• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್ ಡೌನ್ ನಲ್ಲಿ ಸಿಲುಕಿಕೊಂಡ ಮಗ; ಹುಬ್ಬಳ್ಳಿಯಲ್ಲಿ ಮಗಳಿಂದಲೇ ಶವಕ್ಕೆ ಅಗ್ನಿಸ್ಪರ್ಶ

By ಹುಬ್ಬಳ್ಳಿ ಪ್ರತಿನಿಧಿ
|

ಹುಬ್ಬಳ್ಳಿ, ಮಾರ್ಚ್ 30: ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಲು ಮಗ ಬರಲು ಸಾಧ್ಯವಾಗದೆ ಮಗಳೇ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಮುಕ್ತಿ ಧಾಮದಲ್ಲಿ ನಡೆದಿದೆ.

ಇಂದು ಅನಾರೋಗ್ಯದಿಂದ ಎನ್‌.ಎ. ಚವ್ಹಾನ್ ಎಂಬುವವರು ‌ಮೃತಪಟ್ಟಿದ್ದರು. ಕೊರೊನಾದಿಂದ ಲಾಕ್ ಡೌನ್ ಆದ ಪರಿಣಾಮ ಲಕ್ಷ್ಮೇಶ್ವರದಲ್ಲಿ ಅವರ ಮಗ ಸಿಲುಕಿಕೊಂಡಿದ್ದ. ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಲು ಆತನಿಗೆ ಬರಲು ಆಗಲಿಲ್ಲ. ಹೀಗಾಗಿ ಚಿತೆಗೆ ಮಗಳೇ ಅಗ್ನಿ ಸ್ಪರ್ಶ ಮಾಡಿದ್ದಾಳೆ. ಮಗಳಿಂದಲೇ ಅಂತಿಮ ವಿಧಿ ವಿಧಾನವನ್ನು ನೆರವೇರಿಸಲಾಗಿದೆ.

ಚವ್ಹಾನ್ ಕುಟುಂಬದ ಐದಾರು ಜನರು ಮಾತ್ರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಕೊರೊನಾ ಭಯಕ್ಕೆ ಅಂತ್ಯಸಂಸ್ಕಾರದಲ್ಲಿ ಹೆಚ್ಚು ಜನರು ಭಾಗವಹಿಸಿರಲಿಲ್ಲ.

English summary
Because of corona lockdown, daughter performed final ritual of her father funeral in hubballi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X