ಆಗಸ್ಟ್ ನಿಂದ ಹುಬ್ಬಳ್ಳಿ-ಬೆಂಗಳೂರು ಮಧ್ಯೆ ನಿತ್ಯ ವಿಮಾನ ಹಾರಾಟ

Posted By:
Subscribe to Oneindia Kannada

ಹುಬ್ಬಳ್ಳಿ, ಜುಲೈ 28: ಹುಬ್ಬಳ್ಳಿಯಿಂದ ಬೆಂಗಳೂರಿಗೆ ಆಗಸ್ಟ್ ನಿಂದ ಏರ್ ಇಂಡಿಯಾದಿಂದ ಪ್ರತಿ ದಿನ ವಿಮಾನ ಸಂಚಾರ ನಡೆಯಲಿದೆ. ಸದ್ಯಕ್ಕೆ ವಾರದಲ್ಲಿ ಐದು ದಿನ ಮಾತ್ರ ವಿಮಾನ ಸಂಚರಿಸುತ್ತಿದೆ. ಏರ್ ಇಂಡಿಯಾದ ಮುಖ್ಯಕಚೇರಿಯಲ್ಲಿ ಸಂಸದ ಪ್ರಹ್ಲಾದ್ ಜೋಶಿ ಹಾಗೂ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಎಂ.ಡಿ.ಅಶ್ವಿನ್ ರನ್ನು ಭೇಟಿಯಾಗಿದ್ದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಜುಲೈನಲ್ಲಿ ಹಾರಾಟ ಶುರು

ಬೆಂಗಳೂರು-ಹುಬ್ಬಳ್ಳಿ ಮಧ್ಯೆ ಪ್ರತಿ ದಿನ ಏರ್ ಇಂಡಿಯಾ ವಿಮಾನ ಹಾರಾಟ ನಡೆಸುವಂತೆ ಆಗ್ರಹ ಮಾಡಿದರು. ಅದಕ್ಕೆ ಸಕಾರಾತ್ಮವಾಗಿ ಪ್ರತಿಕ್ರಿಯಿಸಿದ ಎಂಡಿ, ಆಗಸ್ಟ್ ಮೊದಲ ವಾರದಿಂದ ಬೆಂಗಳೂರು ಹಾಅಗೂ ಹುಬ್ಬಳ್ಳಿ ಮಧ್ಯೆ ಏರ್ ಇಂಡಿಯಾದಿಂದ ಪ್ರತಿ ದಿನ ವಿಮಾನ ಹಾರಾಟ ನಡೆಸುವುದಾಗಿ ಭರವಸೆ ನೀಡಿದ್ದಾರೆ.

Daily flight service between Hubballi-Bengaluru from August

ಮೂರು ತಿಂಗಳ ಹಿಂದೆಯೇ ಈ ವಿಮಾನ ಸಂಚಾರಕ್ಕೆ ನಿರ್ಧರಿಸಲಾಗಿತ್ತು. ಆದರೆ ಸಿಬ್ಬಂದಿ ಕೊರತೆ ಎಂಬ ಕಾರಣಕ್ಕೆ ಮುಂದೂಡಲಾಗಿತ್ತು. ಇನ್ನು ಇದೇ ಸಂದರ್ಭದಲ್ಲಿ ಹುಬ್ಬಳ್ಳಿ-ಮುಂಬೈ ಮಧ್ಯೆ ವಿಮಾನ ಸಂಪರ್ಕಕ್ಕೆ ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಎಂ.ಡಿ, ಹುಬ್ಬಳ್ಳಿ- ಮುಂಬೈ ವಿಮಾನ ಹಾರಾಟಕ್ಕೆ ಬೇಕಾದ ಪೂರ್ವಭಾವಿ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Daily flight service by Air India between Hubballi-Bengaluru from August. Air India MD responded to the request of Jagadish Shettar and Prahlad Joshi.
Please Wait while comments are loading...