ಸುಡುವ ಎಣ್ಣೆಯಲ್ಲಿ ಕೈ ಹಾಕಿದ ಅಯ್ಯಪ್ಪ ಭಕ್ತರು
ಹುಬ್ಬಳ್ಳಿ, ಜನವರಿ 06: ಹುಬ್ಬಳ್ಳಿಯ ಶಬರಿ ನಗರದಲ್ಲಿ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ವಡೆ ತಗೆಯುವ ಮೂಲಕ ಎಣ್ಣೆ ಸೇವೆ ಸಲ್ಲಿಸಿದ್ದಾರೆ.
ಅಯ್ಯಪ್ಪ ಸ್ವಾಮಿಯ ಭಕ್ತರು ಈ ಸಮಯದಲ್ಲಿ ಅಯ್ಯಪ್ಪನ ನಾಮ ಸ್ಮರಣೆಯಲ್ಲಿ ತೊಡಗಿಕೊಂಡಿರುತ್ತಾರೆ. ಪ್ರತಿದಿನವೂ ವಿಶಿಷ್ಟ ರೀತಿಯಲ್ಲಿ ಕಟ್ಟುನಿಟ್ಟಿನ ಆಚರಣೆ ಮಾಡುತ್ತಿರುತ್ತಾರೆ.
ಮಕರ ಸಂಕ್ರಮಣ ದಿನದಂದು ಶಬರಿಮಲೆಯಲ್ಲಿ ಮಕರ ಜ್ಯೋತಿ ಕಾಣಿಸುವವರೆಗೂ ಅಯ್ಯಪ್ಪ ಸ್ವಾಮಿಯ ಭಕ್ತರು ಕಠಿಣ ವೃತದಲ್ಲಿರುತ್ತಾರೆ. ಈ ನಡುವೆ ಹುಬ್ಬಳ್ಳಿಯ ಶಬರಿ ನಗರದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಸುಡುವ ಎಣ್ಣೆಯಲ್ಲಿ ಕೈ ಹಾಕಿ ವಡೆ ತಗೆಯುವ ಮೂಲಕ ಎಣ್ಣೆ ಸೇವೆ ಸಲ್ಲಿಸಿದ್ದಾರೆ

ಸ್ಥಳೀಯ ನೂರಾರು ಅಯ್ಯಪ್ಪ ಮಾಲಾಧಾರಿಗಳು ಕುದಿಯುವ ಎಣ್ಣೆಯಲ್ಲಿ ಕೈ ಹಾಕುವ ಮೂಲಕ ವಡೆಯನ್ನು ಹೊರ ತೆಗೆದು ಭಕ್ತಿಯ ಸಮರ್ಪಣೆ ಮಾಡಿದರು.
ನಿರಂತರವಾಗಿ ಐದು ವರ್ಷಗಳಿಂದಲೂ ಈ ರೀತಿಯ ಆಚರಣೆ ಮಾಡುತ್ತಾ ಬಂದಿದ್ದಾರೆ. ನಮಗೆ ಒಂದು ಹನಿ ಸುಡುವ ಎಣ್ಣೆ ಮೈಮೇಲೆ ಬಿದ್ದರೆ ಬೊಬ್ಬೆ ಏಳುತ್ತದೆ. ಆದರೆ ಕುದಿಯುವ ಎಣ್ಣೆಯಲ್ಲಿ ಕೈ ಹಾಕಿದರೂ ಯಾವದೇ ಸುಟ್ಟ ಗಾಯಗಳಾಗದಿರುವದು ವಿಶೇಷವಾಗಿದೆ.












Click it and Unblock the Notifications