ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಂದಗೋಳ: ಪುರಾತನ ಗುಹೆ ಕುಸಿತದಿಂದ ಗ್ರಾಮಸ್ಥರ ಬದುಕು ಅತಂತ್ರ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜೂ.26: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಪುರಾತನ ಚಾಲುಕ್ಯರ ಕಾಲದ ಗುಹೆಯೊಂದು ಕುಸಿದಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಹೌದು, ಹೀಗೆ ಕುಸಿದಿರುವ ಗುಹೆ ಚಾಲುಕ್ಯರ ಕಾಲದ್ದು, ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಗುಹೆಯನ್ನು ರಾಜ ಮಹಾರಾಜರು ಯುದ್ಧದ ಸಮಯದಲ್ಲಿ ತಮ್ಮ ರಕ್ಷಣೆಗಾಗಿ ಬಳಸಿಕೊಳ್ಳುತ್ತಿದ್ದರಂತೆ. ಅಲ್ಲದೇ ಗುಹೆಯಲ್ಲಿ ಗವಿಸಿದ್ದೇಶ್ವರ ದೇಗುಲ ಕೂಡಾ ಇತ್ತಂತೆ ಆದರೆ ಇಂತಹ ಇತಿಹಾಸ ಪ್ರಸಿದ್ಧ ಗುಹೆ ಕಳೆದ ಕೆಲವು ದಿನಗಳ ಹಿಂದೆ ಗುಹೆ ಕುಸಿಯುತ್ತಿದ್ದು, ಪರಿಣಾಮವಾಗಿ ಪುರಾತನ ಗುಹೆ ಸಂಪೂರ್ಣ ಮುಚ್ಚಿ ಹೋಗುವ ಹಂತದಲ್ಲಿದೆ.

ಸೊಗಸಾಗಿ ಬೆಳದ ಹೆಸರು,ಉದ್ದು ಬೆಳೆಗೆ ಹಳದಿ ರೋಗ, ರೈತರಲ್ಲಿ ಆತಂಕಸೊಗಸಾಗಿ ಬೆಳದ ಹೆಸರು,ಉದ್ದು ಬೆಳೆಗೆ ಹಳದಿ ರೋಗ, ರೈತರಲ್ಲಿ ಆತಂಕ

ಗುಹೆ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ನೆಲಕಚ್ಚಿದ ಮರಗಳು

ಇನ್ನು ಗುಹೆ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಗುಹೆಯ ಅಕ್ಕಪಕ್ಕದ ‌ಮರಗಳು ನೆಲಕ್ಕೆ ಬಿದ್ದಿವೆ, ಸ್ಥಳೀಯರ ಮನೆಗಳಿಗೆ ದಕ್ಕೆ ಉಂಟಾಗಿದೆ. ಇದಲ್ಲದೇ ಮನೆ, ಶೌಚಾಲಯ, ಬಣವೆಗಳು ಯಾವಾಗ ಕುಸಿದು ಬೀಳುತ್ತವೆ ಎಂಬ ಆತಂಕದಲ್ಲಿ ಜೀವ ಭಯದಿಂದ ಟ್ಯಾಕ್ಟರ್ ಟೇಲರ್, ದನದ ಕೊಟ್ಟಿಗೆಯಲ್ಲಿ ಜನರು ವಾಸಿಸುವಂತಾಗಿದೆ.

cave built during chalukya era collapsed in Kundgol Taluk

ಈ ಹಿಂದೆ ಗುಹೆ ನೆಲಕ್ಕೆ ಬಿದ್ದಾಗ ಸ್ಥಳೀಯ ಶಾಸಕಿ ಕುಸುಮಾವತಿ ಶಿವಳ್ಳಿ, ತಹಸೀಲ್ದಾರ ಅಶೋಕ್ ಶಿಗ್ಗಾಂವಿ ಸೇರಿದಂತೆ ಅಧಿಕಾರಿಗಳ ವರ್ಗ ಪರಿಶೀಲನೆ ನಡೆಸಿ ಗುಹೆ ಸುತ್ತ 50 ಮೀಟರ್ ವಾಸಿಸದಂತೆ ತಿಳಿಸಿದ್ದಾರೆ. ಆದರೆ ಇಲ್ಲಿನ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾತ್ರ ಮಾಡಿಲ್ಲ. ನಾಮಾಕವಾಸ್ಥೆಗೆ ಎಚ್ಚರಿಕೆ ಎಂಬ ಬಿಳಿಹಾಳೆಯ ಬೋರ್ಡ್ ಹಾಕಲಾಗಿದ್ದು, ಸ್ಥಳದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್, ಅಥವಾ ಮನೆ ಬೀಳುವ ಹಂತದಲ್ಲಿರುವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲಾ. ಇದರಿಂದ ಜನ ಜಾನುವಾರು ಭಯದಿಂದ ಬೀದಿ ಬಯಲಲ್ಲೇ ಬದುಕು ನಡೆಸುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕಾಗಿದೆ.

cave built during chalukya era collapsed in Kundgol Taluk

ತಮ್ಮ ಮನೆ ಬಿಟ್ಟು ಟ್ರ್ಯಾಕ್ಟರ್ ಟೇಲರ್, ದನದ ಕೊಟ್ಟಿಗೆಯಲ್ಲಿ ಜೀವನ

ಒಂದು ಕಡೆಗೆ ಕುಸಿದಿರುವ ಪುರಾತನ ಗುಹೆ, ‌ಮತ್ತೊಂದೆಡೆ ತಮ್ಮ ಮನೆ ಬಿಟ್ಟು ಟ್ರ್ಯಾಕ್ಟರ್ ಟೇಲರ್, ದನದ ಕೊಟ್ಟಿಗೆಯಲ್ಲಿ ಜೀವನ ನಡೆಸುತ್ತಿರುವ ಕುಟುಂಬಗಳು. ಈ ದೃಶ್ಯಗಳು ಕಂಡುಬಂದಿದೆ.

cave built during chalukya era collapsed in Kundgol Taluk

ಗುಹೆಯನ್ನು ರಾಜ ಮಹಾರಾಜರು ಯುದ್ಧದ ಸಮಯದಲ್ಲಿ ತಮ್ಮ ರಕ್ಷಣೆಗಾಗಿ ಬಳಸಿಕೊಳ್ಳುತ್ತಿದ್ದರಂತೆ. ಅಲ್ಲದೇ ಗುಹೆಯಲ್ಲಿ ಗವಿಸಿದ್ದೇಶ್ವರ ದೇಗುಲ ಕೂಡಾ ಇತ್ತಂತೆ. ಆದರೆ ಇಂತಹ ಇತಿಹಾಸ ಪ್ರಸಿದ್ಧ ಗುಹೆ ಕಳೆದ ಕೆಲವು ದಿನಗಳ ಹಿಂದೆ ಕುಸಿಯುತ್ತಿದ್ದು, ಪರಿಣಾಮವಾಗಿ ಪುರಾತನ ಗುಹೆ ಸಂಪೂರ್ಣ ಮುಚ್ಚಿ ಹೋಗುವ ಹಂತದಲ್ಲಿದೆ. ಇನ್ನು ಗುಹೆ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಗುಹೆಯ ಅಕ್ಕಪಕ್ಕದ ‌ಮರಗಳು ನೆಲಕ್ಕೆ ಬಿದ್ದಿವೆ. ಸ್ಥಳೀಯರ ಮನೆಗಳಿಗೆ ದಕ್ಕೆ ಉಂಟಾಗಿದೆ.

English summary
Chalukyan period cave collapsing in Sanshi village of Kundagola taluk, Dharwad district. which has hundreds of years of history, took place at the The trees on the sides of the cave fell to the ground as the cave hit the ground.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X