ಸಂಗೊಳ್ಳಿ ರಾಯಣ್ಣ ನೆಲದಲ್ಲಿ ಕಂಬಳಿ ಹೊದ್ದು ಅಮಿತ್ ಶಾ ಪ್ರಚಾರ!

Posted By:
Subscribe to Oneindia Kannada

ಬೆಳಗಾವಿ, ಏಪ್ರಿಲ್ 13: ನಿನ್ನೆ(ಏ.12)ಯಿಂದ ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಇಂದು(ಏ.13) ಬೆಳಗಾವಿಯ ನಂದಗಡದಲ್ಲಿರುವ ಸಂಗೊಳ್ಳಿ ರಾಯಣ್ಣ ಸ್ಮಾರಕಕ್ಕೆ ತೆರಳಿ ಪುಷ್ಪನಮನ ಸಲ್ಲಿಸಿದರು.

ಬೇಂದ್ರೆ ನಿವಾಸಕ್ಕೆ ಅಮಿತ್ ಶಾ ಭೇಟಿ, ಸಕ್ಕರೆ ನೀಡಿ ಸ್ವಾಗತ

ಸಂಗೊಳ್ಳಿ ರಾಯಣ್ಣ ಸ್ಮಾರಕಕ್ಕೆ ಭೇಟಿ ನೀಡಿದ ಅಮಿತ್ ಶಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಕಂಬಳಿ ಹೊದ್ದಿದ್ದಿದ್ದು ವಿಶೇಷ. ಕುರುಬ ಸಮುದಾಯದ ಓಲೈಕೆಗಾಗಿ ಈ ಬಿರು ಬೇಸಿಗೆಯಲ್ಲೂ ಕಂಬಳಿ ಹೊದ್ದಿದ್ದ ಶಾ, ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

Assembly elections: Amit shah visits Hubballi and Belagavi

ಕಿತ್ತೂರು ರಾಣಿ ಚೆನ್ನಮ್ಮ ಅವರ ಸೇನಾಧಿಕಾರಿಯಾಗಿದ್ದ ರಾಯಣ್ಣ ಶೌರ್ಯಕ್ಕೆ ಮತ್ತೊಂದು ಹೆಸರು. ಜನ್ಮಭೂಮಿಯ ಬಗ್ಗೆ ಅವರಿಗಿದ್ದ ಪ್ರೀತಿ ಮತ್ತು ಸಮರ್ಪಣಾಭಾವ ಎಲ್ಲ ಪೀಳಿಗೆಗೂ ಆದರ್ಶ ಎಂದು ಈ ಸಂದರ್ಭದಲ್ಲಿ ಅವರು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಮಹಾನ್ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ವಿಗ್ರಹಕ್ಕೂ ಅಮಿತ್ ಶಾ ಮಾಲಾರ್ಪಣೆ ಮಾಡಿದರು. ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ರಣ ಕಹಳೆಗೆ ಊದಿದ ಕಿತ್ತೂರಿನ ಮಣ್ಣು ಅತ್ಯಂತ ಪವಿತ್ರ ನೆಲ ಎಂದು ಈ ಸಂದರ್ಭದಲ್ಲಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಮೇ 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪ್ರಚಾರ ಕಾರ್ಯ ಆರಂಭಿಸಿರುವ ಅಮಿತ್ ಶಾ ವಾರಕ್ಕೊಮ್ಮೆ ಎಂಬಂತೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಅವರ ಪ್ರಚಾರ ಕಾರ್ಯದ ಆರನೇ ಭಾಗವಾಗಿ ನಿನ್ನೆ ಹುಬ್ಬಳ್ಳಿಗೆ ಆಗಮಿಸಿರುವ ಅವರು ಇಂದು ಬೆಳಗಾವಿಯಲ್ಲೂ ಪ್ರಚಾರ ನಡೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka assembly elections 2018: BJP president amit shah visited Hubballi and Helagavi as part of his two day visit to Karnataka. He is busy in campaign for BJP for Assembly elections which will be taking place on May 12th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ