ಬಿಜೆಪಿಯವರು ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ: ಹುಬ್ಬಳ್ಳಿಯಲ್ಲಿ ಡಿ.ಕೆ.ಶಿ ಆರೋಪ
ಹುಬ್ಬಳ್ಳಿ, ಡಿಸೆಂಬರ್, 27: ನಮ್ಮ ರಾಜ್ಯದ ಗಡಿ ಈಗಾಗಲೇ ಸೀಲ್ ಆಗಿದೆ. ಮಹಾರಾಷ್ಟ್ರದ ಹಳ್ಳಿಗಳು ನಮಗೆ ಬೇಡ. ಮಹಾರಾಷ್ಟ್ರದ ಮಂತ್ರಿಗಳು, ನಾಯಕರು, ಮುಖಂಡರು ಬೆಳಗಾವಿಯನ್ನು ಪ್ರವೇಶ ಮಾಡದೇ ಇದ್ದರೆ ಸಾಕು. ಆಗ ಜನ ನೆಮ್ಮದಿಯಿಂದ ಜೀವನ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹುಬ್ಬಳ್ಳಿಯಲ್ಲಿ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಿಕ್ಕೆ ಬರುತ್ತದೆ. ಬೆಳಗಾವಿ ಮತ್ತು ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡುತ್ತೇವೆ. ಜನರಿಗೆ ಉದ್ಯೋಗ ಕಲ್ಪಿಸುವ ಕೆಲಸವನ್ನು ಮಾಡುತ್ತೇವೆ. ಈ ಮೂಲಕ ಆ ಭಾಗದ ಜನ ವಲಸೆ ಹೊಗುವುದನ್ನು ತಪ್ಪಿಸುತ್ತೇವೆ. ಈಗಾಗಲೇ ಸುವರ್ಣಸೌಧವನ್ನು ಕಟ್ಟಿದ್ದೇವೆ. ಆದರೆ ಬಿಜೆಪಿಯವರು ಶಾಂತಿ ಬಂಗ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಗೃಹ ಸಚಿವರು ಎರಡು ರಾಜ್ಯದವರನ್ನು ಕರೆದು ಮಾತನಾಡಿಸಿದ್ದರು. ಅವರ ಮಾತಿಗೆ ಕಿಮ್ಮತ್ತೆ ಇಲ್ಲವಾ? ಇದು ಬಿಜೆಪಿಯವರ ಇಂಟರ್ನಲ್ ಪ್ಲ್ಯಾನ್ ಆಗಿದೆ. ನಮ್ಮದು ಹಾಗೂ ಮಹಾರಾಷ್ಟ್ರ ರಾಜಕೀಯಕ್ಕೆ ಯಾವುದೇ ಸಂಬಂಧವಿಲ್ಲ. ನಮ್ಮ ನೆಲ, ಜಲ ನಮ್ಮ ಹಕ್ಕು ಎಂದು ಕಿಡಿಕಾರಿದರು.

ಬಿಜೆಪಿ ವಿರುದ್ಧ ಡಿ.ಕೆ. ಶಿವಕುಮಾರ್ ಆಕ್ರೋಶ
ಬಸ್ ಯಾತ್ರೆ ಹಾಗೂ ಪಂಚರತ್ನ ಯಾತ್ರೆಯಲ್ಲಿ ಕೋವಿಡ್ ನಿಯಮ ಪಾಲನೆ ಮಾಡಿ ಎಂಬ ಸುಧಾಕರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾತ್ರೆಯನ್ನು ಅವರು ಹೇಳಿದರು ಮಾಡುತ್ತೇವೆ. ಹೇಳದೇ ಇದ್ದರೂ ಮಾಡುತ್ತೇವೆ. ಬಿಜೆಪಿಯವರು ಸುಮ್ಮನೆ ಜನರಿಗೆ ಭಯ ಹುಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಜನರು ಈಗಷ್ಟೇ ಸುಧಾರಣೆ ಗೊಂಡಿದ್ದಾರೆ. ಆದರೆ ಬಿಜೆಪಿಯವರು ಜನರಿಗೆ ದೊಡ್ಡ ಭಯ ಹುಟ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮದೇ ಆದ ಕೊಡುಗೆ ನೀಡಿದ್ದಾರೆ
ಇನ್ನು ಅವಧಿ ಪೂರ್ವ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಆಫೀಸರ್ ಹತ್ತಿರ ಯಾಕೆ ಚರ್ಚೆ ಮಾಡಿದ್ದರು? ಏನೂ ಚರ್ಚೆ ಮಾಡಿದ್ದಾರೆ ಅನ್ನುವುದು ಬಹಿರಂಗ ಮಾಡಲಿ. ಒಕ್ಕಲಿಗರಿಗೆ, ಲಿಂಗಾಯತರಿಗೆ ಶೇಕಡಾವಾರು ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಒಕ್ಕಲಿಗರು ಯಾರೂ ಭಿಕ್ಷುಕರಲ್ಲ. ಒಕ್ಕಲಿಗರು ಅಂದರೆ ಅನ್ನದಾತರು. ಶ್ರಮ ಪಟ್ಟು ಕೆಲಸ ಮಾಡಿ, ಭೂಮಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಮೂರು ಪರ್ಸೆಂಟ್‌ಗೆ ಭಿಕ್ಷೆ ಬೆಡುವುದಕ್ಕೂ ಹೋಗಿಲ್ಲ. ಅವರಿಗೇನು ಮೀಸಲಾತಿ ಇದೆ ಅದನ್ನ ಕೊಡಲಿ. ಜನಸಂಖ್ಯಾ ಆಧಾರದ ಮೇಲೆ ಯಾರಿಗೆ ಏಣು ಸಿಗಬೇಕೋ ಅದು ಸಿಗಲಿ.

ಬೇರೆಯವರ ಮೀಸಲಾತಿ ಕೀಳುವುದು ಬೇಡ
ಬೇರೆಯವರ ಮೀಸಲಾತಿ ಕಿತ್ತುಕೊಂಡು ಕೋಡುವುದು ಬೇಡ. ಸ್ವಾಮೀಗಳನ್ನು ಒಪ್ಪಿಸಿ, ಮೂರು-ನಾಲ್ಕು ಪರ್ಸೆಂಟ್ ಕೊಡುತ್ತೇವೆ ಅಂದಿದ್ದಾರಂತೆ. ನಾವು ಭೀಕ್ಷುಕರಲ್ಲ, ನಮ್ಮ ಸಮುದಾಯ 12 ಪರ್ಸೆಂಟ್ ಇದೆ. ನಮಗೆ ಹನ್ನೆರಡು ಪರ್ಸಂಟ್ ಸಿಗಬೇಕು, ನಮ್ಮ ಹಕ್ಕನ್ನು ಪಡೆಯುತ್ತೇವೆ.

ಯಾರನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ
ಕಾಂಗ್ರೆಸ್ ಪಕ್ಷದ ಇನ್ನು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲನೇ ಪಟ್ಟಿ ಡಿಸೆಂಬರ್ 31ರೊಳಗೆ ಮುಗಿಸಿ ಅಂದದ್ದೇವೆ. ಜನವರಿ 2 ಇಲ್ಲ 3ರಂದು ಪಟ್ಟಿ ನನ್ನ ಕೈ ಸೇರುತ್ತದೆ. ಜನವರಿ 15ರೊಳಗೆ ಈ ಬಗ್ಗೆ ಚರ್ಚೆ ಮಾಡುತ್ತೇವೆ. ರಾಜಕಾರಣದಲ್ಲಿ ಯಾರನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು.












Click it and Unblock the Notifications