ಮಹಿಳೆಯ ಗುಪ್ತಾಂಗಕ್ಕೆ ಆ್ಯಸಿಡ್ ಎರಚಿ ಹತ್ಯೆಗೆ ಯತ್ನ
ಹಾವೇರಿ, ಜನವರಿ 8: ಮಹಿಳೆಯ ಗುಪ್ತಾಂಗಕ್ಕೆ ಆ್ಯಸಿಡ್ ಎರಚಿ ಹತ್ಯೆಗೆ ಯತ್ನಿಸಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಮಹಿಳೆಯ ಗುಪ್ತಾಂಗ ಮತ್ತು ಕಾಲಿಗೆ ಆ್ಯಸಿಡ್ ಎರಚಿದ್ದಾನೆ, ಈ ಘಟನೆ ಹಾವೇರಿಯ ಶಿಗ್ಗಾಂವಿ ತಾಲೂಕಿನ ಹುಣಸಿಕಟ್ಟಿಯಲ್ಲಿ ನಡೆದಿದೆ.
ಮಂಜುನಾಥ್ ಕಳಸದ(42) ಕೃತ್ಯವೆಸಗಿದ ಆರೋಪಿ. ಶಿಗ್ಗಾಂವಿ ಪಟ್ಟಣದ ನಿವಾಸಿಯಾಗಿರುವ ಮಂಜುನಾಥ್ ಮಂಗಳವಾರ ಮಾತನಾಡುವುದಿದೆ ಬಾ ಎಂದು ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆಕೆಯ ಗುಪ್ತಾಂಗ ಮತ್ತು ಕಾಲಿಗೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದಾನೆ.

ಆ್ಯಸಿಡ್ ದಾಳಿಗೆ ಕಾರಣ: ಮಂಜುನಾಥ್ ಮತ್ತು ಮಹಿಳೆ ನಡುವೆ ಕೆಲವು ವರ್ಷಗಳಿಂದ ಅನೈತಿಕ ಸಂಬಂಧವಿದ್ದು, ಆದರೆ ಆಕೆಯ ಮೇಲೆ ಆತನಿಗೆ ಅನುಮಾನವೂ ಕೂಡ ಇತ್ತು.
ಮಂಜುನಾಥ್ ಆಕೆಯ ಜೊತೆ ಮಾತನಾಡಬೇಕು ಎಂದು ಮನೆಗೆಕರೆಸಿಕೊಂಡು, ಯಾರದ್ದೋ ಜೊತೆಯಲ್ಲಿ ನೀನು ಫೋನಿನಲ್ಲಿ ಮಾತನಾಡುತ್ತೀಯಾ, ಯಾರೊಂದಿಗೋ ನಿನಗೆ ಸಂಬಂಧ ಇದೆ ಎಂದು ಹೇಳಿ ಆಕೆಯ ಜೊತೆ ಗಲಾಟೆ ಮಾಡಿದ್ದಾನೆ ಬಳಿಕ ಆಕೆಯ ಗುಪ್ತಾಂಗಕ್ಕೆ ಆ್ಯಸಿಡ್ ಎರಚಿ ಕೊಲೆಗೆ ಯತ್ನಿಸಿದ್ದಾನೆ.
ಆಕೆಯ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಬಂದು ತಕ್ಷಣ ಆಕೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಂಜುನಾಥ್ ವಿರುದ್ಧ ದೂರು ದಾಖಲಾಗಿದೆ.












Click it and Unblock the Notifications