• search
  • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಾವೇರಿ ಜಿಲ್ಲಾಡಳಿತದಿಂದ ಒಂದು ದಿನದ ಪ್ರವಾಸಿ ಪ್ಯಾಕೇಜ್

|

ಹಾವೇರಿ, ಸೆಪ್ಟೆಂಬರ್ 28 : ಹಾವೇರಿ ಜಿಲ್ಲಾಡಳಿತ ಪ್ರವಾಸಿ ತಾಣಗಳ ವೀಕ್ಷಣೆಗೆ ಪ್ಯಾಕೇಜ್‌ ಸಿದ್ಧಪಡಿಸಿದೆ. ಒಂದು ದಿನದ ಪ್ರವಾಸಿ ಪ್ಯಾಕೇಜ್‌ಗೆ ವಿಶ್ವಪ್ರವಾಸೋದ್ಯಮ ದಿನವಾದ ಸೆ.27ರಂದು ಚಾಲನೆ ನೀಡಲಾಗಿದೆ.

'ಹಾವೇರಿ ಜಿಲ್ಲೆ ಪ್ರಾಕೃತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಿರಿವಂತ ಜಿಲ್ಲೆಯಾಗಿದೆ. ಜಿಲ್ಲೆಯ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಪ್ಯಾಕೇಜ್ ರೂಪಿಸಲಾಗಿದೆ' ಎಂದು ಹಾವೇರಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಹೇಳಿದ್ದಾರೆ.

ಪ್ರವಾಸಿಗರು ಅಬ್ಬಿ ಫಾಲ್ಸ್‌ಗೆ ಭೇಟಿ ನೀಡಲು ಇದ್ದ ನಿಷೇಧ ತೆರವು

ಪ್ರಾಯೋಗಿಕವಾಗಿ ಜಿಲ್ಲಾಡಳಿತ ಒಂದು ದಿನದ ಪ್ಯಾಕೇಜ್ ರೂಪಿಸಿದೆ. ಕಾಗಿನೆಲೆ, ಬಾಡಾ, ರಾಕ್ ಗಾರ್ಡನ್‌ ಹಾಗೂ ಅಗಡಿ ತೋಟದಲ್ಲಿ ವಿಹಾರ ನಡೆಸಬಹುದಾಗಿದೆ. ಈ ಪ್ಯಾಕೇಜ್‌ನಲ್ಲಿ ಪ್ರವಾಸಿ ಸ್ಥಳ ಭೇಟಿ, ಮಾಹಿತಿ ಹಂಚಿಕೆ, ಉಟ-ಉಪಹಾರದ ವ್ಯವಸ್ಥೆ ಇದೆ.

ಹಾವೇರಿಯಲ್ಲಿ ಮಳೆಗಾಗಿ ದೇವರಿಗೆ ಹೋಳಿಗೆ ಪೂಜೆ

ಮೊದಲಿಗೆ ರಜಾ ದಿನಗಳಲ್ಲಿ ಮಾತ್ರ ಪ್ಯಾಕೇಜ್ ಲಭ್ಯವಿದೆ. ಪ್ರಾವಾಸಿಗರ ಸಂಖ್ಯೆ ಹೆಚ್ಚಳವಾದರೆ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಲು ನಿರ್ಧಾರ ಮಾಡಲಾಗಿದೆ. ಖಾಸಗಿ ಸಹಭಾಗಿತ್ವದಲ್ಲೂ ಪ್ಯಾಕೇಜ್ ಜಾರಿಗೆ ತರುವ ಆಲೋಚನೆ ಇದ್ದು, 20 ಜನರು ಪ್ಯಾಕೇಜ್ ನಡೆಸಲು ಆಸಕ್ತ ತೋರಿಸಿದ್ದಾರೆ.

ಮತ್ತೆ ಹಳಿ ಮೇಲೆ ಐಷಾರಾಮಿ ಗೋಲ್ಡನ್ ಚಾರಿಯಟ್ ಸಂಚಾರ

ಜಿಲ್ಲೆಯಲ್ಲಿ ಸಾಹನ ಪ್ರವಾಸೋದ್ಯಮ ಪ್ಯಾಕೇಜ್‌ಗೂ ಬೇಡಿಕೆ ಬಂದಿದೆ. ನಗರವಾಸಿಗಳು, ಯುವ ಸಮುದಾಯವು ಇದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಗುಡ್ಡ, ಬೆಟ್ಟಗಳು ಹೆಚ್ಚಿರುವ ಶಿಗ್ಗಾವಿ ಭಾಗದಲ್ಲಿಯೂ ಇಂತಹ ಪ್ಯಾಕೇಜ್ ಆರಂಭಿಸುವ ಪ್ರಸ್ತಾವನೆ ಜಿಲ್ಲಾಡಳಿತ ಮುಂದಿದೆ.

English summary
Haveri district administration set up the one day tourism package to visit tourism spots in the district. Now package available for only on holidays.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X