ಧಾರವಾಡ: ಪೊಲೀಸ್ ಠಾಣೆ ಎದುರಲ್ಲೇ ಪತಿ-ಪತ್ನಿ ಮಧ್ಯೆ ಮಾರಾಮಾರಿ!
ಧಾರವಾಡ, ಅಕ್ಟೋಬರ್ 13: ನವವಿವಾಹಿತ ಪತಿ-ಪತ್ನಿ ಪೊಲೀಸ್ ಠಾಣೆಯ ಆವರಣದಲ್ಲೆ ಕಿತ್ತಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಧಾರವಾಡದ ವೈದ್ಯ ಡಾ. ಸಂತೋಷ ಮತ್ತು ವಿಜಯಪುರದ ಮಹಿಳೆ ಸುರೇಖಾ ಇಬ್ಬರು ಮದುವೆ ಆಗಿದ್ದರು.
ಆದರೆ ಹೆಂಡತಿಗೆ ಹಲವಾರು ನೆಪಗಳನ್ನು ಹೇಳಿ ಗಂಡ ಹೆಂಡತಿಯನ್ನು ಪದೇ ಪದೇ ತವರು ಮನೆಗೆ ಕಳಿಸುತಿದ್ದ. ಹೀಗಾಗಿ, ಹೆಂಡತಿ ಸುರೇಖಾಗೆ ಪತಿಯ ಮೇಲ ಅನುಮಾನವಿತ್ತು, ವೈದ್ಯ ಸಂತೋಷ್ ಹೆಂಡತಿಗೆ ಗೊತ್ತಿಲ್ಲದೆ ಇನ್ನೊಂದು ಮದುವೆ ಆಗಿದ್ದಾನೆಂಬ ವಿಷಯ ತಿಳಿದು ಮೊದಲ ಪತ್ನಿ ಸುರೇಖಾ ಮತ್ತು ಆಕೆಯ ಕಡೆಯವರು ದೂರು ನೀಡುವುದಕ್ಕಾಗಿ ಧಾರಾವಾಡದ ಉಪನಗರ ಪೊಲೀಸ್ ಠಾಣೆಗೆ ಬಂದಿದ್ದರು.

ಇದೇ ಸಮಯದಲ್ಲಿ ವೈದ್ಯ ಸಂತೋಷ್ ಕೂಡ ಅಲ್ಲಿಗೆ ಅಚಾನಕ್ಕಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಠಾಣೆಯಲ್ಲಿಯೇ ಗಂಡ ಹೆಂಡಿರ ಮದ್ಯೆ ಮಾತಿನ ಚಕುಮಕಿ ಆಗಿದ್ದು, ವಿಕೋಪಕ್ಕೆ ಹೋಗಿ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಬಳಿಕ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ.












Click it and Unblock the Notifications