ಹೊರಟ್ಟಿ ಕಾಂಗ್ರೆಸ್ ಬಗ್ಗೆ ಮಾತನಾಡದೆ ಇರುವುದು ಒಳ್ಳೆಯದು: ಸಿದ್ದರಾಮಯ್ಯ ಆಕ್ರೋಶ

Recommended Video

      ನಮ್ಮ ಬಗ್ಗೆ ಮಾತನಾಡದೇ ಇರುವುದು ಒಳ್ಳೆಯದು ಅಂತಾ ಜೆಡಿಎಸ್ ನಾಯನಿಗೆ ಸಿದ್ದು ವಾರ್ನಿಂಗ್..! | Oneindia kannada

      ಹುಬ್ಬಳ್ಳಿ, ಮೇ 8: ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟು ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಿ ಕಾಂಗ್ರೆಸ್ ಹೈಕಮಾಂಡ್ ತಪ್ಪು ಮಾಡಿತ್ತು ಎಂದಿರುವ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

      ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

      ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಹೊರಟ್ಟಿ ಅವರು ಕಾಂಗ್ರೆಸ್ ಬಗ್ಗೆ ಮಾತನಾಡದೆ ಇರುವುದು ಒಳ್ಳೆಯದು ಎಂದರು.

      'ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದ್ದು ಪಕ್ಷದ ತೀರ್ಮಾನ. ನಮ್ಮ ಪಕ್ಷ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ಬಸವರಾಜ ಹೊರಟ್ಟಿ ಅವರು ಮಾತನಾಡದೆ ಇರುವುದು ಒಳ್ಳೆಯದು' ಎಂದು ಸಿದ್ದರಾಮಯ್ಯ ಖಾರವಾಗಿ ಹೇಳಿದರು.

      Congress leader Siddaramaiah said JDS Basavaraj Horatti should not speak on congress

      'ಸಮ್ಮಿಶ್ರ ಸರ್ಕಾರದ ಸಂಪುಟದಿಂದ ರಮೇಶ್ ಅವರನ್ನು ಕೈಬಿಡುವುದಾಗಿದ್ದರೆ ಅವರನ್ನು ಸಚಿವರನ್ನಾಗಿ ಏಕೆ ಮಾಡಬೇಕಿತ್ತು? ನಾಯಕರ ತಪ್ಪಿನಿಂದಾಗಿ ಈಗ ಸಮಸ್ಯೆ ಉದ್ಭವವಾಗಿದೆ. ಸಚಿವರಾಗದೆ ಇದ್ದಿದ್ದರೂ ಸತೀಶ್ ಜಾರಕಿಹೊಳಿ ಆರಾಮವಾಗಿದ್ದರು. ಸುಮ್ಮನೆ ಇರಲಾರದೆ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಹೊರಗಟ್ಟಿ ಸತೀಶ್ ಅವರಿಗೆ ಸಚಿವ ಸ್ಥಾನ ಕೊಟ್ಟು ಕಾಂಗ್ರೆಸ್ ಹೈಕಮಾಂಡ್ ತಪ್ಪು ಮಾಡಿದೆ' ಎಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಅವರು ಮಂಗಳವಾರ ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+