ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಕಾಂಗ್ರೆಸ್ ಸುಳ್ಳಿನ ಗೋಪುರವನ್ನೇ ಕಟ್ಟಿದೆ: ಅರುಣ್‌ ಸಿಂಗ್‌ ವಾಗ್ದಾಳಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜನವರಿ, 27: ಕಾಂಗ್ರೆಸ್ ನಾಯಕರು ನಿತ್ಯ ಕಿತ್ತಾಟದಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯನನ್ನು ಕಂಡರೇ ಡಿ.ಕೆ. ಶಿವಕುಮಾರ್‌ಗೆ ಆಗಲ್ಲ, ಡಿ.ಕೆ. ಶಿವಕುಮಾರ್‌ನನ್ನು ಕಂಡರೇ ಸಿದ್ಧರಾಮಯ್ಯಗೆ ಆಗಲ್ಲ. ಒಬ್ಬರನ್ನೊಬ್ಬರು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇವರಿಂದ ಜನರಿಗೆ ಉತ್ತಮ ಆಡಳಿತ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹುಬ್ಬಳ್ಳಿಯಲ್ಲಿ ಹೇಳಿದರು.

ನಗರದಲ್ಲಿಂದು ಖಾಸಗಿ ಹೊಟೇಲ್‌ನಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚುನಾವಣೆ ನಂತರವೂ ಜಗಳ ಮುಂದುವರೆಯಲಿದೆ. ಜಗಳ ಆಡುವವರು ಜನರಿಗೆ ಒಳ್ಳೆಯ ಆಡಳಿತ ಕೊಡಲು ಸಾಧ್ಯವೇ? ಹೀಗಾಗಿ ಬಿಜೆಪಿಯೇ ಒಳ್ಳೆಯ ಆಯ್ಕೆಯಾಗಿದೆ ಎಂದು ಜನರು ನಂಬಿದ್ದಾರೆ. ಕಾಂಗ್ರೆಸ್ ನಾಯಕರು ಫ್ರೇಷ್ಟೇಷನ್‌ನಲ್ಲಿದ್ದಾರೆ. ಹೀಗಾಗಿ ನಮ್ಮ ನಾಯಕರಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಮೋದಿ ಕಂಡ್ರೆ ಭಯವಿಲ್ಲ, ಆದ್ರೆ ನನ್ನ ಕಂಡ್ರೆ ಮೋದಿಗೆ ಭಯ: ಸಿದ್ದರಾಮಯ್ಯನನಗೆ ಮೋದಿ ಕಂಡ್ರೆ ಭಯವಿಲ್ಲ, ಆದ್ರೆ ನನ್ನ ಕಂಡ್ರೆ ಮೋದಿಗೆ ಭಯ: ಸಿದ್ದರಾಮಯ್ಯ

ಸುಳ್ಳಿನ ಗೋಪುರ ಕಟ್ಟಿದ ಕಾಂಗ್ರೆಸ್

ಕಾಂಗ್ರೆಸ್ ಸುಳ್ಳು ಭರವಸೆಗಳ ಗೋಪುರ ಕಟ್ಟಿದೆ. ಸದ್ಯ ವಿಜಯ ಸಂಕಲ್ಪ ಅಭಿಯಾನ ನಡೆಯುತ್ತಿದೆ. ಈ ಮೂಲಕ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಲಾಗುತ್ತಿದೆ. ಅಮಿತ್ ಶಾ ಅವರೂ ಧಾರವಾಡ ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿಯಾಗುತ್ತಾರೆ. ಕರ್ನಾಟಕದಲ್ಲಿ 4 ಕೋಟಿ ಜನರಿಗೆ ಪಡಿತರ ಕೊಡುವ ಕಾರ್ಯ ನಡೆದಿದೆ. ಆದರೆ ಕಾಂಗ್ರೆಸ್ ಏನನ್ನೂ ಮಾಡಿಲ್ಲ. ಎಲ್ಲ ಅಭಿವೃದ್ಧಿ ಕೆಲಸಗಳು ಬಿಜೆಪಿಯಿಂದ ನಡೆದಿವೆ. ಕಾಂಗ್ರೆಸ್ ಸುಳ್ಳು ಭರವಸೆಗಳ ಸೌಧ ಕಟ್ಟುತ್ತಿದೆ. ಕರ್ನಾಟಕದ ಜನತೆಯನ್ನು ಭ್ರಮಾ ಲೋಕದಲ್ಲಿ ತೇಲಿಸುತ್ತಿದ್ದಾರೆ ಎಂದರು.

Congress leaders are telling lies to people: Arun Singh

ರಾಜಸ್ಥಾನದಲ್ಲಿ ಭರವಸೆ ಈಡೇರಿಸಿಲ್ಲ

ರಾಜಸ್ಥಾನದಲ್ಲಿ 10 ದಿನದಲ್ಲಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಇದುವರೆಗೂ ಭರವಸೆ ಈಡೇರಿಸಿಲ್ಲ. ಲಕ್ಷಾಂತರ ರೈತರು ಸಾಲ ಮನ್ನಾಕ್ಕಾಗಿ ಎದುರು ನೋಡುತ್ತಿದಾರೆ. ನಾಲ್ಕು ವರ್ಷದಲ್ಲಿ 16 ಬಾರಿ ಪೇಪರ್ ಲೀಕ್ ಆಗಿದೆ. ಕಾಂಗ್ರೆಸ್ ಹೇಳುವುದೆಲ್ಲಾ ಬರೀ ಸುಳ್ಳು. ಕೊಟ್ಟ ಭರವಸೆಯನ್ನು ಕಾಂಗ್ರೆಸ್ ಈಡೇರಿಸಿಲ್ಲ, ಛತ್ತೀಸ್‌ಗಢದಲ್ಲಿಯೂ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಕಾಂಗ್ರೆಸ್ ಸುಳ್ಳು ಭರವಸೆಗಳ ಗೋಪುರ ಕಟ್ಟಿದೆ ಎಂದು ಹರಿಹಾಯ್ದರು.

ಬಸವರಾಜ ಬೊಮ್ಮಾಯಿ ಕಾಮನ್ ಮ್ಯಾನ್ ಸಿಎಂ. ರೈತರು, ರೈತರ ಮಕ್ಕಳಿಗಾಗಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಅವರಿಗೆ ಅಪಮಾನ ಮಾಡುತ್ತಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಬೊಮ್ಮಾಯಿಗೆ ಅಪಮಾನ ಮಾಡಿದ್ದಾರೆ. ಕೆಟ್ಟ ಶಬ್ದಗಳಿಂದ ಸಿಎಂ ಅವರನ್ನು ನಿಂಧಿಸಿದ್ದಾರೆ. ಇದನ್ನು ಕರ್ನಾಟಕದ ಜನರು ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

Congress leaders are telling lies to people: Arun Singh

ರಾಜ್ಯದಲ್ಲಿ 156 ಸೀಟ್‌ಗಳನ್ನ ಗೆಲ್ಲುತ್ತೇವೆ

ಕರ್ನಾಟಕದಲ್ಲಿ ನಾವು 156 ಸೀಟ್‌ಗಳನ್ನು ಗೆಲ್ಲುತ್ತೇವೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಮೋದಿ, ಯಡಿಯೂರಪ್ಪ ಮಾರ್ಗದರ್ಶನದಲ್ಲಿ ನಾವು ಗೆಲುತ್ತೇವೆ. ಇನ್ನು ಯತ್ನಾಳ್‌ ಕುರಿತು ಪ್ರತಿಕ್ರಿಯಿಸಿದ ಅವರು, ಯತ್ನಾಳ್‌ ಅವರಿಗೆ ನೋಟಿಸ್ ನೀಡಲಾಗಿದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ಸಿಎಂ ಪಟ್ಟಕ್ಕಾಗಿ ಫೈಟಿಂಗ್ ನಡೆಯುತ್ತಿದೆ ಎಂದರು.

English summary
Congress leaders are telling lies to people says BJP National General Secretary Arun Singh in Hubballi, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X