ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್ ಬದಲು ರಾಜೀವ್ ಗಾಂಧಿ ಎಂದು ಟೀಕಿಸಿ ಪೇಚಿಗೀಡಾದ ಈಶ್ವರಪ್ಪ

|
Google Oneindia Kannada News

ಹಾವೇರಿ, ಅಕ್ಟೋಬರ್ 13: ಮಾಜಿ ಡಿಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಆಗಾಗ ವಿವಾದ ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ.

ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಿಗೆ ಜಾರಕಿಹೊಳಿ-ಡಿಕೆಶಿ ಕಾರಣ? ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಿಗೆ ಜಾರಕಿಹೊಳಿ-ಡಿಕೆಶಿ ಕಾರಣ?

ಇದೀಗ ತಾವಾಡಿದ ಮಾತಿನಿಂದ ತಾವೇ ಮುಜುಗರ ಅನುಭವಿಸಿದ ಪ್ರಸಂಗ ನಡೆದಿದೆ.ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟೀಕಿಸುವ ಭರದಲ್ಲಿ ರಾಜೀವ್ ಗಾಂಧಿ ಎಂದು ಸಂಬೋಧಿಸಿ ಪೇಚಿಗೆ ಸಿಲುಕಿದ್ದಾರೆ.

ರಾಜೀವ್ ಗಾಂಧಿ ಎಲ್ಲಿ ಬೇಕಾದಲ್ಲಿ ಪಕ್ಷದ ಚಟುವಟಿಕೆ ನಡೆಸಲು ನಮ್ಮ ಅಭ್ಯಂತರವೇನೂ ಇಲ್ಲ ಎಂದು, ರಾಹುಲ್ ಎನ್ನುವ ಬದಲು ರಾಜೀವ್ ಎಂದು ಸಂಬೋಧಿಸಿದ್ದಾರೆ ಈಶ್ವರಪ್ಪ.

ಸಂಪುಟ ವಿಸ್ತರಣೆ ವಿಳಂಬ:ಉಪಚುನಾವಣೆಯಲ್ಲಿ 'ಕೈ' ಕೊಡಲಿದ್ದಾರಾ ಶಾಸಕರು ಸಂಪುಟ ವಿಸ್ತರಣೆ ವಿಳಂಬ:ಉಪಚುನಾವಣೆಯಲ್ಲಿ 'ಕೈ' ಕೊಡಲಿದ್ದಾರಾ ಶಾಸಕರು

ಸಿಂದಗಿ ಮಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿ, ದೇಶದಲ್ಲಿ ನಮಗೊಂದು ವಿರೋಧ ಪಕ್ಷ ಬೇಕು ಆದರೆ ಕಾಂಗ್ರೆಸ್ ಪ್ರಾದೇಶಿಕ ಪಕ್ಷವಾಗಿದೆ. ಕಾಂಗ್ರೆಸ್‌ಗೆ ಗತಿ ಇಲ್ಲ, ಮಾನ ಮರ್ಯಾದೆ ಬಿಟ್ಟು ಜೆಡಿಎಸ್‌ನೊಂದಿಗೆ ಹೊಂದಿಕೊಂಡಿದೆ. ರಾಜ್ಯದಲ್ಲಿ ಸಮನ್ವಯ ಸಮ್ಮಿಶ್ರ ಸರಕಾರ ಇಲ್ಲ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರ ಸರಕಾರ ಇದೆ. ಹೀಗಾಗಿ ರಾಜ್ಯ ಸರಕಾರ ಬೀಳುತ್ತದೆ ಎಂದು ಲೇವಡಿ ಮಾಡಿದ್ದಾರೆ.

ಬಳ್ಳಾರಿ ಲೋಕಸಭಾ ಉಪಚುನಾವಣೆ ಉಸ್ತುವಾರಿ ಡಿಕೆಶಿ ಹೆಗಲಿಗೆ ಬಳ್ಳಾರಿ ಲೋಕಸಭಾ ಉಪಚುನಾವಣೆ ಉಸ್ತುವಾರಿ ಡಿಕೆಶಿ ಹೆಗಲಿಗೆ

Eshwarappa criticized Rajiv Gandhi instead of Rahul Gandhi

ಶಿವಮೊಗ್ಗ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಮಧುಬಂಗಾರಪ್ಪ ನಮ್ಮ ಅಭ್ಯರ್ಥಿ ಎಂದು ದೇವೇಗೌಡ ಹೇಳುತ್ತಾರೆ. ಅವರು ವಿದೇಶ ಪ್ರವಾಸದಲ್ಲಿದ್ದಾರೆ ಯಾವಾಗ ನಾಮಪತ್ರ ಸಲ್ಲಿಸುತ್ತಾರೆ? ನಮ್ಮ ಅಭ್ಯರ್ಥಿ ಆಯ್ಕೆ ಅಂತಿಮವಾಗಿದ್ದು, ಬಿಜೆಪಿ ಗೆಲುವು ನಿಶ್ಚಿತ. ಆರ್. ಶಂಕರ್ ಸ್ವತಂತ್ರರು. ಅವರು ಯಾವ ತಿರ್ಮಾನವಾದರೂ ತೆಗೆದುಕೊಳ್ಳಬಹುದು ಎಂದರು.

English summary
Senior Bjp leader K.S.Eshwarappa has faced embarrassment while he had criticized Rajiv Gandhi instead of Congress president Rahul Gandhi in Haveri on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X