ಪಂಚಮಸಾಲಿ ಮೀಸಲಾತಿ ಹೋರಾಟ ನಿಲ್ಲದು; ಸ್ವಾಮೀಜಿ

ಹುಬ್ಬಳ್ಳಿ, ಮೇ 16: "ಇಡೀ ಕರ್ನಾಟಕದಲ್ಲೇ ಹೋರಾಟದ ಭೂಮಿ ಅಂದರೆ ಅದು ನವಲಗುಂದ ಹಾಗೂ ನರಗುಂದ. ಈ ಭಾಗದಲ್ಲಿ ಯಾವುದೇ ಹೋರಾಟವಾದರೂ ತಾರ್ಕಿಕ ಅಂತ್ಯ ಕಂಡು ಯಶಸ್ವಿಯಾಗಿದೆ" ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಸೋಮವಾರ ನವಲಗುಂದ ಪಟ್ಟಣದ ಗವಿ ಮಠದಲ್ಲಿ ಮಾತನಾಡಿದ ಅವರು, "2ಎ ಮೀಸಲಾಯಿ ವಿಚಾರದಲ್ಲಿನ ನಮ್ಮ ಹೋರಾಟಕ್ಕೂ ಯಶಸ್ಸು ಸಿಗಲಿದೆ" ಎಂದರು.

"ನವಲಗುಂದ ಹಾಗೂ ನರಗುಂದ ಭಾಗದಲ್ಲಿ ಯಾವುದೇ ಹೋರಾಟವಾದರೂ ತಾರ್ಕಿಕ ಅಂತ್ಯ ಕಂಡು ಯಶಸ್ಸು ಕಂಡಿದೆ. ಹಾಗೆ ಪಂಚಮಸಾಲಿ ಮೀಸಲಾತಿ ಹೋರಾಟ ಇಲ್ಲಿ ಆರಂಭವಾಗಿದೆ. ಈ ಹೋರಾಟ ನವಲಗುಂದದಿಂದಲೇ ಆರಂಭವಾಗಿರುವುದನ್ನು ನೋಡುತ್ತಿದ್ದರೆ ಸರ್ಕಾರಕ್ಕೆ ದೊಡ್ಡ ಬಿಸಿ ಮುಟ್ಟುವಂತಹ ಭಾವನೆ ವ್ಯಕ್ತವಾಗುತ್ತಿದೆ" ಎಂದು ತಿಳಿಸಿದರು.

2A Backward Reservation Fight To Continue Says Basava Jaya Mrutyunjaya Swamiji

"ನವಲಗುಂದದಲ್ಲಿ ನಡೆಯುವಂತಹ ಹೋರಾಟವನ್ನು ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ನರಗುಂದ ಹಾಗೂ ನವಲಗುಂದದಲ್ಲಿ ನಮ್ಮವರೇ ಸಚಿವರಿದ್ದಾರೆ. ಅವರು ಮಾತು ಕೊಟ್ಟ ಪ್ರಕಾರವಾಗಿ ಮೀಸಲಾತಿ ನೀಡಬೇಕು" ಎಂದು ಒತ್ತಾಯಿಸಿದರು.

2A Backward Reservation Fight To Continue Says Basava Jaya Mrutyunjaya Swamiji

"ನಮ್ಮ ಸಮುದಾಯಕ್ಕೆ ಮೀಸಲಾತಿ ಅಗತ್ಯವಿದೆ. ಶೈಕ್ಷಣಿಕ, ಔದ್ಯೋಗಿಕವಾಗಿ ಮೀಸಲಾತಿ ಬೇಕಿದೆ. ಸಿಎಂ ಮೀಸಲಾತಿ ವರದಿ ಪಡೆದುಕೊಂಡಿದ್ದಾರೆ. ಮಾತು ಕೊಟ್ಟಂತೆ ಸರ್ಕಾರ ನಡೆದುಕೊಳ್ಳಲಿಲ್ಲ, ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಒಟ್ಟಿನಲ್ಲಿ ನಮ್ಮ ಹೋರಾಟ ಆರಂಭವಾಗಿದ್ದು, ಈ ಹೋರಾಟವನ್ನು ಸರ್ಕಾರ ನಿರ್ಲಕ್ಷಿಸಬಾರದು" ಎಂದು ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+