ಸ್ಥಳೀಯ ಸಂಸ್ಥೆ ಚುನಾವಣೆ : ಹಾಸನದಲ್ಲಿ ಶಕ್ತಿ ಪ್ರದರ್ಶಿಸಿದ ಜೆಡಿಎಸ್

ಹಾಸನ, ಸೆಪ್ಟೆಂಬರ್ 03 : ಹಾಸನ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎಂಬುದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಮತ್ತೊಮ್ಮೆ ಸಾಬೀತಾಗಿದೆ. ಜಿಲ್ಲೆಯ 135 ವಾರ್ಡ್‌ಗಳ ಪೈಕಿ 91 ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಆಗಸ್ಟ್ 31ರಂದು ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಹಾಸನ ಜಿಲ್ಲೆಯಲ್ಲಿ ಜೆಡಿಎಸ್ 91, ಕಾಂಗ್ರೆಸ್ 15 ಮತ್ತು ಬಿಜೆಪಿ 20 ಸ್ಥಾನಗಳಲ್ಲಿ ಜಯಗಳಿಸಿವೆ. ಪಕ್ಷೇತರರು 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಹಾಸನ ನಗರ ಸಭೆಯ 35 ವಾರ್ಡ್‌ಗಳಲ್ಲಿ ಬಿಜೆಪಿ 13, ಜೆಡಿಎಸ್ 17, ಕಾಂಗ್ರೆಸ್ 2 ಸ್ಥಾನಗಳಲ್ಲಿ ಜಯಗಳಿಸಿವೆ. ಮೂವರು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ. ಪಕ್ಷೇತರರ ಸಹಾಯದಿಂದ ನಗರಸಭೆಯಲ್ಲಿ ಅಧಿಕಾರ ಪಡೆಯಲು ಜೆಡಿಎಸ್ ಮುಂದಾಗಿದೆ.

Urban local bodies election result : JDS remain strong in Hassan

ಸಚಿವ ಎಚ್.ಡಿ.ರೇವಣ್ಣ ಅವರು ಈ ಕುರಿತು ಹೇಳಿಕೆ ನೀಡಿದ್ದು, 'ಹಾಸನ ನಗರಸಭೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯಲಿದೆ. ಇಬ್ಬರು ಪಕ್ಷೇತರರ ಜೊತೆ ಮಾತನಾಡಿದ್ದೇನೆ, ಅಭಿವೃದ್ಧಿ ಎಂದರೇನು? ಎಂದು ಕೆಲಸ ಮಾಡಿ ತೋರಿಸುತ್ತೇವೆ' ಎಂದು ಹೇಳಿದ್ದಾರೆ.

ಹೊಳೆನರಸೀಪುರ : ಎಚ್.ಡಿ.ರೇವಣ್ಣ ಅವರ ತವರು ಕ್ಷೇತ್ರ ಹೊಳೆನರಸೀಪುರ ಪುರಸಭೆಯಲ್ಲಿ 23 ಕ್ಕೆ 23 ಸ್ಥಾನಗಳಲ್ಲಿಯೂ ಜೆಡಿಎಸ್ ಜಯಗಳಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಗೆ ಮುಖಭಂಗವಾಗಿದೆ.

ಹಾಸನ ಜಿಲ್ಲೆಯ ಫಲಿತಾಂಶ

* ಹಾಸನ ನಗರಸಭೆ (35 ವಾರ್ಡ್) ಬಿಜೆಪಿ 13, ಕಾಂಗ್ರೆಸ್‌ 2, ಜೆಡಿಎಸ್ 17, ಪಕ್ಷೇತರ 3
* ಅರಸೀಕೆರೆ ನಗರಸಭೆ : (31 ವಾರ್ಡ್) ಬಿಜೆಪಿ 05, ಕಾಂಗ್ರೆಸ್ 1, ಜೆಡಿಎಸ್ 22, ಪಕ್ಷೇತರ 3
* ಚನ್ನರಾಯಪಟ್ಟಣ ಪುರಸಭೆ ( 23 ವಾರ್ಡ್) ಕಾಂಗ್ರೆಸ್ 8, ಜೆಡಿಎಸ್ 15, ಬಿಜೆಪಿ 0, ಪಕ್ಷೇತರ 0
* ಸಕಲೇಶಪುರ ಪುರಸಭೆ (23 ವಾರ್ಡ್) ಬಿಜೆಪಿ 2, ಕಾಂಗ್ರೆಸ್ 4, ಜೆಡಿಎಸ್ 14, ಪಕ್ಷೇತರ 3
* ಹೊಳೆನರಸೀಪುರ ಪುರಸಭೆ (23 ವಾರ್ಡ್) ಬಿಜೆಪಿ 0, ಕಾಂಗ್ರೆಸ್ 0, ಜೆಡಿಎಸ್ 23, ಪಕ್ಷೇತರ 0

ಹಾಸನ ಜಿಲ್ಲೆಯ ಒಟ್ಟು ಫಲಿತಾಂಶ

135 ವಾರ್ಡ್ : ಬಿಜೆಪಿ 20, ಕಾಂಗ್ರೆಸ್ 15, ಜೆಡಿಎಸ್ 91, ಪಕ್ಷೇತರರು 9

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+