ಸರಿಯೋ ತಪ್ಪೋ ಮೈತ್ರಿ ಆಗಿದೆ, ವಿಚ್ಛೇದನ ಆಗದು: ಬಸವರಾಜ ರಾಯರಡ್ಡಿ
ಹುಬ್ಬಳ್ಳಿ, ಜುಲೈ 2: ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಆಗಬಾರದಿತ್ತು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಬಸವರಾಜ ರಾಯರಡ್ಡಿ ಅಭಿಪ್ರಾಯಪಟ್ಟರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಆಗಬಾರದಿತ್ತು. ಸರಿಯೋ ತಪ್ಪೋ ಮೈತ್ರಿ ಆಗಿದೆ. ಈಗ ಏಕಾಏಕಿ ವಿಚ್ಛೇದನ ಸಾಧ್ಯವಿಲ್ಲ. ಮೈತ್ರಿ ಮುರಿಯಲು ಸರಿಯಾದ ಕಾರಣಗಳು ಬೇಕು. ನನ್ನ ಪ್ರಕಾರ ಮೈತ್ರಿ ಆಗಬಾರದಿತ್ತು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅವರು, ಒಂದು ವೇಳೆ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಿದರೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಹೇಳಿದರು. ಯಡಿಯೂರಪ್ಪ ಅವರ ಮೇಲೆ ಅಪರಾಧ ಪ್ರಕರಣಗಳಿರುವುದರಿಂದ ಅವರಿಗೆ ಮತ್ತೆ ಸಿಎಂ ಗಾದಿಗೆ ಏರುವ ಅವಕಾಶ ನೀಡುವುದಿಲ್ಲ ಎಂದು ಅಭಿಪ್ರಾಯಪಟ್ಟರು.

'ನನಗೆ ದೆಹಲಿ ಮಟ್ಟದ ಬಿಜೆಪಿ ನಾಯಕರು ನೀಡಿರುವ ಮಾಹಿತಿ ಪ್ರಕಾರ, ಬಿಜೆಪಿ ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವುದಿಲ್ಲ. ಯಡಿಯೂರಪ್ಪ ಅವರ ಮೇಲೆ 12ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ. ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಹೀಗಾಗಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಹೇಳಿದರು.











Click it and Unblock the Notifications