ದೇವೇಗೌಡರು ಮತ್ತು ನಮ್ಮ ಸಂಬಂಧ ಚೆನ್ನಾಗಿದೆ: ಯಡಿಯೂರಪ್ಪ

ಹಾವೇರಿ, ನವೆಂಬರ್ 7: ದೇವೇಗೌಡರು ಮತ್ತು ನಮ್ಮ ನಡುವಿನ ಸಂಬಂಧ ಚೆನ್ನಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಾಜಿ ಪ್ರಧಾನಿ ದೇವೇಗೌಡರು ಮತ್ತು ನಮ್ಮ ಸಂಬಂಧಕ್ಕೆ ಏನೂ ಆಗಿಲ್ಲ, ನಾವು ಚೆನ್ನಾಗೇ ಇದ್ದೇವೆ.

ಎಲ್ಲವನ್ನೂ ಮಾಧ್ಯಮದವರ ಮುಂದೆ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.ಫೋನ್ ದೇವೇಗೌಡರು ಮಾಡಿದ್ದಾರೋ ಅಥವಾ ನಾನೇ ದೇವೇಗೌಡರಿಗೆ ಕರೆ ಮಾಡಿದ್ದೇನೋ ಎಲ್ಲವನ್ನು ಹೇಳಲು ಸಾಧ್ಯವಿಲ್ಲ.

Yediyurappa Says Deve Gowda And Our Relationship Is Good

ಸಿದ್ದರಾಮಯ್ಯ ನಮ್ಮ ಬಗ್ಗೆ ಕಾಳಜಿ ತೋರಿಸ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ವಿರೋಧ ಪಕ್ಷಗಳ ಮಾತು ಕೇಳಬೇಡಿ, ಸರ್ಕಾರ ನೂರು ದಿವಸ ಕಳೆದಿದೆ. ಅತಿವೃಷ್ಟಿಗೆ ಎರಡು ತಿಂಗಳು ಸಮಯ ಕೊಡಬೇಕಾಯ್ತು, ಇನ್ನುಮುಂದೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ.

ದೇವೇಗೌಡರು ಯಡಿಯೂರಪ್ಪ ಅವರಿಗೆ ಕರೆ ಮಾಡಿದ್ದರು, ಯಾದಗಿರಿ ಪೊಲೀಸ್ ವಿಚಾರ ಹಾಗೂ ಸರ್ಕಾರದ ಜೊತೆ ನಾವಿದ್ದೀವಿ ಎನ್ನುವ ಭರವಸೆ ನೀಡಲು ಕರೆ ಮಾಡಿದ್ದರೂ ಕೂಡ ಮುಖ್ಯಮಂತ್ರಿಗಳು ಕರೆ ಸ್ವೀಕರಿಸಲಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು.

ಒಂದೆಡೆ ಇಲ್ಲಾ ಎಚ್‌ಡಿ ದೇವೇಗೌಡರು ನನಗೆ ಕರೆ ಮಾಡಿಲ್ಲ ಎಂದು ಯಡಿಯೂರಪ್ಪ ಹೇಳಿದರೆ ಇನ್ನೊಂದೆಡೆ ಹೌದು ನಾನು ಕರೆ ಮಾಡಿದ್ದು ಹೌದು ಆದರೆ ಯಾವುದೋ ಫೈಲ್ ವಿಚಾರವಾಗಿ ಮಾತನಾಡಿದ್ದೆ ಇನ್ನೇನು ಮಾತನಾಡಿಲ್ಲ ಎಂದು ದೇವೇಗೌಡರು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+