ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಏರ್ ಕಾರ್ನಿವಲ್ ವಿಮಾನ

Posted By: Prithviraj
Subscribe to Oneindia Kannada

ಹುಬ್ಬಳ್ಳಿ, ಅಕ್ಟೋಬರ್, 14 : ಕೊಯಂಬತ್ತೂರು ಮೂಲದ ಏರ್ ಕಾರ್ನಿವಲ್ ವಿಮಾನಯಾನ ಸಂಸ್ಥೆ ಬೆಂಗಳೂರು- ಹುಬ್ಬಳ್ಳಿ ಮಾರ್ಗದಲ್ಲಿ ವಿಮಾನ ಸಂಚಾರ ಆರಂಭಿಸಲು ನಿರ್ಧರಿಸಿದ್ದು, ಮುಂದಿನ ನವೆಂಬರ್ ವೇಳೆಗೆ ನಾಗರಿಕರಿಗೆ ವಿಮಾನ ಸಂಚಾರ ಸೌಲಭ್ಯ ಒದಗಿಸುವುದಾಗಿ ಸಂಸ್ಥೆ ತಿಳಿಸಿದೆ.

ದೇಶದ ವಿಮಾನಯಾನ ಸಂಸ್ಥೆಗಳ ಪೈಕಿ ಏರ್ ಕಾರ್ನಿವಲ್ ಸಂಸ್ಥೆ 4ನೇ ಸ್ಥಾನ ಪಡೆದಿದೆ. ಹುಬ್ಬಳ್ಳಿಯಿಂದ ಕಾರ್ಯನಿರ್ವಹಿಸುತ್ತೇವೆ ಎಂದು ಸಂಸ್ಥೆ ಹೇಳಿದೆ.

ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಏರ್ ಕಾರ್ನಿವಲ್ ವಿಮಾನ

ಈ ಸಂಬಂಧ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶಕರಿಂದ ಒಪ್ಪಿಗೆ ಪಡೆಯಲಾಗಿದ್ದು, ತಮ್ಮ ಕಾರ್ಯಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಿಕೊಳ್ಳುತ್ತಿದ್ದೇವೆ ಎಂದು ಸಂಸ್ಥೆ ಸಂತಸ ವ್ಯಕ್ತಪಡಿಸಿದೆ.

ಈಗಾಗಲೇ ಬೆಂಗಳೂರು- ಹುಬ್ಬಳ್ಳಿ ಮಾರ್ಗದಲ್ಲಿ ಏರ್ ಇಂಡಿಯಾ ವಿಮಾನ ಸಂಚಾರ ಲಭ್ಯವಿದ್ದು, ಸೋಮವಾರ, ಮಂಗಳವಾರ, ಬುಧವಾರ ಮತ್ತು ಶುಕ್ರವಾರ ಏರ್ ಇಂಡಿಯಾ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.

ಏರ್ ಇಂಡಿಯಾ ವಿಮಾನಗಳು ಸಂಜೆ ಹೊತ್ತು ಲಭ್ಯವಿರುವುದರಿಂದ, ಏರ್ ಕಾರ್ನಿವಲ್ ಸಂಸ್ಥೆ ಮುಂಜಾನೆ ಸಮಯದಲ್ಲಿ ಸಂಚಾರ ಸೌಲಭ್ಯ ಒದಗಿಸಲು ಯೋಚಿಸುತ್ತಿದೆ.

"ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಏರ್ ಕಾರ್ನಿವಲ್ ಸಂಸ್ಥೆ ವಿಮಾನಯಾನ ಆರಂಭಿಸಲು ಅನುಮತಿ ನೀಡಲಾಗಿದ್ದು ಮುಂದಿನ ನವೆಂಬರ್ ಕೊನೆ ವಾರದಲ್ಲಿ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಸಂಚಾರ ಆರಂಭಿಸುತ್ತವೆ" ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಶಿವಾನಂದ ಬೆನಾಲ್ ಅವರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Coimbatore based Air Carnival the fourht regional airline in the country, will extend its operations to Hubballi by the end of November.
Please Wait while comments are loading...