ಅತಿಹೆಚ್ಚು ರೈತರ ಆತ್ಮಹತ್ಯೆ ಆಗಿದ್ದು ಸಿದ್ರಾಮಣ್ಣನ ಕಾಲದಲ್ಲಿ: ಸಿಎಂ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಏಪ್ರಿಲ್ 30: ಮುಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೀಡಿರುವ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದ್ದು, ಜೆ.ಪಿ. ನಡ್ಡಾ ಅವರು, ನನ್ನ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟು ಒಳ್ಳೆಯ ಮಾತು ಹೇಳಿದ್ದಾರೆ ಎಂದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ಹೇಳಿದ್ದೆ. ನಮ್ಮ ಪಕ್ಷದಲ್ಲಿ ಸ್ಪಷ್ಟ ನಿಲುವಿದೆ. ಸಿಎಂ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆಂದು ಹೇಳಿದರು.

ಕೇಂದ್ರ ಸಂಸದೀಯ ಮಂಡಳಿ ಮತ್ತು ಶಾಸಕರು ಮುಖ್ಯಮಂತ್ರಿ ಆಯ್ಕೆ ಮಾಡುತ್ತಾರೆ. ನಡ್ಡಾ ಅವರು ಹೇಳಿದ ಮಾತಿಗೆ ನಾನು ಚಿರರುಣಿಯಾಗಿರುತ್ತೇನೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರವಾಹದ ಸಂದರ್ಭದಲ್ಲಿ ಮೋದಿ ರಾಜ್ಯಕ್ಕೆ ಬಂದಿಲ್ಲ ಎನ್ನುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ಪ್ರವಾಹ ಬಂದಾಗ ಹೆಚ್ಚಿನ ಅನುದಾನ ಕೊಟ್ಟಿದ್ದು ಮೋದಿ ಸರ್ಕಾರ. ಪ್ರಿಯಾಂಕಾ ಗಾಂಧಿಯವರ ಸರ್ಕಾರದ ಇದ್ದಾಗ ಮನೆ ಬಿದ್ದರೆ 2 ಸಾವಿರ ಕೊಡುತ್ತಿದ್ದರು. ಅತಿವೃಷ್ಟಿ ಪರಿಹಾರ ಮೋದಿ ಕಾಲದಲ್ಲಿ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಅತಿ ಹೆಚ್ಚು ರೈತರ ಆತ್ಮಹತ್ಯೆ ಆಗಿದ್ದು ಸಿದ್ರಾಮಣ್ಣನ ಕಾಲದಲ್ಲಿ ಕರ್ನಾಕಟದ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಪ್ರಿಯಾಂಕಾ, ರಾಹುಲ್ ಬಂದೋದ್ರಾ? ಯಾವುದು ಸೂಕ್ತವಲ್ಲವೋ ಅದನ್ನು ಮಾತನಾಡಿ ಜನರನ್ನು ಮರಳು ಮಾಡಲು ಸಾದ್ಯವಿಲ್ಲ. ಜನತೆಗೆ ಗೊತ್ತಿರುವ ಮಾಹಿತಿ ಇದು, ಪ್ರಿಯಾಂಕಾ ಗಾಂದಿಗೆ ಕಾಂಗ್ರೆಸ್ ಸರಿಯಾದ ಮಾಹಿತಿ ನೀಡಿಲ್ಲ ಎಂದರು.
ರೇಡ್‌ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ, ಕಳ್ಳನ ಜೀವ ಹುಳ್ಳುಳ್ಳಗೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಬಿಜೆಪಿ ಬಂದರೆ ಕೇಂದ್ರ ಸರ್ಕಾರ ನೀಡುವ ಯೋಜನೆ ಎಲ್ಲರಿಗೂ ತಲುಪುತ್ತವೆ-ಗೋಪಾಲ್ ಕೃಷ್ಣ ಅಗರ್ವಾಲ್
ಹುಬ್ಬಳ್ಳಿ: ನಮ್ಮದು ಕೇಂದ್ರದಲ್ಲಿಯೂ ಸರ್ಕಾರವಿದೆ. ರಾಜ್ಯದಲ್ಲಿಯೂ ಸರ್ಕಾರ ಬಂದರೆ ಕೇಂದ್ರ ಸರ್ಕಾರ ನೀಡುವ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಅತೀ ಸಮಾನ್ಯ ವ್ಯಕ್ತಿಗೂ ಈ ಯೋಜನೆಗಳು ತಲುಪಲು ಸಹಾಯವಾಗುತ್ತದೆ ಎಂದು ರಾಷ್ಟ್ರೀಯ ವಕ್ತಾರರು ಹಾಗೂ ರಾಜ್ಯಸಭೆ ಸದಸ್ಯರಾದ ಗೋಪಾಲ್ ಕೃಷ್ಣ ಅಗರ್ವಾಲ್ ಹೇಳಿದರು.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಪರಸ್ಪರ ಕೂಡಿ ಕೆಲಸ ಮಾಡಿದರೆ ನಮ್ಮ ದೇಶವು ಆರ್ಥಿಕವಾಗಿ ವಿಶ್ವಮಟ್ಟದಲ್ಲಿ ಬೆಳೆಯಲು ಸಾದ್ಯವಾಗುತ್ತದೆ. ಒಂದು ವೇಳೆ ಬೇರೆ ಸರ್ಕಾರಗಳು ರಾಜ್ಯದಲ್ಲಿ ಆಡಳಿತಕ್ಕೆ ಬಂದರೆ ಕೇಂದ್ರದ ಯೋಜನೆಗಳೊಂದೆಗೆ ಸಹಕಾರ ನೀಡುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕೇರಳ ಸರ್ಕಾರ ಕೇಂದ್ರ ಸರ್ಕಾರ ಯೋಜನೆಗಳನ್ನು ಕೇವಲ 45% ಹಾಗೂ ಪಶ್ಚಿಮ ಬಂಗಾಳವು 35% ನಷ್ಟು ಜಾರಿಗೆ ತಂದಿದ್ದಾರೆ. ಆದರೆ ಕರ್ನಾಟಕವು 94% ಹಾಗೂ ಮಧ್ಯಪ್ರದೇಶ 99% ನಷ್ಟು ಜಾರಿ ಮಾಡಿವೆ ಎಂದರು.
ಈ ಮೊದಲು ಹಲವು ಯೋಜನೆಗಳ ಅಡಿಯಲ್ಲಿ ಜಾರಿಮಾಡಿದ ಹಣದಲ್ಲಿ ಕೇವಲ15% ರಷ್ಟು ಫಲಾನುಭವಿಗೆ ಸಿಗುತ್ತಿತ್ತು. ಉಳಿದ ಹಣ ದಲ್ಲಾಳಿಗಳ ಕೈ ಸೇರುತ್ತಿತ್ತು. ಈಗ ನೇರವಾಗಿ ಫಲಾನುಭವಿಯ ಅಕೌಂಟಗೆ ಹೋಗುತ್ತದೆ. ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ಯೋಜನೆ ಅಡಿಯಲ್ಲಿ ಸಾವಿರಾರು ರೈತರಿಗೆ ನೇರ ಹಣ ವರ್ಗಾವಣೆಯಗುತ್ತಿದೆ ಎಂದರು.












Click it and Unblock the Notifications