• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಯುವ್ಯ ಕರ್ನಾಟಕ ಸಂಸ್ಥೆಯಲ್ಲಿ 3,307 ಹುದ್ದೆಗಳ ಭರ್ತಿ

|

ಹುಬ್ಬಳ್ಳಿ, ಜೂನ್ 09 : ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆಯಲ್ಲಿ 3,307 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸರ್ಕಾರದಿಂದ ನೇಮಕಾತಿಗೆ ಒಪ್ಪಿಗೆ ಸಿಕ್ಕಿದ್ದು, ಶೀಘ್ರದಲ್ಲಿಯೇ ನೇಮಕಾತಿ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ.

ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆ ಅಧ್ಯಕ್ಷ ಶಿವರಾಮ್ ಹೆಬ್ಬಾರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. '3,307 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದಿಂದ ಅನುಮತಿ ಸಿಕ್ಕಿದೆ ನೇಮಕಾರಿ ಶೀಘ್ರವೇ ಆರಂಭಿಸಲಾಗುತ್ತದೆ' ಎಂದು ಹೇಳಿದ್ದಾರೆ.

ಬಿಎಂಟಿಸಿಗೆ ಬಿಳಿಯಾನೆಯಾದ ವೋಲ್ವೊ ಬಸ್, ನಷ್ಟವೇ ಹೆಚ್ಚು!

ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆಯಲ್ಲಿ 2,555 ಚಾಲಕರು, 413 ನಿರ್ವಾಹಕರು, 259 ಚಾಲಕ/ನಿರ್ವಾಹಕರು ಹಾಗೂ 80 ಸಹಾಯಕ ಸಂಚಾರ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಕೆಎಸ್‌ಆರ್‌ಟಿಸಿ ಟಿಕೆಟ್ ಬುಕ್ಕಿಂಗ್ ಸಹಾಯಕ್ಕಾಗಿ Ask Vani

'ಪ್ರತಿದಿನ ಸಂಸ್ಥೆಯ ಆದಾಯ 5.70 ಕೋಟಿ ಇದೆ. ಖರ್ಚು 6.30 ಕೋಟಿ ಇದೆ. ಪ್ರತಿವರ್ಷ ಅಂದಾಜು 4.95 ಲಕ್ಷ ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯುತ್ತಾರೆ. 5 ವರ್ಷಗಳ ಬಸ್ ಪಾಸ್ ರಿಯಾಯಿತಿಯ 751 ಕೋಟಿ ಮೊತ್ತವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ' ಎಂದು ಶಿವರಾಮ್ ಹೆಬ್ಬಾರ್ ಹೇಳಿದರು.

ಕೆಎಸ್ಆರ್‌ಟಿಸಿ ಅಧಿಕಾರಿಗಳನ್ನು ಬೇರೆ ನಿಗಮಗಳಿಗೆ ನಿಯೋಜಿಸುವಂತಿಲ್ಲ

ಕೆಎಸ್‌ಆರ್‌ಟಿಸಿಯ ಕ್ಲಾಸ್ 1 ಮತ್ತು ಕ್ಲಾಸ್ 2 ಅಧಿಕಾರಿಗಳನ್ನು ಯೋಜನೆ ಮೇರೆಗೆ ಬೇರೆ ಸಾರಿಗೆ ನಿಗಮಗಳಿಗೆ ವರ್ಗಾವಣೆ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ.

'ಅಂತರ್ ನಿಗಮ ವರ್ಗಾವಣೆಯ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಲು ಸಮಿತಿಯನ್ನು ರಚನೆ ಮಾಡಲಾಗಿದೆ' ಎಂದು ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

English summary
Karnataka government approved for recruitment of 3, 307 post in North Western Karnataka Road Transport Corporation. Recruitment notification will announced soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X