ಧಾರವಾಡದ ಗ್ರಾಹಕರೊಬ್ಬರಿಗೆ ದೋಷಪೂರಿತ ಗೀಜರ್ ಕೊಟ್ಟ ಹರಿಯಾಣ ಮೂಲದ ಕಂಪನಿಗೆ 25 ಸಾವಿರ ರೂ. ದಂಡ
ಧಾರವಾಡದ ಗ್ರಾಹಕೊಬ್ಬರಿಗೆ ದೋಷಪೂರಿತ ಗೀಜರ್ ಮಾರಾಟ ಮಾಡಿದ ಹರಿಯಾಣ ಮೂಲದ ಖಾಸಗಿ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗವು 25,000 ರೂ. ದಂಡ ವಿಧಿಸಿ ಆದೇಶ ನೀಡಿದೆ.
ಧಾರವಾಡ, ಮಾರ್ಚ್, 15: ಧಾರವಾಡದ ಸಾಧುನವರ ಎಸ್ಟೇಟ್‍ನ ಶಿವಕುಮಾರ ಮಠದ ಎನ್ನುವವರು ಆನ್‍ಲೈನ್ ಮೂಲಕ ಹರಿಯಾಣದ ಸೋಮಾನುವಾ ಹೋಮ್ ಇನ್ನೋವೇಷನ್‌ನವರಿಂದ ಗೀಜರ್ ಖರೀದಿಸಿದ್ದರು. 5,399 ರೂಪಾಯಿ ಹಣ ನೀಡಿ ಅಕ್ಟೋಬರ್ 25, 2021ರಂದು ಗೀಜರ್ ಖರೀದಿಸಿದ್ದರು. ಕೇವಲ 15ರಿಂದ 20 ದಿನದಲ್ಲಿ ಆ ಗೀಜರ್ ದೋಷಪೂರಿತ ಅಂತಾ ಗೊತ್ತಾಗಿದೆ. ಇದೀಗ ದೂರುದಾರ ಆರೋಪದ ಮೇರೆಗೆ ಜಿಲ್ಲಾ ಗ್ರಾಹಕರ ಆಯೋಗ ಕಂಪನಿಗೆ ಮಂಗಳವಾರ (ಮಾರ್ಚ್ 14ರಂದು) ದಂಡ ವಿಧಿಸಿ ಆದೇಶ ನೀಡಿದೆ.
ಈ ಬಗ್ಗೆ ಶಿವಕುಮಾರ ಮಠದ ಅವರು ಕಂಪನಿಯವರಿಗೆ ಮೇಲ್ ಮೂಲಕ ದೂರು ಕೊಟ್ಟಿದ್ದರು. 2-3 ಬಾರಿ ರಿಪೇರಿ ಮಾಡಿದ್ದರೂ ಕೂಡ ಗೀಜರ್ ಸರಿಯಾಗಿರಲಿಲ್ಲ. ಬೇರೆ ಗೀಜರ್ ಕೊಡುತ್ತೇವೆ ಅಂತಾ ಹೇಳಿ ಕೊಟ್ಟಿರಲಿಲ್ಲ. ಹಾಗಾಗಿ ತನಗೆ ಮೋಸ ಮಾಡಿದರವ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇದೀಗ ತೀರ್ಪು ನೀಡಿದ ಆಯೋಗ ಕಂಪನಿಗೆ 25,399 ರೂ. ದಂಡ ವಿಧಿಸಿ ಆದೇಶ ನೀಡಿದೆ.

20 ದಿನದಲ್ಲಿ ಕೆಟ್ಟುಹೋದ ಗೀಜರ್
ಈ ದೂರಿನ ಬಗ್ಗೆ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು.ಸಿ.ಹಿರೇಮಠ ಅವರು ಕೂಲಂಕುಷವಾಗಿ ವಿಚಾರಣೆ ನಡೆಸಿದ್ದಾರೆ. ವಾರಂಟಿ ಅವಧಿಯಲ್ಲಿ ಗೀಜರ್ ದೋಷಪೂರಿತ ಅಂತಾ ಕಂಡುಬಂದಿದೆ. ಮತ್ತು ದೂರು ಕೊಟ್ಟರೂ ಆ ದೋಷವನ್ನು ಸರಿಪಡಿಸದೇ ಅಥವಾ ಗೀಜರ್ ಬದಲಾಯಿಸದೇ ಗ್ರಾಹಕರಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪುನೀಡಿದೆ.
ತಿಂಗಳೊಳಗಾಗಿ ಹಣ ಕೊಡುವಂತೆ ಸೂಚನೆ
ಗೀಜರ್ ಮೌಲ್ಯ 5,399 ರೂಪಾಯಿಗಳಾಗಿದ್ದು, ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ದೂರುದಾರನಿಗೆ ಆ ಹಣವನ್ನು ಕೊಡುವಂತೆ ತೀರ್ಪು ನೀಡಿದೆ. ಹಾಗೂ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ತೊಂದರೆಗಾಗಿ 15,000 ಪರಿಹಾರ ಮತ್ತು 5,000 ರೂಪಾಯಿಯನ್ನು ಈ ಪ್ರಕರಣದ ಖರ್ಚು ವೆಚ್ಚವನ್ನು ಕೊಡುವಂತೆ ಗೀಜರ್ ಕಂಪೆನಿಗೆ ಸೂಚನೆ ನೀಡಿದೆ.
ರೈತರ ಸಮಸ್ಯೆ ಆಲಿಸದ ಅಧಿಕಾರಿಗಳು
ಜನರಿಂದ ಆಯ್ಕೆಯಾಗಿ ಬಂದಂತಹ ಪ್ರತಿ ರಾಜಕಾರಣಿ ಕೂಡ ನಮ್ಮದು ರೈತ ಪರ ಸರ್ಕಾರ ಎಂದು ಹೇಳುವುದು ಸಾಮಾನ್ಯವಾಗಿದೆ. ಆದರೆ ರೈತರ ಸಮಸ್ಯೆಗಳನ್ನು ಮಾತ್ರ ಯಾರೂ ಆಲಿಸುವುದಿಲ್ಲ. ಸರ್ಕಾರ ರೈತರಿಗೆ ಅನುಕೂಲ ಆಗುವಂತಹ ಕೆಲಸವನ್ನು ಮಾಡಬೇಕು. ಆದರೆ, ಧಾರವಾಡ ಜಿಲ್ಲೆಯಲ್ಲಿ ರೈತರಿಗೆ ಕಷ್ಟದ ಮೇಲೆ ಕಷ್ಟ ಎದುರಾಗುತ್ತಿವೆ. ಈಗ ಬಂದಿರುವ ಕಷ್ಟ ವಿದ್ಯುತ್ ಹೈಟೆನ್ಷನ್ ಕಂಬಗಳಿಂದ ಆಗಿದೆ.
ಧಾರವಾಡ ತಾಲೂಕಿನ ಮಾರಡಗಿ, ಹೆಬ್ಬಳ್ಳಿ, ಶಿವಳ್ಳಿ ಸೇರಿ ಹಲವು ಗ್ರಾಮದ ರೈತರು ವಿದ್ಯುತ್ ಹೈಟೆನ್ಷನ್ ಕಂಬಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಧಾರವಾಡ ನಗರದ ಅಮ್ಮಿನಬಾವಿ ರಸ್ತೆಯ ಎಲೆಕ್ಟ್ರಿಕ್ ಗ್ರೀಡ್‌ದಿಂದ ಶಿವಳ್ಳಿ ಗ್ರಾಮದವರೆಗೆ ಹೈಟೆನ್ಷನ್ ವಿದ್ಯುತ್ ಕಂಬಗಳನ್ನು ಹಾಕಲಾಗುತ್ತಿದೆ. ಈ ಕಂಬಗಳನ್ನು ರೈತರ ಜಮೀನಿನಲ್ಲೇ ಹಾಕಬೇಕು. ಕೆಪಿಟಿಸಿಎಲ್ ಕಂಬ ಹಾಕುವ ಗುತ್ತಿಗೆ ನೀಡಿ ಕೈ ತೊಳೆದುಕೊಂಡಿದೆ. ಆದರೆ, ರೈತರಿಗೆ ಕಂಬ ಹಾಕುವ ಬಗ್ಗೆ ಕೇಳೇ ಇಲ್ಲ. ಇಲ್ಲಿನ ರೈತರು ತಮ್ಮ ಜಮೀನಿನಲ್ಲಿ ಹೈಟೆನ್ಷನ್ ಕಂಬ ಹಾಕದಂತೆ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications