ಮತ್ತೆ ಗರಿ ಗೆದರಿದ ಮಹಾದಾಯಿ-ಕಳಸಾ ಬಂಡೂರಿ ಹೋರಾಟ

Posted By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವಂಬರ್ 30 : ಒಂದು ಕಡೆ ಮಹದಾಯಿ ಮತ್ತು ಕಳಸಾ ಬಂಡೂರಿ ಹಾರಾಟಗಾರರ ಮೇಲೆ ಹಾಕಲಾಗಿದ್ದ ಕೇಸ್ ಗಳನ್ನು ಹಿಂಪಡೆಯುವುದಾಗಿ ಆಡಳಿತಾ ರೂಡ ಕಾಂಗ್ರೆಸ್ ಸರ್ಕಾರ ಹೇಳಿತ್ತು .

ಮಹಾದಾಯಿ ವಿವಾದದ ಚೆಂಡು ಬಿಜೆಪಿ ಅಂಗಳದಲ್ಲಿದೆ: ಸಿದ್ದರಾಮಯ್ಯ

ಆದರೆ ಗದಗ ಜಿಲ್ಲಾ ಜೆ ಎಮ್ ಎಫ್ ಸಿ ಕೋರ್ಟ್ ರೈತ ಹೋರಾಟಗಾರರಿಗೆ ಸಮಮ್ಸ್ ಜಾರಿ ಮಾಡಿದೆ . ಹೀಗಾಗಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇತ್ತ ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಹೋರಾಟಗಾರರು ಮತ್ತೆ ರಸ್ತೆ ತಡೆದು ಹೋರಾಟ ನಡೆಸಿದರು.

Court summons Mahadayi agitation farmers

ಪಟ್ಟಣದ ರೈತ ಭವನದ ಬಳಿ ವಿಜಯಪುರ ಹುಬ್ಬಳ್ಳಿ ರಸ್ತೆ ತಡೆದು ಪ್ರತಿಭಟನೆ ಮಾಡಿದ ರೈತ ಸೇನಾ ಕರ್ನಾಟಕ ಕಾರ್ಯಕರ್ತರು, ಕೇಂದ್ರ ಹಾಗು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಈ ವೇಳೆ ಮಾತನಾಡಿದ ರೈತ ಸೇನಾ ಅಧ್ಯಕ್ಷ, ಮಹದಾಯಿ ಸಮಸ್ಯೆ ಇತ್ಯರ್ಥದ ಜೊತೆಗೆ ಮಹದಾಯಿ ಉಗ್ರ ಹೋರಾಟದ ನಂತರ ಸಾವನ್ನಪ್ಪಿದ ಹೋರಾಟಗಾರರನ್ನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

'ಮಹಾದಾಯಿ ವಿವಾದ ಬಗೆಹರಿಸಲು ದೇವೇಗೌಡರಂತೆ ಇಚ್ಛಾಶಕ್ತಿ ಬೇಕು'

Court summons Mahadayi agitation farmers

ಇದೇ ಬೆಳೆ ವಿಮೆ ಹಾಗೂ ರೈತರು ಬೆಳೆದ ಬೆಳಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು. ಇನ್ನೊಂಡೆದೆ ಅಣ್ಣಿಗೇರಿ ಪಟ್ಟಣದಲ್ಲಿ ಮಹದಾಯಿ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಪ್ರಹ್ಲಾದ ಜೋಶಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆಯಲ್ಲಿ ಮಹದಾಯಿ ನೀರು ತರಿಸುವ ಭರವಸೆ ನೀಡಿದರು. ಈ ಸಮಸ್ಯೆಯನ್ನು ಕೂಡಲೆ ಬಗೆಹರಿಸಿ ಈ ಭಾಗದ ರೈತರ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದ್ದಾರೆ .

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hundred of Farmers staged Rasta Roko in Navalgund of Dharwad district on Thursday Morning. Opposing as the JMFC court issued summons to many farmers.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ