ಆಹ್ವಾನ ಪತ್ರಿಕೆಯಲ್ಲಿ ಸಿಎಂ ಹೆಸರಿಲ್ಲ: ಸಂಸದ ಪ್ರಹ್ಲಾದ್ ಜೋಷಿಗೆ ತಪರಾಕಿ
ಹುಬ್ಬಳ್ಳಿ, ಡಿಸೆಂಬರ್ 12: ಮೇಲ್ದರ್ಜೆಗೆ ಏರಿಸಿದ ಹುಬ್ಬಳ್ಳಿ ವಿಮಾನ ನಿಲ್ದಾಣ ಉದ್ಘಾಟನಾ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಹೆಸರು ಹಾಕದ್ದಕ್ಕೆ ಸಚಿವ ಆರ್.ವಿ ದೇಶಪಾಂಡೆ, ಸಂಸದ ಪ್ರಹ್ಲಾದ ಜೋಶಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಖ್ಯಮಂತ್ರಿಗಳ ಹೆಸರು ಹಾಕುವುದು ಶಿಷ್ಟಾಚಾರ ಆದರೆ ಅದರ ಪಾಲನೆಯಲ್ಲಿ ಉಲ್ಲಂಘನೆಯಾಗಿದೆ ಎಂದು ಆಗಿರುವ ಲೋಪದ ಬಗ್ಗೆ ಕೇಂದ್ರ ಸಚಿವರಾದ ಅಶೋಕ ಗಜಪತಿರಾಜು, ಅನಂತಕುಮಾರ್ ಅವರಿಗೂ ದೂರಿದರು.

ಆಹ್ವಾನ ಪತ್ರಿಕೆಯಲ್ಲಿ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಹೊರತುಪಡಿಸಿ ಇನ್ನೆಲ್ಲ ಬಿಜೆಪಿ ಪಕ್ಷದವ ಹೆಸರುಗಳನ್ನೇ ತುಂಬಿಸಿಕೊಂಡಿದ್ದಾರೆ, ಮುಖ್ಯಮಂತ್ರಿಗಳ ಹೆಸರು ಹಾಕುವುದು ಶಿಷ್ಟಾಚಾರ ಅದನ್ನೂ ಮಾಡಿಲ್ಲ ಎಂದು ಅವರು ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮ ಮಾಡಿಕೊಂಡಿದ್ದಾರೆ ಎಂದು ಅವರು ಟೀಕಿಸಿದರು. ಸಂಸದ ಪ್ರಹ್ಲಾದ್ ಜೋಷಿ ಅವರು ಹುಬ್ಬಳ್ಳಿ-ಮುಂಬೈ ನಡುವಿನ ವಿಮಾನ ಪ್ರಯಾಣಕ್ಕೆ ಚಾಲನೆ ನೀಡಿದರು.












Click it and Unblock the Notifications