ಲಾದ್ ಜೋಶಿಯವರು ಅನಿವಾರ್ಯವಾದರೆ. ನಮಗೆ ಇಲ್ಲಿನ ಜನರ ನೊಂದವರು ಅನಿವಾರ್ಯ. ನಮ್ಮ ಮಠಕ್ಕೆ ರಾಜ್ಯಸಭಾ ನಾಯಕರು ಬಂದಿದ್ದರು. ಅವರು, ನಮ್ಮ ನಿರ್ಧಾರ ಕೇಳುವ ಜೊತೆಗೆ ಜೋಶಿಯವರನ್ನು ಕ್ಷಮೇ ಮಾಡಿ ಎಂದು ಕೇಳಿಕೊಂಡರು. ಆಗ ನಮ್ಮ ನಿರ್ಧಾರವೇನೆಂದು ಸ್ಪಷ್ಟಪಡಿಸಿದ್ದೇನೆ.

ಮಠಾಧಿಪತಿಗಳ ಶಕ್ತಿ ದಮನ ಕೆಲಸ ನಡೆದಿದೆ

ಬಸನಗೌಡ್ ಪಾಟೀಲ್ ಯತ್ನಾಳ್ ಅವರು ಹೇಳಿಕೆ ವಿಚಾರ, ಕಲ್ಲು ಹೊಡೆದು ಮುಖಕ್ಕೆ ಸಿಡಿಸಿಕೊಳ್ಳೊದಿಲ್ಲ. ಕೇಂದ್ರ ಸಚಿವರು ನಮ್ಮ ಶಕ್ತಿಯನ್ನ ದಮನ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ಕೆಲಸ ಹಿಂದೆ ಧಾರವಾಡ ಮುರುಘಾಮಠದ ಸ್ವಾಮೀಜಿಗಳ ವಿಚಾರದಲ್ಲಿ ನಡೆದಿದೆ. ಅವರನ್ನು ಹೆದರಿಸುವ ಕೆಲಸ ಮಾಡಿದ್ದಾರೆ ಎಂದು ಆಪಾದಿಸದಿರು.

ಮಠಾಧಿಪತಿಗಳು ತೆಗೆದುಕೊಂಡು ನಿರ್ಧಾರಗಳನ್ನು ಬಹಿರಂಗವಾಗಿ ಹೇಳಲು ಆಗದಂತೆ, ಹೆದರಿಕೆ ವಾತಾವರಣ ನಿರ್ಮಿಸಿದ್ದಾರೆ. ಆದ್ದರಿಮದ ಮತದಾರರು ಇಂತಹವ ಮಟ್ಟ ಹಾಕಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು. ಸ್ವಾಮೀಜಿಗಳು ಮನಸ್ಸು ಮಾಡಿದರೆ ಏನೆಲ್ಲ ಆಗುತ್ತದೆ ಎಂಬುದನ್ನು ಸಾಬೀತು ಮಾಡೋಣ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+