ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸಭೆ ಚುನಾವಣೆ 2023: ಹುಬ್ಬಳ್ಳಿಯ ಕಾಂಗ್ರೆಸ್‌ ಕಚೇರಿಯಲ್ಲಿ ಟಿಕೆಟ್‌ಗಾಗಿ ಜಟಾಪಟಿ, ವಿಡಿಯೋ ವೈರಲ್‌

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್‌, 28: ಹುಬ್ಬಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕಚ್ಚಾಟ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನೀಲ್‌ ಕುಮಾರ್ ಪಾಟೀಲ್‌ಗೆ ನೀಡುವಂತೆ ಬಹುತೇಕ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಮಿತಿ ಸಭೆಯಲ್ಲಿ ವಾಗ್ವಾದ ನಡೆದಿದ್ದು, ಪಕ್ಷದ ವೀಕ್ಷಕರ‌ ಮುಂದೆಯೇ ಟಿಕೆಟ್ ಆಕಾಂಕ್ಷಿಗಳ ಬೆಂಬಲಗರಿಂದ ಮಾತಿನ ಚಕಮಕಿ ನಡೆದಿದೆ. ಅಭ್ಯರ್ಥಿಗಳ ಆಯ್ಕೆ ಕುರಿತು ಹುಬ್ಬಳ್ಳಿಯ ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಗಲಾಟೆ ನಡೆದಿದೆ. ಇನ್ನೂ ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಎಐಸಿಸಿ ಕಾರ್ಯದರ್ಶಿ ಪಿ.ಸಿ. ವಿಷ್ಣುನಾದ್, ಕೆಪಿಸಿಸಿ ಉಪಾಧ್ಯಕ್ಷ ಪಿ.ವಿ. ಮೋಹನ್ ನೇತೃತ್ವದಲ್ಲಿ ಮಹಾನಗರ ಜಿಲ್ಲಾ ಹಾಗೂ ಗ್ರಾಮೀಣ ಜಿಲ್ಲಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಮಿತಿ ಸಭೆ, ಪ್ರಕ್ರಿಯೆ ನಡೆಯಿತು.

ಹುಬ್ಬಳ್ಳಿ ಕಿಮ್ಸ್ ರೀತಿ ಬೆಳಗಾವಿ ಬಿಮ್ಸ್ ಹಳ್ಳಿ ಜನರ ಸೇವೆ ಮಾಡಬೇಕು: ಸಿಎಂ ಬೊಮ್ಮಾಯಿಹುಬ್ಬಳ್ಳಿ ಕಿಮ್ಸ್ ರೀತಿ ಬೆಳಗಾವಿ ಬಿಮ್ಸ್ ಹಳ್ಳಿ ಜನರ ಸೇವೆ ಮಾಡಬೇಕು: ಸಿಎಂ ಬೊಮ್ಮಾಯಿ

ಟಿಕೆಟ್‌ಗಾಗಿ ಆಂತರಿಕ ಜಟಾಪಟಿ

ಕಾಂಗ್ರೆಸ್‌ನ ಹಿರಿಯ ಮುಖಂಡರು ಸಂದರ್ಶನದ ರೀತಿಯಲ್ಲಿ ಕೆಪಿಸಿಸಿಗೆ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳೊಂದಿಗೆ ಚರ್ಚೆ ನಡೆಸಿದ್ದರು. ಕೆಪಿಸಿಸಿಗೆ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳು, ಬೆಂಬಲಿಗ ಕಾರ್ಯಕರ್ತರ ದಂಡು ಸೇರಿತ್ತು. ಆಕಾಂಕ್ಷಿಗಳು ತಮ್ಮ ಹತ್ತಾರು ಬೆಂಬಲಿಗರೊಂದಿಗೆ ಬಂದು ಶಕ್ತಿಪ್ರದರ್ಶನ ಮಾಡಿದರು. ಇದೇ ವೇಳೆ ಕಾಂಗ್ರೆಸ್ ಕಚೇರಿಯಲ್ಲಿಯೇ ಆಕಾಂಕ್ಷಿಗಳ, ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ.

Assembly Election 2023: Fight for ticket in Hubballi Congress office, video viral

ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದ ರಜತ್ ಉಳ್ಳಾಗಡ್ಡಿ ಮಠ, ಅನಿಲ್‌ ಕುಮಾರ್ ಪಾಟೀಲ್ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ. ಪಕ್ಷದ ವೀಕ್ಷಕರ ಎದುರು ರಜತ್‌ಗೆ ಟಿಕೆಟ್ ನೀಡಬೇಕೆಂದು ಕೆಲವರು ಒತ್ತಾಯಿಸಿದರು. ಮತ್ತೊಂದೆಡೆ ಇನ್ನು ಕೆಲವರು ಅನೀಲ್‌ ಕುಮಾರ್‌ಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಹೀಗೆ ತಮ್ಮ ನಾಯಕರಿಗೆ ಟಿಕೆಟ್‌‌ ನೀಡಬೇಕು ಎಂದು ಎರಡು ಗುಂಪಿನ ನಡುವೆ ವಾಗ್ವಾದವೇ ನಡೆದಿದೆ. ಅಲ್ಲದೇ ಎರಡು ಗುಂಪಿನವರು ತಮ್ಮ ಅಭ್ಯರ್ಥಿಗಳ ಪರ ಜಯಘೋಷ ಹಾಕುವ ಮೂಲಕ ಸಭೆಯಲ್ಲಿ ಗೊಂದಲದ ವಾತಾವರಣವನ್ನು ಸೃಷ್ಟಿಸಿದ್ದರು.

ಕಾಂಗ್ರೆಸ್‌ ವಿರುದ್ಧ ಅಶ್ವತ್ಥ್‌ ನಾರಾಯಣ್‌ ಆಕ್ರೋಶ

ದೇಶದಲ್ಲಿ ಕೋವಿಡ್ ಹೆಚ್ಚಳವಾಗಿದ್ದು, ನಾವು ಮುನ್ನೆಚ್ಚರಿಕೆ ವಹಿಸಬೇಕು. ಚೀನಾದಲ್ಲಿ ಕೋವಿಡ್ ನಾವು ಬಿಟ್ಟಿದೀವಾ? ಇದೊಂದು ಸೋಂಕಿನ ಕಾಯಿಲೆ, ಹೊಸ ಹೊಸ ತಳಿ ಮೂಲಕ ಬರುತ್ತಿದೆ. ಇವರಿಗೆ ರಾಜಕೀಯ ಬಿಟ್ಟು ಬೇರೆ ಏನೂ ಇಲ್ಲ ಎಂದು ಡಿ.ಕೆ.ಶಿವಕುಮಾರ್‌ಗೆ ಸಚಿವ ಅಶ್ವತ್ಥ್‌ ನಾರಾಯಣ್‌ ಹುಬ್ಬಳ್ಳಿಯಲ್ಲಿ ತಿರುಗೇಟು ನೀಡಿದ್ದಾರೆ. ಅಲ್ಲದೆ ಕಾಂಗ್ರೆಸ್‌ನವರು ಜನರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ನಾವು ತುಪ್ಪವನ್ನು ಬಾಯಿಗೆ ಹಾಕುತ್ತೇವೆ ಎಂದು ವ್ಯಂಗ್ಯವಾಡಿದರು.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ಗೆ ಅಧಿಕಾರದ ಹಸಿವು ನಿರಂತರ ಕಾಡುತ್ತಿದೆ. ಅವರ ತಲೆಯಲ್ಲಿ ರಾಜಕೀಯ ವಿಚಾರ ಬಿಟ್ಟು ಬೇರೆನೂ ಇಲ್ಲ. ಜನರ ಬಗ್ಗೆ ಸ್ವಲ್ಪನೂ ಕಾಳಜಿ ಇಲ್ಲ. ಯಾವಾಗ ಅಧಿಕಾರಕ್ಕೆ ಬರುತ್ತೇವೆ ಎಂದು ಕಾಯುತ್ತಿದ್ದಾರೆ. ಅಧಿಕಾರ ತಪ್ಪಿ ಹೋಗಿರುವುದಕ್ಕೆ ಅವರಿಗೆ ಸಂಕಟ ಆಗುತ್ತಿದೆ. ಆದ್ದರಿಂದ ಅಧಿಕಾರ ಪಡೆಯುವುದಕ್ಕೆ ಕೋವಿಡ್ ನೆಪದಲ್ಲಿ ಅವಧಿಪೂರ್ವ ಚುನಾಚಣೆ ಅಂತಿದಾರೆ. ಅವರ ಅಭಿವೃದ್ಧಿ, ಕಾಂಗ್ರೆಸ್ ಅಭಿವೃದ್ಧಿಯೇ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

English summary
Karnataka Assembly Election 2023: Fight for ticket in Hubballi Congress office, Congress leaders Fight video viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X