ಬಿಜೆಪಿಯವರಿಗೆ ಇನ್ನೂ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗುತ್ತಿಲ್ಲ- ಜಗದೀಶ್ ಶೆಟ್ಟರ್ ವ್ಯಂಗ್ಯ
ಹುಬ್ಬಳ್ಳಿ, ಆಗಸ್ಟ್ 1: ಶಾಸಕಾಂಗ ಸಭೆಗೂ ಮುನ್ನವೇ ದೆಹಲಿಗೆ ಬರುವಂತೆ ಮಾಹಿತಿ ಬಂದಿತ್ತು. ಇದು ಪೂರ್ವ ನಿಯೋಜಿತ ಸಭೆ. ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ರಾಜ್ಯದ ಪರಸ್ಥಿತಿ ಕುರಿತು ಚರ್ಚೆ ಆಗಲಿದೆ. ಒಂದು ಕ್ಷೇತ್ರದ ಬಗ್ಗೆ ಅಲ್ಲ, ರಾಜ್ಯದ ಬಗ್ಗೆ ನಾಯಕರು ಚರ್ಚೆ ಮಾಡಲಿದ್ದಾರೆಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭೆ ಚುನಾವಣೆ, ಸಂಘಟನೆ ದೃಷ್ಟಿಯಿಂದ ಸಭೆ ಕರೆದಿದ್ದಾರೆ. ಕೇಂದ್ರದ ವರಿಷ್ಠರು ಸಭೆ ನಿಯೋಜನೆ ಮಾಡಿದ್ದಾರೆ. ಪಕ್ಷದ ಮುಖಂಡರ ಸಭೆಗೆ ನಾನು ಹೋಗಲಿದ್ದೇನೆ ಎಂದು ತಿಳಿಸಿದರು.

ಇನ್ನು ಹಾಲಿನ ಬೆಲೆ ಏರಿಕೆ ಸಮರ್ಥನೆ ಮಾಡಿಕೊಂಡ ಜಗದೀಶ್ ಶೆಟ್ಟರ್, ಕಳೆದ ಐದಾರು ವರ್ಷಗಳಿಂದ ಬೆಲೆ ಏರಿಕೆ ಬಗ್ಗೆ ಚಿಂತನೆ ಇತ್ತು. ಇದೀಗ ರೈತರ ಅನಕೂಲಕ್ಕಾಗಿ ಏರಿಕೆ ಮಾಡಲಾಗಿದೆ. ಅನಿವಾರ್ಯ ಕಾರಣಕ್ಕೆ ಬೆಲೆ ಏರಿಕೆ ಆಗಲಿದೆ ಎಂದರು.
ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ ಜಗದೀಶ್ ಶೆಟ್ಟರ್, ಬಿಜೆಪಿ ಲೀಡರ್ ಲೆಸ್ ಪಾರ್ಟಿ. ಬಿಜೆಪಿ ದಯನೀಯ ಸ್ಥಿತಿಗೆ ಹೋಗುತ್ತಿದೆ. ಬಹಳ ದಯನೀಯ ಪರಸ್ಥಿತಿಯಲ್ಲಿ ಬಿಜೆಪಿ ಇದೆ. ಅವರಿಗೊಬ್ಬ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತಿಲ್ಲ. ಎರಡು ಕಡೆ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡೋಕೆ ಆಗ್ತಿಲ್ಲ. ಇದು ಶೋಚನಿಯ ಎಂದರು.
ಮಾತು ಮುಂದುವರಿಸಿದ ಜಗದೀಶ್ ಶೆಟ್ಟರ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಂದು ಪ್ರಚಾರ ಮಾಡಿದ ಕಡೆ ಏನಾಯ್ತು. ವಿಧಾನಸಭಾವಾರು ಮೋದಿ ಪ್ರಚಾರ ಮಾಡಿದರು. ಮೋದಿಜಿ ಅವರೇ ಬಂದು ನೂರಾರು ಕಡೆ ಪ್ರಚಾರ ಮಾಡಿದರು.ಆದರೆ ಫಲಿತಾಂಶ ಏನಾಯಿತು. ಲೋಕಸಭೆಯಲ್ಲೂ ಇದೇ ರೀತಿ ಆಗುತ್ತದೆ. ಬಿಜೆಪಿ ಬಹಳ ದಯನೀಯ ಸ್ಥಿತಿಗೆ ಹೋಗುತ್ತಿದೆ ಎಂದರು.

ಇನ್ನು ಉಡುಪಿ ಖಾಸಗಿ ಕಾಲೇಜಿನಲ್ಲಿ ನಡೆದ ವಿಡಿಯೋ ವಿಚಾರವಾಗಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಸರಿಯಾಗಿ. ಸರಿಯಾದ ತನಿಖೆ ಮಾಡಲು ಅವಕಾಶ ಕೊಡಿ, ಮಹಿಳಾ ಆಯೋಗದ ಸದಸ್ಯೆ ಬಂದು ಭೇಟಿ ಕೊಟ್ಟಿದ್ದಾರೆ. ಇದರ ಬಗ್ಗೆ ಹೆಚ್ಚು ಮಾತನಾಡಬೇಡಿ ಎಂದಿದ್ದಾರೆ. ಖುಷ್ಬೂ ಬಿಜೆಪಿ ಮುಖಂಡರು, ಅವರೇ ಹೇಳಿದರೂ ವಿವಾದ ಮಾಡುತ್ತಿದ್ದಾರೆ ಎಂದರು.











Click it and Unblock the Notifications