ಬಿಜೆಪಿಯ ಕೆಲ ಶಾಸಕರು ಪಕ್ಷ ಬಿಟ್ಟು ಬರಲು ತಯಾರಿದ್ದಾರೆ: ಕುಮಾರಸ್ವಾಮಿ

ಹಾಸನ, ಜನವರಿ 06: ಆಪರೇಷನ್ ಕಮಲ ಸೂತ್ರಧಾರಿ ಬಿಜೆಪಿಗೆ ಆಪರೇಷನ್ ಭೀತಿ ಕಾಡುವಂತಹ ಹೇಳಿಕೆಯನ್ನು ಜೆಡಿಎಸ್ ನಾಯಕ ಕುಮಾರಸ್ವಾಮಿ ನೀಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಕುಮಾರಸ್ವಾಮಿ, '10-15 ಬಿಜೆಪಿ ಶಾಸಕರು ಪಕ್ಷ ಬಿಟ್ಟು ಹೊರಬರಲು ತುದಿಗಾಲಿನಲ್ಲಿ ನಿಂತಿದ್ದಾರೆ' ಎಂದಿದ್ದಾರೆ.

ಕೆಲವು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದ ಕುಮಾರಸ್ವಾಮಿ, 'ನಾನು ಕೊಳಕಿಗೆ ಕೈ ಹಾಕುವ ಕೆಲಸ ಮಾಡುವುದಿಲ್ಲ, ಸರ್ಕಾರವನ್ನು ಉರುಳಿಸುವ ಯತ್ನ ಮಾಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

 Some BJP MLAs Were Ready To Leave Party: Kumaraswamy

ಸಂಪುಟ ವಿಸ್ತರಣೆ ಅಸಮಾಧಾನ ಹಾಗೂ ಮಾಜಿ ಅನರ್ಹ ಶಾಸಕರಿಗೆ ಮಣೆ ಹಾಕುವ ವಿಚಾರ ಮೂಲ ಬಿಜೆಪಿ ಶಾಸಕರಲ್ಲಿ ಅತೃಪ್ತಿ ಮೂಡಿಸಿರುವ ಹೊತ್ತಿನಲ್ಲಿಯೇ ಕುಮಾರಸ್ವಾಮಿ ನೀಡಿರುವ ಈ ಹೇಳಿಕೆ ಕುತೂಹಲ ಕೆರಳಿಸಿದೆ.

ಶ್ರೀರಾಮುಲು, ಉಮೇಶ್ ಕತ್ತಿ, ರೇಣುಕಾಚಾರ್ಯ, ಅರವಿಂದ ಲಿಂಬಾವಳಿ ಸೇರಿದಂತೆ ಇನ್ನೂ ಹಲವು ಶಾಸಕರುಗಳು ಸಂಪುಟ ವಿಸ್ತರಣೆ ವೇಳೆ ಕಡೆಗಣೆನೆಗೆ ತುತ್ತಾಗಿ ಪಕ್ಷದ ವಿರುದ್ಧ ಸಿಟ್ಟಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+