2023ಕ್ಕೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ: ಹಾವೇರಿಯಲ್ಲಿ ಸಿಎಂ ಬೊಮ್ಮಾಯಿ ಘೋಷಣೆ

ಹಾವೇರಿ, ಆಗಸ್ಟ್‌, 25: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತವರು ಜಿಲ್ಲೆ ಹಾವೇರಿಗೆ ಆಗಮಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದರು. ರಾಣೇಬೆನ್ನೂರಿನ ಮಾಗೋಡ ಕ್ರಾಸ್ ಬಳಿ 21 ಕೋಟಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಿಎಂ ಬೊಮ್ಮಾಯಿ ಅವರು ಪೂಜೆ ನೇರವೇರಿಸಿದರು. ಬಳಿಕ ರಾಣೇಬೆನ್ನೂರು ಶಾಸಕ ಅರುಣಕುಮಾರ್‌ ಪೂಜಾರ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ರಾಣೆಬೆನ್ನೂರು ನಗರದ ಬಿ.ಟಿ.ಪಾಟೀಲ್ ಮೈದಾನದಲ್ಲಿ ಶಾಸಕ ಅರುಣಕುಮಾರ್‌ ಪೂಜಾರ ಅವರ ಹುಟ್ಟುಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.‌ "ಈ ಕಾರ್ಯಕ್ರಮದ ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಅಭಿವೃದ್ಧಿ ಕುರಿತು ಮಾತನಾಡಿ, ನನ್ನನ್ನು ಯಾರಾದರೂ ಹೊಗಳಿದರೆ ಹೆದರುತ್ತೇನೆ. ತೆಗಳಿದರೆ ಅಥವಾ ಟೀಕೆ ಮಾಡಿದರೆ ನನ್ನ ಕೆಲಸದ ಮೂಲಕ ಉತ್ತರ ಕೊಡುತ್ತೇನೆ." ರಾಣೆಬೆನ್ನೂರು ನನ್ನ ರಾಜಕೀಯ ಜೀವನದಲ್ಲಿ ಅತಿ ಹೆಚ್ಚು ಆತ್ಮೀಯತೆ ತುಂಬಿದ ಕ್ಷೇತ್ರವಾಗಿದೆ ಎಂದರು.

BJP will come back to power by 2023: CM expressed confidence in Haveri

ಶಿಗ್ಗಾಂವಿ - ಸವಣೂರು ಕ್ಷೇತ್ರದ ಜನ ನನ್ನ ತಂದೆ ತಾಯಿ ಇದ್ದಂತೆ. ಸಿಎಂ ಆದ ಮೇಲೆ ನಾನು ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗಿಲ್ಲ. ಆದರೂ ಅಲ್ಲಿಗೆ ಹೋದಾಗಲೆಲ್ಲ ಜನರು ಪ್ರೀತಿ, ವಿಶ್ವಾಸ ಕೊಟ್ಟಿದ್ದಾರೆ. ಅದೇ ರೀತಿಯಾಗಿ ರಾಣೆಬೆನ್ನೂರು ಜನರು ಕೂಡ ಪ್ರೀತಿ, ವಿಶ್ವಾಸದಿಂದ ಇದ್ದಾರೆ. ಇದು ಬಹಳ ದೊಡ್ಡವರ ಕ್ಷೇತ್ರವಾಗಿದೆ. ಮೊದಲಿನಂತೆ ಜನರು ಇಲ್ಲ, ಯುವಕರು ಬದಲಾವಣೆಯನ್ನು ನೋಡಿದ್ದಾರೆ. ಅರುಣ್‌ಕುಮಾರ್‌ ಉಡದ ರೀತಿ ನಿಂತುಕೊಂಡು ರಾಣೆಬೆನ್ನೂರು ಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈತ ನಿಮ್ಮ ಕೈ ಬಿಡುವುದಿಲ್ಲ. ನೀವು ಇವರನ್ನು ಕೈಬಿಡಬೇಡಿ ಎಂದು ಸಿಎಂ ಹೇಳಿದರು.

BJP will come back to power by 2023: CM expressed confidence in Haveri

ಮುಂದಿನ ಚುಣಾವಣೆ ಕುರಿತು ಪ್ರತಿಪಕ್ಷಗಳಿಗೆ ಸಿಎಂ ಬೊಮ್ಮಾಯಿ ಅವರು ಸವಾಲು ಹಾಕಿದ್ದು, ಮೋದಿಯವರ ಸರ್ಕಾರ ನಿಜವಾಗಿಯೂ ಸಾಮಾಜಿಕ ನ್ಯಾಯ ಕೊಡುತ್ತಿದೆ. ನಾವು, ನೀವು ಮಾಡಿದ ಕಾರ್ಯಕ್ರಮವನ್ನು ಜನರ ಮುಂದಿಡೋಣ‌. ರಾಜ್ಯದಲ್ಲಿ 2023ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+