ಹಾವು ಕಡಿದು ಮಗಳು, ಹೃದಯಾಘಾತದಿಂದ ತಾಯಿ ಸಾವು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 1: ಒಂದು ಕುಟುಂಬ ಒಂದೇ ದಿನ ಎರಡು ಸಾವು ನೋಡುವಂತಾಗಿದೆ. ಮಗಳ ಮೇಲಿನ ಪ್ರೀತಿ ತಾಯಿಗೆ ಈ ಪರಿಯಲ್ಲಿ ಇರುತ್ತದಾ ಎಂದು ಪ್ರಶ್ನಿಸುವಂತೆ, ಅಚ್ಚರಿ ಪಡುವಂತೆ ಮಾಡುವ ಘಟನೆ ಇದು. ಅಂದಹಾಗೆ ಆಗಿದ್ದಿಷ್ಟು. ಮಗಳಿಗೆ ಹಾವು ಕಡಿದಿದೆ ಎಂಬ ಸುದ್ದಿ ಕೇಳಿ ತಾಯಿಗೆ ಹೃದಯಾಘಾತವಾಗಿದೆ. ಕಡೆಗೆ ಇಬ್ಬರೂ ಮೃತಪಟ್ಟಿದ್ದಾರೆ.

ಇಲ್ಲಿಗೆ ಸಮೀಪದ ಶಿರಗುಪ್ಪಿ ಗ್ರಾಮದಲ್ಲಿ ನಾಗವ್ವ ಹಸಬಿ (18) ಎಂಬಾಕೆಗೆ ರಾತ್ರಿ ಮಲಗಿದ್ದ ವೇಳೆ ಹಾವೊಂದು ಕಡಿದಿತ್ತು. ಈ ಸುದ್ದಿ ಕೇಳಿದ ಆಕೆಯ ತಾಯಿ ಮಹಾದೇವಿ ಹಸಬಿ (40) ಹೃದಯಾಘಾತದಿಂದ ಮೂರ್ಛೆ ಹೋಗಿದ್ದಾರೆ. ಆಕೆಯನ್ನು ಸ್ಥಳೀಯರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ಕರದೊಯ್ದಿದ್ದಾರೆ.[ಅಮ್ಮನ ಕೊಲೆಗೆ ಸಾಕ್ಷ್ಯವಾದ ಆ ಮಗುವಿನ ವಯಸ್ಸು 5 ವರ್ಷ]

Nagavva

ಆದರೆ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ತಾಯಿ-ಮಗಳು ಇಬ್ಬರೂ ಸಾವನ್ನಪ್ಪಿದ್ದಾರೆ. ಕಿಮ್ಸ್ ಆಸ್ಪತ್ರೆಗೆ ನವಲಗುಂದ ಶಾಸಕ ಎನ್. ಎಚ್. ಕೋನರಡ್ಡಿ, ಧಾರವಾಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಶಿರೂರು ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಘಟನೆ ಕುರಿತು ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Daughter dead by snake bite and mother by heart attack in Shiraguppi village, Hubballi on Tuesday. After hearing daughter Nagavva's snake bite news, her mother Mahadevi dead by heart attack.
Please Wait while comments are loading...