ಲಿಂಗಾಯತ ಧರ್ಮ ವಿವಾದ ಕುರಿತ ಚರ್ಚೆಗೆ ಸಿದ್ಧ: ದಿಂಗಾಲೇಶ್ವರ ಸ್ವಾಮಿ

Posted By: ಹಾವೇರಿ ಪ್ರತಿನಿಧಿ
Subscribe to Oneindia Kannada

ಹಾವೇರಿ, ಜನವರಿ 01: ಲಿಂಗಾಯತ ಪ್ರತ್ಯೇಕ ಧರ್ಮ ವಿರೋಧಿ ಗುಂಪಿನ ದಿಂಗಾಲೇಶ್ವರ ಸ್ವಾಮೀಜಿ ಅವರು ಧಾರ್ಮಿಕ ಚರ್ಚೆಗೆ ಸಿದ್ದರಿರುವುದಾಗಿ ಹೇಳಿದ್ದಾರೆ. ಈ ಮೂಲಕ ಚರ್ಚೆಗೆ ಬರುವಂತೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೀಡಿದ್ದ ಆಹ್ವಾನವನ್ನು ಸ್ವೀಕರಿಸಿದ್ದಾರೆ.

ವೀರಶೈವ-ಲಿಂಗಾಯತ ವಿವಾದ: ಚರ್ಚೆಗೆ ಮತ್ತೊಮ್ಮೆ ಆಹ್ವಾನ ಕೊಟ್ಟ ಹೊರಟ್ಟಿ

ಡಿಸೆಂಬರ್ 30-31ರಂದೇ ಚರ್ಚೆ ನಡೆಯಲು ಉದ್ದೇಶಿಸಲಾಗಿತ್ತು ಆದರೆ ಅಂದು ಭದ್ರತೆ ನೆಪ ಒಡ್ಡಿ ಚರ್ಚೆಗೆ ಪೊಲೀಸರು ಅವಕಾಶ ನೀಡಿರಲಿಲ್ಲ ಆದರೆ ಈಗ ಮತ್ತೆ ಚರ್ಚೆಯ ಮಾತುಗಳು ಕೇಳಿ ಬರುತ್ತಿದ್ದು, ದಿನಾಂಕ ಇನ್ನೂ ನಿಗದಿಯಾಗಬೇಕಿದೆ.

we are ready for Lingayatha debate: Dingaleshwar swami

ಬಸವರಾಜ್ ಹೊರಟ್ಟಿ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ಚರ್ಚೆಯನ್ನು ಮುಂದಿಡುವ 5 ಜನರ ಹೆಸರನ್ನೂ ಘೋಷಿಸಿದ್ದು, ಎದುರಾಳಿಗಳಿಗೆ ತಮ್ಮ ವಾದ ಹೂಡಲು ಪಂಥಾಹ್ವಾನ ಮಾಡಿದ್ದರು. ಇದೀಗ ದಿಂಗಾಲೇಶ್ವರ ಸ್ವಾಮಿ ಅವರು ಆಹ್ವಾನವನ್ನು ಸ್ವೀಕರಿಸಿದ್ದು, ಯಾವಾಗ ಕರೆದರೂ ಚರ್ಚೆಗೆ ಸಿದ್ದರಿದ್ದೇವೆ ಎಂದಿದ್ದಾರೆ.

ತಮ್ಮ ವಿರುದ್ಧ ಫೇಸ್‌ಬುಕ್, ವಾಟ್ಸ್‌ಆಪ್‌ಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ ಸ್ವಾಮೀಜಿ ಅವರು ನನಗೆ ಆ ರೀತಿಯ ಅಪಪ್ರಾಚಾರ ಮಾಡಲು ಬರುವುದಿಲ್ಲ ಅದಕ್ಕೆ ಬೇಕಾದ ಮೊಬೈಲ್ ಕೂಡ ನನ್ನ ಬಳಿ ಇಲ್ಲ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dingaleshwar swamiji said that they were ready to debate on Lingayatha separate religion issue. He also said that some people spreading bad roomers about him in social media.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ