ತಿಥಿ ಚಿತ್ರಪ್ರದರ್ಶನ ಮತ್ತಿತರ ಹಾಸನದ ಸುದ್ದಿಗಳು

Posted By:
Subscribe to Oneindia Kannada

ಹಾಸನ ಸೆಪ್ಟೆಂಬರ್ 15 : ಶಾಂತಿ ಗ್ರಾಮದ 'ಗ್ರಾಮ ಸಿನಿಮಾ ಸಮುದಾಯ'ವು ಹಾಸನದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಸೆ. 16ರ ಶನಿವಾರ ಸಂಜೆ 7 ಗಂಟೆಗೆ ಶಾಂತಿ ಗ್ರಾಮದ ದೊಡ್ಡಮನೆ ಆವರಣದಲ್ಲಿ ಗ್ರಾಮೀಣ ಸೂಕ್ಷ್ಮ ಸಂವೇದನೆಯ ಚಿತ್ರ ತಿಥಿ ಪ್ರದರ್ಶನ ಹಾಗೂ ಸಂವಾದವನ್ನು ಏರ್ಪಡಿಸಿದೆ.

ವಿಶ್ವದಾದ್ಯಂತ ಹವಾ ಎಬ್ಬಿಸಿರುವ 'ತಿಥಿ'ಯ ಚಿತ್ರವಿಮರ್ಶೆ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಈ ಚಿತ್ರವನ್ನು ನಿರ್ದೇಶಿಸಿದ್ದು ರಾಮ್. ಹಳ್ಳಿ ಜನರನ್ನು ಮಾತ್ರವಲ್ಲ ಪಟ್ಟಣದ ಜನರನ್ನು ಕೂಡ ತನ್ನ ನಾವೀನ್ಯತೆಯಿಂದ ಈ ಚಿತ್ರ ಸೆಳೆದಿದೆ. ಚಲನ ಚಿತ್ರಾಸಕ್ತರು ಭಾಗವಹಿಸಲು ಟ್ರಸ್ಟ್‌ನ ಅಧ್ಯಕ್ಷ ಜಿ.ಆರ್. ಮಂಜೇಶ್ ಕೋರಿದ್ದಾರೆ.

Thithi Kannada movie show and other news in Hassan

ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ : ರೋಹಿಣಿ

ನವೋದಯ ವಿದ್ಯಾಲಯದಲ್ಲಿ ಕಲಿಯುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸುವ ನಿಟ್ಟಿನಲ್ಲಿ ನಿಗದಿತ ಆರೋಗ್ಯ ತಪಾಸಣೆ ಮಾಡುವಂತೆ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ ಪ್ರಾಂಶುಪಾಲರಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ರವರು ಸೂಚಿಸಿದರು.

'ಕಲ್ಪಾಮೃತ' ತೆಂಗು ಉತ್ಪನ್ನ ಮಾರಾಟ ವ್ಯವಸ್ಥೆಗೆ ಹೊಸ ಹೆಜ್ಜೆ

ವೀಸಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ

ಕರ್ನಾಟಕ ಸರ್ಕಾರ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರು ಡಾ. ಆರತಿ ಕೃಷ್ಣ, ಸೆ. 12ರಂದು ಅಮೇರಿಕಾದ ವಿದೇಶಾಂಗ ವ್ಯವಹಾರಗಳ ಅಧ್ಯಕ್ಷರು ಹಾಗೂ ಕಾಂಗ್ರೆಸ್‌ಮನ್ ಆದ ಎಡ್ ರಾಯ್ಸ್ ರವರನ್ನ ಅವರ ಕ್ಯಾಲಿಫೋರ್ನಿಯಾದ ಅಲೆಕ್ಸಾಂಡ್ರಿಯಾ ಗೃಹ ಕಛೇರಿಯಲ್ಲಿ ಭೇಟಿ ಮಾಡಿ ಅನಿವಾಸಿ ಭಾರತೀಯ/ಕನ್ನಡಿಗ ಯುವಕರ ಸಮಸ್ಯೆಗೆ ಸೂಕ್ತ ಆಡಳಿತಾತ್ಮಕ ಪರಿಹಾರ ಹಾಗೂ ಅನಿವಾಸಿ ಕನ್ನಡಿಗರೊಂದಿಗೆ ವಿವಾಹವಾದ ಸಂಧರ್ಭದಲ್ಲಿ ವಿವಾಹಿತ ಹೆಣ್ಣು ಮಕ್ಕಳಿಗೆ ವೀಸಾವನ್ನು ಶೀಘ್ರಗತಿಯಲ್ಲಿ ನೀಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಹೊಯ್ಸಳರ ದೇವಾಲಯಗಳಲ್ಲಿ ಶಿಲ್ಪಕಲೆ ಹಾಗೂ ಆಧ್ಯಾತ್ಮಿಕ ಮಹತ್ವ

ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯಗಳು ಎರಡು ದೃಷ್ಟಿಕೋನಗಳಿಂದ ಮಹತ್ವವಾದವುಗಳು. ಒಂದು ಕಡೆ ಶಿಲ್ಪಕಲಾ ದೃಷ್ಠಿಯಿಂದ ಮಹತ್ವದ್ದಾದರೆ ಮತ್ತೊಂದೆಡೆ ಹನ್ನೆರಡನೇ ಶತಮಾನದ ಆಧ್ಯಾತ್ಮಿಕ ಮೌಲ್ಯಗಳನ್ನು ಪ್ರತಿಬಿಂಬಿಸುವಲ್ಲಿ ಮಹತ್ವವಾದದ್ದು ಎಂದು ಹಾಸನ ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಪರಂಪರಾ ಕೂಟದ ಸಂಚಾಲಕರು ಆದ ಪ್ರೊ.ಎಂ.ಬಿ.ಇರ್ಷಾದ್ ತಿಳಿಸಿದರು.

ಹಾಸನದ ಕೋರಮಂಗಲದ ಬುಚೇಶ್ವರ ದೇವಾಲಯದಲ್ಲಿ ಪರಂಪರಾ ಕೂಟದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರಾಯೋಗಿಕ ಬೋಧನಾ ತರಗತಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೋರಮಂಗಲ ಗ್ರಾಮ ವೈಷ್ಣವ ಹಾಗೂ ಶೈವ ಧರ್ಮಗಳ ಸಮನ್ವಯತೆಯನ್ನು ಸಾಕ್ಷೀಕರಿಸಬಲ್ಲ ಆಧಾರಗಳನ್ನು ಒಳಗೊಂಡ ಗ್ರಾಮ. ಇಲ್ಲಿಯ ಪ್ರಮುಖ ಆಕರ್ಷಣೆಯೆಂದರೆ ಬುಚೇಶ್ವರ ದೇವಾಲಯ ಹಾಗೂ ಗೋವಿಂದೇಶ್ವರ ದೇವಾಲಯ. ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ನಿಯಂತ್ರಣದಲ್ಲಿರುವ ಈ ದೇವಾಲಯವನ್ನು ಹನ್ನೆರಡನೇ ಶತಮಾನದಲ್ಲಿ ಇಮ್ಮಡಿ ಬಲ್ಲಾಳನ ಮಂತ್ರಿ ಶ್ರೀಕರ್ಣ ಹೆಗ್ಗಡೆ ಬೂಚಿಮಯ್ಯ(ಬೂಚಿರಾಜ) ಎಂಬುವವನು ಕಟ್ಟಿಸಿದ್ದರಿಂದ ಈ ದೇವಾಲಯಕ್ಕೆ ಬೂಚೇಶ್ವರ ದೇವಾಲಯ ಎಂದೇ ಕರೆಯಲಾಗಿದೆ ಎಂದು ವಿವರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Award winning Kannada movie Thithi will be screened in Shanti Gram in Hassan on 16th Sepbemter. Interested people can see this entertaining cinema. DC Rohini Sindhuri has instructed health officers to control mosquitoes in Hassan.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ