Bengaluru-Kudachi Double Track: ಬೆಂಗಳೂರು-ಕುಡಚಿ ರೈಲ್ವೆ ದ್ವಿಪಥ ಕಾಮಗಾರಿ ಪೂರ್ಣ- ಎಷ್ಟು ಕಿಮೀ? ಮಾಹಿತಿ, ಅಂಕಿಅಂಶ ವಿವರ
ಹುಬ್ಬಳ್ಳಿ, ಮಾರ್ಚ್, 10: ಮಾರ್ಚ್ 16 ಕರ್ನಾಟಕ ರೈಲ್ವೆ ಅಭಿವೃದ್ಧಿಯ ಐತಿಹಾಸಿಕ ದಿನವಾಗಲಿದೆ. ಯಾಕೆ ಅಂತೀರಾ ಸಂಪೂರ್ಣ ವರದಿ ಇಲ್ಲಿದೆ ಗಮನಿಸಿ.
ಹುಬ್ಬಳ್ಳಿ ದಕ್ಷಿಣ - ಸಂಶಿ ದ್ವಿಪಥ ರೈಲ್ವೆ ಹಳಿ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಪರಿಶೀಲನೆಯನ್ನು ಸಹ ಮಾಡಲಾಗಿದೆ. ಇದು ಬೆಂಗಳೂರು-ಕುಡಚಿವರೆಗೂ ಸಂಪರ್ಕ ಕಲ್ಪಿಸುವ ದ್ವಿಪಥ ಹಳಿ ಕಾಮಗಾರಿಯಾಗಿದೆ. ಹಾಗೆಯೇ ಇದು 749 ಕಿಲೋ ಮೀಟರ್ ಇರುವ ದ್ವಿಪಥ ರೈಲ್ವೆ ಹಳಿಯಾಗಿದೆ. ಹಾಗೆಯೇ ಈ ಮಾರ್ಗವು ತುಮಕೂರು, ಅರಸೀಕೆರೆ, ಬಿರೂರು, ಚಿಕ್ಕಜಜೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಗೆ ಸಂಪರ್ಕ ಕಲ್ಪಿಸಲಿದೆ.

ಈ ರೈಲ್ವೆ ದ್ಪಿಪಥ ಮಾರ್ಗವು ಮಾರ್ಚ್ 16ರಂದು ಲೋಕಾರ್ಪಣೆ ಆಗಲಿದೆ. ಹಾಗೆಯೇ ಇದು ಹುಬ್ಬಳ್ಳಿ ಭಾಗ ಸೇರಿದಂತೆ ಇತರ ಜಿಲ್ಲೆಗಳ ಜನರಿಗೂ ತುಂಬಾ ಸಹಾಯಕವಾಗಲಿದೆ. ಈ ಲೋಕಾರ್ಪಣೆ ದಿನ ಕರ್ನಾಟಕ ರೈಲ್ವೆ ಅಭಿವೃದ್ಧಿಯ ಐತಿಹಾಸಿಕ ದಿನವಾಗಲಿದೆ.
ಮಾರ್ಚ್ 12ಕ್ಕೆ ಪ್ರಧಾನಿ ಮೋದಿ ಭೇಟಿ
ಮಾರ್ಚ್ 12ರಂದು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆಗೆ ಪ್ರಧಾನಿ ಮೋದಿಯವರ ಮಂಡ್ಯಕ್ಕೆ ಆಗಮಿಸಲಿದ್ದಾರೆ. ಅಂದೇ ಹಲವು ಕಾರ್ಯಕ್ರಗಳಲ್ಲಿ ಭಾಗಿಯಾಗಲಿರುವ ಅವರು, ಹಾಗೆಯೇ ಹುಬ್ಬಳ್ಳಿಯ ಶ್ರೀ ಸಿದ್ಧರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ನಿರ್ಮಾಣವಾದ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ಕೂಡ ಉದ್ಘಾಟನೆ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ರೈಲ್ವೆ ಪ್ಲಾಟ್‌ಪಾರ್ಮ್‌ನ ಅಭಿವೃದ್ಧಿ ಕಾಮಗಾರಿ ಈಗಾಗಲೇ ಬಹುತೇಕ ಪೂರ್ಣವಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ಲಭಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 12 ರಂದು ಹುಬ್ಬಳ್ಳಿ-ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ಲಾಟ್‌ಫಾರ್ಮ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಪ್ರಲ್ಹಾದ್ ಜೋಶಿ ಹೇಳಿದ್ದೇನು?
ಪ್ರಧಾನಿ ಮೋದಿಯವರು ಐಐಟಿ-ಧಾರವಾಡದ ಶಾಶ್ವತ ಕ್ಯಾಂಪಸ್ ಉದ್ಘಾಟನೆ ಮಾಡಲಿದ್ದಾರೆ. ಇದೇ ವೇಳೆ ವಿಶ್ವದ ಅತಿ ಉದ್ದದ ಹುಬ್ಬಳ್ಳಿ ರೈಲ್ವೆ ಪ್ಲಾಟ್‌ಫಾರ್ಮ್ ಅವನ್ನು ಕೂಡ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾಹಿತಿ ನೀಡಿದ್ದಾರೆ.
ಈ ಪ್ಲಾಟ್ ಫಾರ್ಮ್ ಎರಡು ವರ್ಷಗಳ ಹಿಂದೆಯೇ ಉದ್ಘಾಟನೆಗೆ ಸಿದ್ಧಗೊಂಡಿತ್ತು. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ಲಾಟ್ ಉದ್ಘಾಟನೆ ಮಾಡಲಿದ್ದಾ ಎನ್ನುವ ಮಾಹಿತಿ ಲಭ್ಯವಾಗಿತ್ತು. ಆದರೆ ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಧಾನಿ ಮೋದಿವರು ಇದನ್ನು ಲೋಕಾರ್ಪಣೆ ಮಾಡಬೇಕೆಂದು ಬಯಸಿದ್ದರು.
ಪ್ಲಾಟ್ಫಾರ್ಮ್ನ ಉದ್ದ ಎಷ್ಟು?
ಈ ಮೊದಲು 1ನೇ ಪ್ಲಾಟ್‌ಫಾರ್ಮ್ 550 ಮೀಟರ್ ಉದ್ದ ಇತ್ತು. ಇದನ್ನು ವಿಸ್ತರಿಸಿ 10 ಮೀಟರ್ ಅಗಲದೊಂದಿಗೆ 1505 ಮೀಟರ್‌ವರೆಗೆ ವಿಸ್ತರಣೆ ಮಾಡಲಾಗಿದೆ. ಇದು ವಿಶ್ವದಲ್ಲಿಯೇ ಅತಿ ಉದ್ದದ ಪ್ಲಾಟ್ಫಾರಂ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.












Click it and Unblock the Notifications