ಸಿದ್ದರಾಮಯ್ಯರನ್ನು ನಂಬಿದ ಜೆಡಿಎಸ್ ಶಾಸಕರಿಗೆ ಟಿಕೇಟ್ ಇಲ್ಲ: ಸೋಮಣ್ಣ

Posted By: Nayana
Subscribe to Oneindia Kannada

ಹಾಸನ, ಡಿಸೆಂಬರ್ 21: ಸಿದ್ದರಾಮಯ್ಯ ಅವರನ್ನು ನಂಬಿ ಹೋಗಿರುವ ಜೆಡಿಎಸ್ ಬಂಡಾಯ ಶಾಸಕರಿಗೆ ಟಿಕೇಟ್ ಸಿಗುವುದು ಖಚಿತ ಇಲ್ಲ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಅನ್ಯ ಪಕ್ಷಗಳ ಅನೇಕರು ಸಂಪರ್ಕ ಮಾಡಿದ್ದಾರೆ. ಈ ವಿಷಯದಲ್ಲಿ ಬಿಎಸ್ ವೈ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಆದರೆ ಸಿದ್ದರಾಮಯ್ಯ ಅವರನ್ನು ನಂಬಿ ಹೋಗಿರುವ ಜೆಡಿಎಸ್ ಶಾಸಕರಿಗೆ ಟಿಕೇಟ್ ಸಿಗುವುದು ಖಚಿತ ಇಲ್ಲ ಎಂದರು.

Siddaramaiah will not give ticket expelled JDS MLA's: Somanna claims

ನಂಜನಗೂಡು-ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಏನೇನು ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ, ಸಾರ್ವತ್ರಿಕ. ಚುನಾವಣೆಯಲ್ಲಿ ಸಿದ್ದು ಆಟ ನಡೆಯಲ್ಲ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ನವರು ಅವರಿಗೆ ಮೂಗುದಾರ ಹಾಕೋದು ಖಚಿತ, ಸಿದ್ದರಾಮಯ್ಯ ಚಾಮುಂಡೇಶ್ವರಿ ಯಿಂದ ಸ್ಪರ್ಧೆ ಮಾಡಲ್ಲ, ವರುಣಾಕ್ಕೆ ಮರಳಿ ಹೋಗುತ್ತಾರೆ, ಸಿದ್ದರಾಮಯ್ಯ ತೊಡೆತಟ್ಟಿ ರಾಜಕೀಯ ಮಾಡಿದ್ದು ನಾನೆಂದೂ ನೋಡಿಲ್ಲ,ಚಾಮುಂಡೇಶ್ವರಿ ಕ್ಷೇತ್ರ ಕ್ಕೆ ಹೋಗುವಷ್ಟು ದಡ್ಡರು‌ ಅವರಲ್ಲ ಎಂದರು.

.ಪ್ರತ್ಯೇಕ ಲಿಂಗಾಯತ ಧರ್ಮದ ಲಾಭ ಕಾಂಗ್ರೆಸ್ ಗೆ ಒಂದೂ ಒಂದು ಪರ್ಸೆಂಟ್ ಆಗೋದಿಲ್ಲ, ಯಡಿಯೂರಪ್ಪ ಸಿಎಂ ಆಗೋದನ್ನು ತಪ್ಪಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ. ಎಂ.ಬಿ.ಪಾಟೀಲ್ ಗೆ ಅವರ ತಾಯಿನೇ ಅವರಿಗೆ ಓಟು ಹಾಕುವುದಿಲ್ಲ. ವಿನಯ್ ಕುಲಕರ್ಣಿ ಕತೆ ಏನಾಗುತ್ತೆ ನೋಡಿ, ವೀರಶೈವ ಲಿಂಗಾಯತ ಒಂದೆ, ಈ ಸಮುದಾಯ ಯಡಿಯೂಯರನ್ನು ಬಿಟ್ಟು ಹೋಗಲ್ಲ, ಈ ಮೂಲಕ ಬಿಎಸ್ವೈಗೆ ಯಾರೂ ದ್ರೋಹ ಬಗೆಯಲು ಆಗುವುದಿಲ್ಲ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former minister BJP leader V Somanna claimed that chief minister Siddaramaiah would not give tickets to JDS MLA'S who expelled from their own party in fourth coming state assembly elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ