ಹುಬ್ಬಳ್ಳಿ ಜನ ಹೂವಿನಂಥ ಮನಸಿನವರು: ನಟ ಶಿವರಾಜ್‌ಕುಮಾರ್‌

ಹುಬ್ಬಳ್ಳಿ, ಮೇ, 06: ರಾಜ್ಯ ವಿಧಾನಸಭೆ ಚುನಾವಾಣೆ ಹಿನ್ನೆಲೆ ರಾಜಕೀಯ ನಾಯಕರ ಪರ ಸ್ಯಾಂಡಲ್‌ವುಡ್‌ ಬಳಗವೇ ಪ್ರಚಾರಕ್ಕಿಳಿದಿದೆ. ಅದೇ ರೀತಿ ಇಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ನಟ ಶಿವರಾಜ್‌ಕುಮಾರ್‌ ಪ್ರಚಾರ ಮಾಡಿದರು. ಪ್ರಚಾರ ಸಭೆಯಲ್ಲಿ ಮಾತನಾಡಿದ ಶಿವರಾಜ್‌ಕುಮಾರ್, ಹುಬ್ಬಳ್ಳಿಯವರು ಹೂವಿನಂತ ಮನಸಿನವರು. ಹುಬ್ಬಳ್ಳಿ ಅಂದ ತಕ್ಷಣ ಒಂದು ಸ್ಪೆಷಲ್ ಕನೆಕ್ಷನ್. ಆದ್ದರಿಂದ ಇದು ನನಗೆ ಅದೃಷ್ಟದ ಜಾಗ ಆಗಿದೆ ಎಂದು ವರ್ಣಿಸಿದರು.

ನಾನು ಹುಬ್ಬಳ್ಳಿಯಲ್ಲಿ ಮಾಡಿದ ಎಲ್ಲಾ ಸಿನಿಮಾಗಳು ಹಿಟ್ ಆಗಿವೆ. ಅಪ್ಪಾಜಿ ಕಾಲದಿಂದಲೂ ನಮಗೆ ಹುಬ್ಬಳ್ಳಿ ಸ್ಪೆಷಲ್. ನಾನು ಇಲ್ಲಿಗೆ ಬಂದಾಗ ಯಾವಾಗಲೂ ಜಗದೀಶ್ ಶೆಟ್ಟರ್ ಮನೆಗೆ ಹೋಗುತ್ತಿದೆ. ಆಗ ಅವರ ಮನೆಯಲ್ಲಿ ಮಾಡುತ್ತಿದ್ದ ಅವಲಕ್ಕಿ ತುಂಬಾ ಚೆನ್ನಾಗಿರುತ್ತಿತ್ತು. ಅಲ್ಲದೆ ಅವರ ಕುಟುಂಬದ ಜೊತೆ ಬಹಳ ಒಡನಾಟ ಇತ್ತು. ಆದ್ದರಿಂದ ಶೆಟ್ಟರ್ ಯಾವುದೇ ಪಕ್ಷದಲ್ಲಿ ಇದ್ದರೂ ನಾನು ಅವರ ಮನೆಗೆ ಹೋಗುತ್ತಿದ್ದೆ ಎಂದರು.

Actor Shiva Rajkumar: Hubballi is special place for me says Shiva Rajkumar

ಜಗದೀಶ್‌ ಶೆಟ್ಟರ್ ಪತ್ನಿಗೆ ಬಹಳ ಶಾಂತವಾಗಿದ್ದಾರೆ. ಅವರನ್ನು ನೋಡಿ ನಾವು ಕಲಿಯಬೇಕಾಗಿದೆ. ಹಾಗೆಯೆ ಯಾರನ್ನು ಗೆಲ್ಲಿಸಬೇಕು ಅನ್ನುವುದು ಹುಬ್ಬಳ್ಳಿ ಜನರಿಗೆ ಚೆನ್ನಾಗಿ ಗೊತ್ತಿದೆ. ಶೆಟ್ಟರ್ ಗೆದ್ದಮೇಲೆ ನಾನು ಮತ್ತೆ ಇಲ್ಲಿಗೆ ಬರುತ್ತೇನೆ. ನಂತರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎನ್ನುವ ಹಾಡು ಹೇಳಿ ಗಮನ ಸೆಳೆದರು.

ಬಜರಂಗದಳ ನಿಷೇಧದ ಬಗ್ಗೆ ಶೆಟ್ಟರ್‌ ಹೇಳಿದ್ದೇನು?

ವಿಧಾನಸಭೆ ಚುನಾವಣೆ ಹಿನ್ನೆಲೆ ಇತ್ತೀಚೆಗಷ್ಟೇ ಕಾಂಗ್ರೆಸ್‌ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬಜರಂಗದಳ ನಿಷೇಧಿಸುವುದಾಗಿ ಹೇಳಿದ್ದರು. ಇದು ರಾಜ್ಯದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದು, ಮತ್ತೊಂದೆಡೆ ಬಿಜೆಪಿ ನಾಯಕರು ಕೂಡ ಕಾಂಗ್ರೆಸ್‌ ವಿರುದ್ಧ ಕಿಡಿಕಾರುತ್ತಲೇ ಇದ್ದಾರೆ. ಇದೀಗ ಈ ವಿಚಾರಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಜಗದೀಶ್‌ ಶೆಟ್ಟರ್‌, ಯಾವುದೇ ರೀತಿಯಲ್ಲಿ ಬಜರಂಗದಳವನ್ನು ಬ್ಯಾನ್ ಮಾಡಲ್ಲವೆಂದು ಕಾಂಗ್ರೆಸ್ ಹಿರಿಯ ನಾಯಕರು ಮತ್ತು ಪ್ರಾಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆಂದು ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಇದರ ಬಗ್ಗೆ ನಾನು ಹೆಚ್ವು ಮಾತನಾಡುವುದಿಲ್ಲ. ಯಾವುದೇ ಸಂಸ್ಥೆ, ಸಂಘಟನೆಯನ್ನು ಬ್ಯಾನ್ ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಹೊರತು ರಾಜ್ಯ ಸರ್ಕಾರಕ್ಕೆ ಇರುವುದಿಲ್ಲ ಎಂದರು. ಇನ್ನು ಎಸ್‌ಸಿ, ಎಸ್‌ಟಿ ಮೀಸಲಾತಿ ರದ್ದುಗೋಳಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಒಟ್ಟಾರೆ ಸೀಜ್ ಆಗಿದೆ. ಮುಸ್ಲಿಮರ ಮೀಸಲಾತಿ ತೆಗೆದು ಹಂಚಿಕೆ ಮಾಡಿದ್ದರು. ಸುಪ್ರೀಂ ಕೋರ್ಟ್ ಅದನ್ನು ರದ್ದು ಮಾಡಿದೆ. ಆದೇಶ ಹೊರಗೆ ಬರುವವರೆಗೂ ಕಾಯಬೇಕು ಎಂದರು. ಮೀಸಲಾತಿ ವಿಚಾರ ಕೋರ್ಟ್‌ನಲ್ಲಿರುವುದರಿಂದ ಏನು ‌ಮಾಡುವುದಕ್ಕೆ ಆಗುವುದಿಲ್ಲ. ಕಾನೂನು ಪ್ರಕಾರ ಹೋಗಬೇಕು ಎಂದರು.

ಬಿಜೆಪಿ ಬಹುಮತಗಳಿಂದ ಗೆಲುವು ಸಾಧಿಸಲಿದೆ

ಇನ್ನು ಹುಬ್ಬಳ್ಳಿಯ ಕಾಡಸಿದಶ್ವೇರ ಮಹಾವಿದ್ಯಾಲಯದಲ್ಲಿ ನಡೆದ ಯುಥ್ ಪೊರಂನಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಪಡ್ನವೀಸ್ ಭಾಗವಹಿಸಿ ದೇಶದ ಬೆಳವಣಿಗೆಗೆ ವಿದ್ಯಾರ್ಥಿಗಳ ಕೊಡುಗೆ ಬಗ್ಗೆ ತಿಳಿಸಿಕೊಟ್ಟರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸ್ಪಷ್ಟವಾದ ಬಹುಮತ ಬರುತ್ತದೆ. ಕರ್ನಾಟಕದ ಜನತೆ ಮೋದಿ ಜೊತೆಗೆ ಇದ್ದಾರೆ, ಕರ್ನಾಟಕದ ಜನತೆಯ ನಾಡಿಮೀಡಿತವೇ ಬಿಜೆಪಿ ಆಗಿದೆ ಎಂದರು.

ರ್ನಾಟಕದ ಮತದಾರರರು ಪ್ರಧಾನಿ ನರೇಂದ್ರ ಮೋದಿ ಅವರ ಹಿಂದೆ ಇದ್ದಾರೆ. ಇಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಹಾಗೆಯೆ ಬಜರಂಗದಳ ನಿಷೇಧ ಕುರಿತು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪ್ರಸ್ತಾಪ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಜರಂಗ ದಳ ನಿಷೇಧ ವಿಷಯದಿಂದ ಯಾವುದೇ ಪರಿಣಾಮ ಆಗುವುದಿಲ್ಲ. ಈ ಕುರಿತು ತಮ್ಮ ಹೊಟ್ಟೆಯಲ್ಲಿ ಏನು ಇದೆ ಅದನ್ನು ಬಾಯಿಯಲ್ಲಿ ಹೇಳಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+