ಬೆಂಗೇರಿ ರಾಷ್ಟ್ರಧ್ವಜಕ್ಕೆ ಕರ್ನಾಟಕದಿಂದಲೇ ಅತೀ ಹೆಚ್ಚು ಬೇಡಿಕೆ

Posted By:
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್ 9: ಹುಬ್ಬಳ್ಳಿಯ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಎಂದೊಡನೆ ನೆನಪಾಗುವುದು ಭಾರತದ ಹೆಮ್ಮೆಯ ತ್ರಿವರ್ಣ ಧ್ವಜ. ಇಡೀ ದೇಶಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಧ್ವಜವನ್ನು ಪೂರೈಸುವ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಘಕ್ಕೆ ಈ ಬಾರಿ ಕರ್ನಾಟಕದಿಂದಲೇ ಧ್ವಜಕ್ಕಾಗಿ ಹೆಚ್ಚಿನ ಬೇಡಿಕೆ ಬಂದಿರುವುದು ವಿಶೇಷ.

ಸ್ವಾತಂತ್ರ್ಯೋತ್ಸವ ದಿನ: ಬೆಂಗೇರಿ ರಾಷ್ಟ್ರಧ್ವಜಕ್ಕೆ ಹೆಚ್ಚಿನ ಬೇಡಿಕೆ

ಪ್ರತಿವರ್ಷವೂ ಉತ್ತರ ಪ್ರದೇಶದಿಂದ ಹೆಚ್ಚಿನ ಬೇಡಿಕೆ ಬರುತ್ತಿತ್ತು. ಆದರೆ ಈ ಬಾರಿ ಕರ್ನಾಟಕದಿಂದಲೇ ಹೆಚ್ಚಿನ ಬೇಡಿಕೆ ಬಂದಿದ್ದು, ಉತ್ತರ ಪ್ರದೇಶ ಧ್ವಜ ಬೇಡಿಕೆಯಲ್ಲಿ ಎರಡು ಮತ್ತು ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿವೆ.

Bengeri tricolour national flag: highest demand is from Karnataka!

ಈ ಬಾರಿ ಸುಮಾರು 2.5 ಕೋಟಿ ರೂ. ವಹಿವಾಟು ನಡೆಸುವ ಗುರಿಯನ್ನು ಗ್ರಾಮೋದ್ಯೋಗ ಸಂಘ ಹೊಂದಿದೆ.

ತ್ರಿವರ್ಣ ಧ್ವಜ ವಿನ್ಯಾಸಕಾರನ ಜನ್ಮದಿನ ನೆನಪಿಸಿಕೊಂಡ ಟ್ವಿಟ್ಟಿಗರು

ಇಲ್ಲಿ ತಯಾರಾಗುವ ಧ್ವಜಗಳನ್ನು ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಪರೀಕ್ಷಿಸುತ್ತದೆ. ಅದು ಅನುಮೋದನೆ ನೀಡಿದ ಬಳಿಕವೇ ದರ ನಿಗದಿ ಪಡಿಸುವುದು ಮತ್ತು ಪೂರೈಸುವುದು. ದೊಡ್ಡ ಧ್ವಜ (21 X 14 ಅಡಿ)ವಾದರೆ ಅಂದಾಜು 18,000 ರೂ. ಮತ್ತು ಚಿಕ್ಕ ದ್ವಜ, (6"x4") ವಾದರೆ 220 ರೂ.ವರೆಗೂ ದರ ನಿಗದಿಪಡಿಸಲಾಗುತ್ತದೆ.

Bengeri tricolour national flag: highest demand is from Karnataka!
Tallest Tricolor Hosted At Wagah Border

ಆಗಸ್ಟ್ 15, ಸ್ವಾತಂತ್ರ್ಯ ದಿನಕ್ಕೆ ಇನ್ನು ಕೆಲವೇ ದಿನ ಬಾಕಿ ಇರುವುದರಿಂದ ಧ್ವಜ ಪೂರೈಕೆ ಭರದಿಂದ ಸಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's pride tricolour flag which are produced mainly in Khadi Gramodyog in Bengeri, Hubballi, Dharwad district has this year got highest order from Karnataka itself.
Please Wait while comments are loading...