ನೀರಿಗೆ ಹೋರಾಟ ಮಾಡಿದವರಿಗೆ ಷರತ್ತುಬದ್ಧ ಜಾಮೀನು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, 12- ಕಳಸಾ ಬಂಡೂರಿ ಹೋರಾಟದ ವೇಳೆ ಬಂಧನಕ್ಕೆ ಒಳಗಾಗಿದ್ದ 179 ಜನರಿಗೆ ಶುಕ್ರವಾರ ಧಾರವಾಡ ಜಿಲ್ಲಾ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರಿ ಮಾಡಿದೆ.

ನವಲಗುಂದ ತಾಲೂಕಿನ ಅಳಗವಾಡಿ, ಅರೇಕುರಹಟ್ಟಿ, ಯಮನೂರು ಮುಂತಾದ ಗ್ರಾಮಗಳಿಂದ ಬಂಧಿತರಾಗಿದ್ದವರ ಪರ ಧಾರವಾಡ ವಕೀಲರ ಸಂಘ ವಾದ ಮಂಡಿಸಿದೆ. ಸರಕಾರಿ ಅಭಿಯೋಜಕರು ವಕೀಲರ ಜಾಮೀನು ಅರ್ಜಿಗೆ ತಕರಾರು ಸಲ್ಲಿಸದಿದ್ದರಿಂದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.

ಜಾಮೀನಿಗೆ ನೀಡಿರುವ ಕೋರ್ಟ್ ಷರತ್ತುಗಳು
* ಎಲ್ಲ 179 ರೈತರು ತಲಾ 50 ಸಾವಿರ ರೂ.ಗಳ ಬಾಂಡ್ ಬರೆದುಕೊಡಬೇಕು.
* ಪ್ರತಿ ಸೋಮವಾರ ಮುಂಜಾನೆ 10 ರಿಂದ ಮಧ್ಯಾಹ್ನ 2 ಗಂಟೆಯೊಳಗಾಗಿ ತಮ್ಮೂರಿನ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ಸಹಿ ಮಾಡಬೇಕು. * ನ್ಯಾಯಾಲಯದಲ್ಲಿ ವಿಚಾರಣೆಯಿದ್ದಾಗ ಹಾಜರಾಗಬೇಕು. ಮತ್ತೇನಾದರೂ ಗಲಭೆಗಳಾದರೆ ಅದರಲ್ಲಿ ಭಾಗವಹಿಸಬಾರದು.
* ಸಾಕ್ಷಿಗಳನ್ನು ನಾಶ ಮಾಡಲು ಪ್ರಯತ್ನಿಸಬಾರದು. ನ್ಯಾಯಾಲಯದ ಅನುಮತಿ ಪಡೆದುಕೊಂಡು ಜಿಲ್ಲೆಯಿಂದ ಹೊರ ಹೋಗಬೇಕು.
* ಷರತ್ತುಗಳಲ್ಲಿ ಒಂದಾದರೂ ತಪ್ಪಿದ್ದು ಕಂಡು ಬಂದಲ್ಲಿ ಜಾಮೀನು ರದ್ದಾಗಲಿದೆ

ಬಿಡುಗಡೆ ಯಾವಾಗ?

ಬಿಡುಗಡೆ ಯಾವಾಗ?

ಈ ಮೊದಲು 187 ಜನರಲ್ಲಿ 8 ಜನರಿಗೆ ಈಗಾಗಲೇ ಜಾಮೀನು ಮಂಜೂರಾಗಿದೆ. ಜಿಲ್ಲಾ ನ್ಯಾಯಾಲಯದ ಆದೇಶದ ಪ್ರತಿಯನ್ನು ನವಲಗುಂದ ನ್ಯಾಯಾಲಯಕ್ಕೆ ಹಾಜರುಪಡಿಬೇಕಾಗುತ್ತದೆ. ನಂತರ ಆ ನ್ಯಾಯಾಲಯದಲ್ಲಿ ಬಂಧಿತರ ಬಿಡುಗಡೆಗೆ ಷರತ್ತುಗಳನ್ನು ಪೂರೈಸಿದ ನಂತರ ಚಿತ್ರದುರ್ಗ, ಬಳ್ಳಾರಿ ಮತ್ತು ಧಾರವಾಡ ಜೈಲುಗಳಲ್ಲಿರುವವರು ಹೊರ ಬರಬೇಕಾಗುತ್ತದೆ. ಈ ಪ್ರಕ್ರಿಯೆ ಶುಕ್ರವಾರ ಸಂಜೆಯೊಳಗೆ ಅಥವಾ ಶನಿವಾರ ಬೆಳಗ್ಗೆ ಮುಗಿಯಬಹುದು. ನಂತರ ಬಂಧಿತರು ತಮ್ಮ ಮನೆ ಸೇರಿಕೊಳ್ಳಲಿದ್ದಾರೆ.

ಹೊಲದಲ್ಲಿ ಕೆಲಸ ಬಾಕಿ

ಹೊಲದಲ್ಲಿ ಕೆಲಸ ಬಾಕಿ

ಬಂಧಿತರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರೈತರು, ದಿನಗೂಲಿಗಳು, ವಿದ್ಯಾರ್ಥಿಗಳಿದ್ದಾರೆ. ರೈತರು ತಮ್ಮ ಹೊಲದಲ್ಲಿ ಬಿತ್ತನೆ ಮಾಡಬೇಕಾಗಿರುವುದರಿಂದ ಈಗಾಗಲೇ ಬಿತ್ತನೆ ಸಮಯ ಮುಗಿದಿದೆ. ಈಗ ಬೀಜ ಬಿತ್ತಿದರೆ ಸರಿಯಾದ ಸಮಯದಲ್ಲಿ ಬೆಳೆ ಬರದೇ ನಷ್ಟವಾಗುತ್ತದೆ ಎಂದು ಮಮ್ಮಲ ಮರುಗುತ್ತಿದ್ದಾರೆ. ವಿದ್ಯಾರ್ಥಿಗಳು ಸುಮಾರು ದಿನಗಳ ಕಾಲ ಕಾಲೇಜುಗಳಿಗೆ ಗೈರು ಹಾಜರಾಗಿರುವುದರಿಂದ ಅವರಿಗೆ ತಮ್ಮ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ.

ಸಚಿವ ಕುಲಕರ್ಣಿ ಕ್ಷಮಾಪಣೆ

ಸಚಿವ ಕುಲಕರ್ಣಿ ಕ್ಷಮಾಪಣೆ

ಅಮಾಯಕರ ಬಂಧನದಲ್ಲಿ ತಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಯಮನೂರು ರೈತರಲ್ಲಿ ಕ್ಷಮೆ ಕೇಳಿದ್ದಾರೆ. ಅವರು ಶುಕ್ರವಾರ ಬಂಧಿತರಿಗೆ ಜಾಮೀನು ಸಿಗುತ್ತಿದ್ದಂತೆ ಯಮನೂರಿನಲ್ಲಿ ಆಚರಿಸಿದ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಬಸ್ ವ್ಯವಸ್ಥೆ

ಬಸ್ ವ್ಯವಸ್ಥೆ

ಇನ್ನೆರಡು ದಿನಗಳಲ್ಲಿ ಎಲ್ಲರ ಮೇಲಿನ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತದೆ. ನಂತರ ಇದ್ದ ಎಲ್ಲ 25 ಪ್ರಕರಣಗಳನ್ನು ವಾಪಸು ಪಡೆಯುವುದಾಗಿ ಹೇಳಿದರು. ಜೈಲಿನಿಂದ ಬಿಡುಗಡೆಗೊಳ್ಳುವ ರೈತರನ್ನು ಕರೆ ತರಲು ಬಳ್ಳಾರಿ, ಚಿತ್ರದುರ್ಗ ಮತ್ತು ಧಾರವಾಡಗಳಿಗೆ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ವಿನಯ ಕುಲಕರ್ಣಿ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hubballi: Dharwad session court on Friday, August 12, granted conditional bail to 179 farmers who arrested during the Mahadayi, Kalasa banduri protests.
Please Wait while comments are loading...