ಹಾವೇರಿ: ಕೇಕ್‌ನಲ್ಲಿ ಮೂಡಿದ ರಾಮ ಮಂದಿರ, ಗ್ರಾಹಕರು ಫಿಧಾ
ಹಾವೇರಿ, ಜನವರಿ, 19: ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿಯಿದ್ದು, ಈ ಕ್ಷಣಕ್ಕಾಗಿ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಈ ಹಿನ್ನೆಲೆ ಈಗಾಗಲೇ ಹಲವೆಡೆ ರಾಮ ಮಂದಿರದ ಪ್ರತಿಕೃತಿಯನ್ನು ತಯಾರಿಸಿದ್ದಾರೆ. ಅದೇ ರೀತಿ ಹಾವೇರಿ ಜಿಲ್ಲೆಯಲ್ಲೊಬ್ಬರು ಕೇಕ್‌ನಲ್ಲಿ ರಾಮ ಮಂದಿರ ಪ್ರತಿಕೃತಿ ತಯಾರಿಸಿ ಗಮನ ಸೆಳೆದಿದ್ದಾರೆ.
ರಾಣೆಬೆನ್ನೂರಿನ ಪ್ರವಾಸಿ ಮಂದಿರದ ಬಳಿ ಇರುವ ಬೇಕರಿ ಸರ್ಕಲ್ ಎಂಬ ಹೆಸರಿನ ಬೇಕರಿಯಲ್ಲಿ ಮಹಾಂತೇಶ್ ಎಂಬ ಯುವಕ 20 ಕೆ.ಜಿ.ಶುಗರ್ ಪೇಸ್ಟ್‌ನಿಂದ ಅಯೋಧ್ಯೆ ರಾಮ ಮಂದಿರದ ಪ್ರತಿಕೃತಿ ನಿರ್ಮಿಸಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅಯೋಧ್ಯೆಯ ರಾಮ ಮಂದಿರದ ಮಾದರಿಯನ್ನೇ ಹೋಲುವ ಈ ಕೇಕ್ ಕಲಾಕೃತಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ಕೇಕ್ ಪ್ರತಿಕೃತಿ ತಯಾರಕ ದಾವಣಗೆರೆ ತಾಲ್ಲೂಕಿನ ಹೊಸೂರು ಗ್ರಾಮದ ಯುವಕ ಮಹಾಂತೇಶ್ ಟಿ ಮಾತನಾಡಿ, ಕಳೆದ 15 ವರ್ಷಗಳಿಂದ ವಿವಿಧ ಬಗೆಯ ಕೇಕ್ ತಯಾರಿಸುತ್ತೇನೆ. 20 ಕೆ.ಜಿ. ಸಕ್ಕರೆ ಬಳಸಲಾಗಿದೆ. 40 ಸಾವಿರ ಖರ್ಚು ಮಾಡಿದ್ದು, ಸತತವಾಗಿ 5 ದಿನಗಳ ಕಾಲ ತಯಾರು ಮಾಡಲಾಗಿದ ಎಂದು ಹೇಳಿದ್ದಾರೆ ಅಂತಾ ಪ್ರಜಾವಾಣಿ ವರದಿ ಮಾಡಿದೆ.
ರಾಮನ ಮೂರ್ತಿ ಕೆತ್ತನೆ ಮಾಡಿದ ಶಿಲ್ಪಿಗೆ ಗಿಫ್ಟ್
ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆ ಜನವರಿ 19ರಂದು ಆಗಲಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶ ಅಲ್ಲದೇ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಇನ್ನು ಈ ಮಂದಿರಕ್ಕೆ ರಾಮನ ಮೂರ್ತಿ ಮಾಡಿಕೊಟ್ಟಿರುವುದು ಕರ್ನಾಟಕದ ಮೈಸೂರಿನ ಯೋಗರಾಜ್ ಆಗಿದ್ದು, ಇವರಿಗೆ ಇದೀಗ ಮೈಸೂರಿನ ಸ್ವೀಟ್ ಅಂಗಡಿಯೊಂದು ರಾಮ ಮಂದಿರದ ಪ್ರತಿಕೃತಿಯನ್ನು ವಿವಿಧ ಸಿಹಿತಿಂಡಿಗಳಿಂದ ತಯಾರಿಸಿ ಉಡುಗೊರೆಯಾಗಿ ನೀಡಿದೆ.
ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸಲು ಆಯ್ಕೆ ಆಗಿದ್ದ ಅರುಣ್ ಯೋಗಿರಾಜ್ ಅವರಿಗೆ ಮೈಸೂರಿನ ಹೆಸರಾಂತ ಸ್ವೀಟ್ ಅಂಗಡಿಯಿಂದ ವಿಶೇಷ ಉಡುಗೊರೆ ಸಿಕ್ಕಿದೆ. ಇನ್ನು ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮಮಂದಿರವನ್ನು ಅದ್ದೂರಿಯಾಗಿ ಉದ್ಘಾಟನೆ ಮಾಡಲು ನಿರ್ಧರಿಸಿದ್ದಾರೆ.
ಇದೇ ವೇಳೆ ರಾಮ ಮಂದಿರದ ಪ್ರತಿಷ್ಠಾಪನೆ ಕಾರ್ಯಕ್ರಮದ ಪೂರ್ವಭಾವಿಯಾಗಿ ರಾಮ್ ಲಲ್ಲಾ ವಿಗ್ರಹವನ್ನು ಗರ್ಭಗುಡಿಯೊಳಗೆ ಪ್ರತಿಷ್ಠಾಪಿಸಲಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಮೈಸೂರಿನ ಪ್ರಸಿದ್ಧ ಮಳಿಗೆ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್ ಅವರು, ಅರುಣ್ ಯೋಗಿರಾಜ್ ಮತ್ತು ಅವರ ಕುಟುಂಬಕ್ಕೆ ವಿವಿಧ ಸಿಹಿ ತಿನಿಸುಗಳಿಂದ ತಯಾರಿಸಿದ ರಾಮಮಂದಿರದ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು.
ಅರುಣ್ ಯೋಗಿರಾಜ್ ಅವರ ರಾಮ್ ಲಲ್ಲಾ ವಿಗ್ರಹದ ಆಯ್ಕೆಯ ಬಗ್ಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜನವರಿ 2ರಂದು ತಮ್ಮ ಟ್ವೀಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.
"ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಶ್ರೀರಾಮನ ಮೂರ್ತಿಯನ್ನು ಅಯೋಧ್ಯೆಯ ಭವ್ಯವಾದ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲು ಆಯ್ಕೆ ಮಾಡಲಾಗಿದ್ದು, ಇದು ರಾಜ್ಯದ ಸಮಸ್ತ ರಾಮಭಕ್ತರ ಹೆಮ್ಮೆ ಮತ್ತು ಸಂತೋಷವನ್ನು ಇಮ್ಮಡಿಗೊಳಿಸಿದೆ.ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು," ಎಂದು ಯಡಿಯೂರಪ್ಪ ಹೇಳಿದ್ದರು.
ರಾಮ್ ಲಲ್ಲಾ ವಿಗ್ರಹವನ್ನು ಕೆತ್ತಿಸುವಲ್ಲಿನ ಸವಾಲುಗಳ ಕುರಿತು ಪಿಟಿಐ ಜೊತೆ ಮಾತನಾಡಿದ ಅರುಣ್ ಯೋಗಿರಾಜ್, "ವಿಗ್ರಹವು ಅದು ದೈವಿಕವೂ ಆಗಿರಬೇಕು, ಏಕೆಂದರೆ ಅದು ದೇವರ ಅವತಾರದ ಪ್ರತಿಮೆ ಆಗಿದೆ. ಜನರು ಪ್ರತಿಮೆಯನ್ನು ನೋಡಿ ದೈವತ್ವವನ್ನು ಅನುಭವಿಸಬೇಕು," ಎಂದು ಹೇಳಿದ್ದಾರೆ.
ಇನ್ನು ಮಗುವಿನ ಮುಖದ ಜೊತೆಗೆ ದೈವತ್ವದ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು, ನಾನು ಆರರಿಂದ ಏಳು ತಿಂಗಳ ಹಿಂದೆ ನನ್ನ ಕೆಲಸವನ್ನು ಪ್ರಾರಂಭಿಸಿದೆ. ಈಗ ನಾನು ತುಂಬಾ ಸಂತೋಷವಾಗಿದ್ದೇನೆ. ಆಯ್ಕೆಗಿಂತ ಹೆಚ್ಚಾಗಿ ಜನರು ಅದನ್ನು ಮೆಚ್ಚಬೇಕು. ಆಗ ಮಾತ್ರ ನಾನು ಸಂತೋಷವಾಗಿರುತ್ತೇನೆ, ಎಂದು ಅವರು ಹೇಳಿದ್ದರು.












Click it and Unblock the Notifications