ಹುಬ್ಬಳ್ಳಿಯಲ್ಲಿ ನಿರಂತರ ಮಳೆ: ಸಾಂಕ್ರಾಮಿಕ ರೋಗ ಭೀತಿ

By: ಶಂಭು ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಜುಲೈ, 22: ಕಳೆದೆರಡು ದಿನಗಳಿಂದ ಮಹಾನರಗದಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಎಲ್ಲೆಡೆ ಕಸದ ರಾಶಿ ಬಿದ್ದಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಸಾರ್ವಜನಿಕರಲ್ಲಿ ಶುರುವಾಗಿದೆ.

ಚಿಕೂನ್ ಗುನ್ಯಾ ಕಾಣಿಸಿಕೊಂಡ ವರದಿಯಾಗಿದೆ. ಮಹಾನಗರ ಹಲವಾರು ಕಡೆಗಳ್ಳಿ ಕಸದ ರಾಶಿ ಕಂಡು ಬರುತ್ತಿದೆ. ನಿರಂತರ ಜಿಟಿಜಿಟಿ ಮಳೆಯಿಂದ ಕಸವು ಕೊಳೆತು ನಾರುತ್ತಿದೆ. ಅಲ್ಲೆಲ್ಲಾ ಹಂದಿ, ನಾಯಿ, ಸೊಳ್ಳೆಗಳ ವಾಸಸ್ಥಾನವಾಗಿ ಜನರಿಗೆ ರೋಗದ ಭಯದ ಹುಟ್ಟಿಸುತ್ತಿದೆ. ರಸ್ತೆಯೆಲ್ಲೆಡೆ ರಾಡಿ ಇರುವುದರಿಂದ ಹಲವಾರು ಪಾದಚಾರಿಗಳು ಬಿದ್ದು ಗಾಯಗೊಂಡಿದ್ದರೆ, ಕೆಲವೊಂದು ಬೈಕ್ ಸವಾರರು ಸ್ಕಿಡ್ ಆಗಿ ಬೀಳುವುದು ಸಾಮಾನ್ಯ ದೃಶ್ಯವಾಗಿದೆ.[ಆಟಿಸಮ್ ಕಾಯಿಲೆ ಗುಣಪಡಿಸಿದ ಹುಬ್ಬಳ್ಳಿ ವೈದ್ಯರು]

hubballi

ಇಳಿದ ತಾಪಮಾನ:
ಬೇಸಿಗೆಯಲ್ಲಿ 40 ಡಿಗ್ರಿಯವರೆಗೂ ಏರಿದ್ದ ತಾಪಮಾನ ಕಳೆದೆರಡು ದಿನಗಳಿಂದ 21 ಕ್ಕೆ ಇಳಿದಿದೆ. ಹೀಗಾಗಿ ವೃದ್ಧರು ಮತ್ತು ಮಕ್ಕಳು ತಂಪಿನಿಂದಾಗಿ ಹೊರಗೆ ಬಾರದಂತಾಗಿದೆ. ಶಾಲಾ ಮಕ್ಕಳಂತೂ ಬೆಚ್ಚನೆಯ ಉಡುಗೆಯಿಲ್ಲದೇ ಶಾಲೆಗೆ ಹೋಗುವಂತೆಯೂ ಇಲ್ಲದಂತಾಗಿದೆ.

ಹೆಚ್ಚಿದ ರಸ್ತೆ ಬದಿಯ ವ್ಯಾಪಾರ :
ತಂಪಾದ ವಾತಾವರಣವಿರುವುದರಿಂದ ನಗರದ ರಸ್ತೆ ಪಕ್ಕಗಳಲ್ಲಿ ಗಿರಮಿಟ್, ಮಿರ್ಚಿ, ಬಜ್ಜಿ, ಮಂಡಕ್ಕಿ, ಸೇವಪುರಿ, ಪಾನಿಪೂರಿ ತಿನ್ನಲು ಮುಗಿ ಬೀಳುತ್ತಿದ್ದರೆ. ಆದರೆ ಸ್ವಚ್ಛವಿಲ್ಲದೇ ನೀರು ಸೇವಿಸುವುದು, ನೊಣಗಳು, ಕ್ರಿಮಿ ಕೀಟಗಳು ಕುಳಿತ ರಸ್ತೆ ಪಕ್ಕದ ವಸ್ತುಗಳನ್ನು ಜನರು ತಿನ್ನುತ್ತಿರುವುದು ಅವರ ಆರೋಗ್ಯಕ್ಕೆ ಮಾರಕವಾಗುತ್ತಿದೆ.[ಪ್ರತಿದಿನ ಧೂಳಿನಲ್ಲಿ ಜಳಕ ಮಾಡುತ್ತಿರುವ ಹುಬ್ಬಳ್ಳಿ ಮಂದಿ]

hubballi

ಈ ಕುರಿತು ಮಹಾನಗರ ಪಾಲಿಕೆಯೇ ರಸ್ತೆ ಪಕ್ಕದ ಆಹಾರ ಸೇವಿಸಬೇಡಿ ಎಂದು ಪ್ರಚಾರ ಮಾಡುತ್ತದೆ. ಆದರೆ ತಾನೇ ರಸ್ತೆ ಪಕ್ಕದ ಬೀದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುತ್ತಿದೆ. ಒಟ್ಟಿನಲ್ಲಿ ಜನರು ಮಾರಕ ಬಲಿಯಾಗುವುದರಲ್ಲಿ ಸಂಶಯವೇ ಇಲ್ಲವೆನ್ನುವುದು ಶೀಘ್ರ ಎಲ್ಲರಿಗೂ ಅರಿವಾಗುವುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi: Monsoon rain continuously hitting Hubballi from past 3 days. Many parts of Hubballi received heavy rain. Now it is turned to Epidemic diseases threat.
Please Wait while comments are loading...