• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ರಾಹುಲ್ ಗಾಂಧಿ ಇಷ್ಟು ಧೈರ್ಯವಂತರೆಂದು ನಂಬಲಾಗುತ್ತಿಲ್ಲ!'

By Prasad
|

ಬೆಂಗಳೂರು, ಏಪ್ರಿಲ್ 27 : "ರಾಹುಲ್ ಗಾಂಧಿ ಇಷ್ಟೊಂದು ಧೈರ್ಯವಂತರೆಂದು ನಂಬುವುದಕ್ಕೇ ಆಗುತ್ತಿಲ್ಲ. ಅವರು ತಾವೇ ಸ್ವತಃ ಪೈಲಟ್ ಆಗಿರುವುದಲ್ಲದೆ, ಸಂಕಷ್ಟದ ಸಮಯದಲ್ಲಿ ಅವರು ವಿಮಾನದ ಪೈಟಲ್ ಗಳ ಜೊತೆಗೇ ಇದ್ದರು. ನಡೆದಿದ್ದನ್ನು ನೋಡಿದರೆ ನಾವು ಬದುಕುತ್ತೇವೆ ಎಂದೇ ಎಣಿಸಿರಲಿಲ್ಲ!"

ಹೀಗೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಧೈರ್ಯವನ್ನು ಟ್ವಿಟ್ಟರ್ ನಲ್ಲಿ ಕೊಂಡಾಡಿದವರು ರಾಹುಲ್ ಎಸ್ ರವಿ ಎಂಬುವವರು. ರಾಹುಲ್ ಗಾಂಧಿ ಮತ್ತು ಉಳಿದವರು ಪಾರಾಗಿ ಬಂದಿದ್ದು ಪವಾಡ ಎಂದು ಬಣ್ಣಿಸಲಾಗುತ್ತಿದೆ.

ರಾಹುಲ್ ಗಾಂಧಿಯಿದ್ದ ವಿಮಾನದಲ್ಲಿ ಅನುಮಾನಾಸ್ಪದ ತಾಂತ್ರಿಕ ತೊಂದರೆ, ದೂರು

ಆಗಿದ್ದೇನೆಂದರೆ, ರಾಹುಲ್ ಗಾಂಧಿ ಅವರು ದೆಹಲಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಆಕಾಶದಲ್ಲಿಯೇ ಗಡಗಡನೆ ನಡುಗಿದ್ದ ವಿಮಾನ ವಿಮಾನದಲ್ಲಿದ್ದವರಲ್ಲಿ ಮೃತ್ಯುಭಯವನ್ನು ತಂದಿತ್ತು. ಆದರೆ, ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ.

ಈ ಕುರಿತು ಕೌಶಲ್ ವಿದ್ಯಾರ್ಥಿ ಎಂಬುವವರು ಕೂಡ, "ಜೀವಂತವಾಗಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ನನ್ನ ಜೀವನದಲ್ಲೇ ಇಂಥ ಭಯಾನಕ ಘಟನೆ ಎಂದೂ ನಡೆದಿಲ್ಲ. ವಿಮಾನ ನೆಲಕ್ಕೆ ಬೀಳುವ ಹಂತ ತಲುಪಿತ್ತು. ಕೋಪೈಲಟ್ ಗಳ ತಾಳ್ಮೆ ಮತ್ತು ರಾಹುಲ್ ಅವರ ಧೈರ್ಯದಿಂದಾಗಿ ಪರಿಸ್ಥಿತಿ ತಹಬದಿಗೆ ಬಂದಿತು" ಎಂದು ಟ್ವೀಟ್ ಮಾಡಿದ್ದಾರೆ.

ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಅವರಿಗೆ ಕರೆ ಮಾಡಿ ಅವರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ. ಆದರೆ, ಕೆಲ ಮತಿಹೀನರು ರಾಹುಲ್ ಗಾಂಧಿ ಅವರನ್ನು ಕೊಲ್ಲಲೆಂದೇ ಮೋದಿ ಮತ್ತು ಅಮಿತ್ ಶಾ ಅವರು ಹೂಡಿದ ಷಡ್ಯಂತ್ರ ಎಂದು ವಾದಿಸುತ್ತಿದ್ದಾರೆ.

ಕರ್ನಾಟಕ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಅವರಿಗೆ ದೂರು ನೀಡಲಾಗಿದ್ದು, ಈ ಘಟನೆಯ ತನಿಖೆ ನಡೆಸುವಂತೆ ಒತ್ತಾಯಿಸಲಾಯುತ್ತಿದೆ. ಈ ವಿಮಾನದಲ್ಲಿ ರಾಹುಲ್ ಗಾಂಧಿ ಅವರ ಜೊತೆ ಇನ್ನೂ ಮೂವರು ಸಹಪ್ರಯಾಣಿಕರಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಹುಲ್ ಗಾಂಧಿ ಅವರು ಕರ್ನಾಟಕದಾದ್ಯಂತ ಸಂಚರಿಸುತ್ತಿದ್ದಾರೆ. ಗುರುವಾರ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಕಾರವಾರಕ್ಕೆ ತೆರಳಿ ಅಲ್ಲಿ ಪ್ರಚಾರ ನಡೆಸಿದರು. ಶುಕ್ರವಾರ ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Flight scare mid air : Never thought we would make it through what happened in the aircraft today... Can't believe how brave Rahul Gandhi is... Being a pilot himself he was constantly by the side of the crew through the crisis. Rahul S Ravi has narrated the horrible experience he has faced along with Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more