ಹೊಸವರ್ಷದ ಮುನ್ನಾದಿನ ಹೋದವಳು ಇನ್ನೂ ಬಂದಿಲ್ಲ!

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜನವರಿ, 3 : ನಗರದಲ್ಲಿ ಹೊಸ ವರ್ಷಾಚರಣೆಯ ಸಮಯದಲ್ಲಿ ಕಾಲೇಜು ಯುವತಿಯೊಬ್ಬಳು ಮನೆಯಿಂದ ನಾಪತ್ತೆಯಾದ ಪ್ರಕರಣ ಸ್ಥಳೀಯ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇಲ್ಲಿಯ ಹೊಸೂರು ಅಡಕಿ ಚಾಳ ನಿವಾಸಿ ಪೂಜಾ ಮಹಾದೇವ ಜಡಿ (19) ಡಿ.31ರಂದು ಸಂಜೆ ನಾಪತ್ತೆಯಾದ ಯುವತಿಯಾಗಿದ್ದಾಳೆ. ಮನೆಯಿಂದ ಮಾವನ ಮನೆಗೆ ಹೋಗಿ ಅಯ್ಯಪ್ಪ ಸ್ವಾಮಿ ಪೂಜೆಯ ಕುರಿತು ಮಾಹಿತಿ ಕೇಳಿ ಬರುತ್ತೇನೆ ಎಂದು ಹೇಳಿದ ಹೋದ ಮಗಳು ಇದೂವರೆಗೆ ಬಂದಿಲ್ಲ ಎಂದು ಮುದಕಪ್ಪ ಬಸವರಾಜ ಅಗಸರ ಎಂಬುವರು ದೂರು ನೀಡಿದ್ದಾರೆ.

A 19-year-old collge girl missing from Hubballi

ಕಳ್ಳತನ : ಸ್ಥಳಿಯ ನವನಗರದ ಕರಿಯಮ್ಮದೇವಿ ಬಡಾವಣೆ, ಗಾಮನಗಟ್ಟಿಯಲ್ಲಿ ಮನೆಗಳ್ಳತನ ನಡೆದ ಪ್ರಕರಣ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪಾಂಡುರಂಗಾಚಾರ ಪುಟ್ಟಾಚಾರ ನವರತ್ನ ಎಂಬುವರ ಮನೆ ಹಿಂದಿನ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ 67,000 ರೂ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣ ಹಾಗೂ 4 ಸಾವಿರ ರೂ. ನಗದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಹಳೇಹುಬ್ಬಳ್ಳಿಯಲ್ಲೊಂದು : ಹಳೇಹುಬ್ಬಳ್ಳಿಯ ದಿಡ್ಡಿ ಓಣಿಯ ಮನೆಯೊಂದರ ಕೀಲಿ ಮುರಿದು ಮನೆಯಲ್ಲಿದ್ದ 1,73,000 ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣ ಹಾಗೂ 3000 ರೂ. ನಗದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಪ್ರಸಾದ ಮಾಧವ ಸವಣೂರ ಎಂಬುವವರ ಮನೆ ಕಳ್ಳತನಗೊಳಗಾಗಿದೆ.

ಸಂಚಾರ ನಿಯಮ ಉಲ್ಲಂಘನೆ : ಸಂಚಾರ ನಿಯಮ ಉಲ್ಲಂಘನೆ ಮಾಡಿದ 567 ಕೇಸು ದಾಖಲಿಸಿ 81,500 ರೂ. ದಂಡವನ್ನು ಹುಬ್ಬಳ್ಳಿ ಸಂಚಾರಿ ಪೊಲೀಸರು ವಸೂಲಿ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 19 year old collge girl named Puja Jadi missing from Hubballi from December 31, 2016. A complaint has been lodged in Hosur police station. In two cases burglars have decamped with jewellery, cash and other valuables.
Please Wait while comments are loading...