ಹಾಸನ: ಡಿ.ಕೆ.ಶಿವಕುಮಾರ್‌ ಬೆಂಬಲಿಗರ ಪಾದಯಾತ್ರೆ ತಡೆದ ಸಿದ್ದರಾಮಯ್ಯ ಅಭಿಮಾನಿಗಳು

ಹಾಸನ, ಜುಲೈ, 30: ಸಿದ್ದರಾಮಯ್ಯ ಅಭಿಮಾನಿಗಳು ನಿನ್ನೆ ಅರಕಲಗೂಡು ವಿದಾನಸಭಾ ಕ್ಷೇತ್ರದ ದೊಡ್ಡಳ್ಳಿಯಲ್ಲಿ ಡಿ.ಕೆ.ಶಿಕುಮಾರ್‌ ಬೆಂಬಲಿಗರು ಮಾಡುತ್ತಿದ್ದ ಸ್ವಾತಂತ್ರೋತ್ಸವ ಪಾದಯಾತ್ರೆಯನ್ನು ತಡೆದಿದ್ದಾರೆ. ಸಿದ್ದರಾಮಯ್ಯ ಹುಟ್ಟುಹಬ್ಬ ಅಮೃತ ಮಹೋತ್ಸವ ಮುಗಿಯುವವರೆಗೆ ಪಾದಯಾತ್ರೆ ಮಾಡಬಾರದು ಎಂದು ಸಿದ್ದರಾಮಯ್ಯ ಅಭಿಮಾನಿಗಳು ತಾಕೀತು ಮಾಡಿದ್ದಾರೆ.

ಅರಕಲಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶ್ರೀಧರ್ ಗೌಡ ಅವರ ನೇತೃತ್ವದಲ್ಲಿ ಪಾದಯಾತ್ರೆಯನ್ನು ಆರಂಭಿಸಿದ್ದರು. ಡಿ.ಕೆ. ಶಿವಕುಮಾರ್ ಬೆಂಬಲಿತ ನಾಯಕರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ನಿನ್ನೆ ಹೊಳೆನರಸೀಪುರ ತಾಲ್ಲೂಕಿನ ಅರಕಲಗೂಡು ವಿಧಾನಸಭಾ ಕ್ಷೇತ್ರದ ಶ್ರವಣೂರಿನಿಂದ ಪಾದಯಾತ್ರೆ ಆರಂಭಿಸಲಾಗಿತ್ತು. ರಾತ್ರಿ ಕ್ಷೇತ್ರದ ದೊಡ್ಡಳ್ಳಿಯಲ್ಲಿಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳಯ ಪಾದಯಾತ್ರೆಯನ್ನು ತಡೆದಿದ್ದು, ಸಿದ್ದರಾಮಯ್ಯ ಅಮೃತಮಹೋತ್ಸವಕ್ಕೆ ಅಡ್ಡಿಪಡಿಸಲು ಪಾದಯಾತ್ರೆಗೆ ಹೊರಟಿದ್ದೀರಾ ಎಂದು ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್‌ ಮುಖಂಡರಾದ ಶ್ರೀಧರ್ ಗೌಡ, ಶೇಷೇಗೌಡರಿಗೆ ರಸ್ತೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಪಾದಯಾತ್ರೆ ನಿಲ್ಲಿಸುವಂತೆ ತರಾಟೆ ತೆದುಕೊಂಡಿದ್ದರು. ಪಾದಯಾತ್ರೆ ಉದ್ದೇಶ ವಿವರಿಸಲು ಹೊರಟ ನಾಯಕರ ಜೊತೆ ಯುವಕರ ಗುಂಪೊಂದು ವಾಗ್ವಾದಕ್ಕೆ ಇಳಿದಿದ್ದು, ಕೂಡಲೇ ಪಾದಯಾತ್ರೆ ನಿಲ್ಲಿಸಿ ವಾಪಸ್ ತೆರಳಿ ಎಂದು ಎಚ್ಚರಿಕೆಯನ್ನು ನೀಡಿದರು. ಆಗ ಪಾದಯತ್ರೆಯಲ್ಲಿ ಭಾಗವಹಿಸಿದ್ದ ಮುಖಂಡರು ಯಾವುದೇ ದಾರಿ ಇಲ್ಲದೆ ಸ್ಥಳದಿಂದ ವಾಪಸ್ಸಾಗಿದ್ದಾರೆ.

Siddaramaiah fans blocked the march DK Shivakumar supporters

ಹೀಗೆ ಪ್ಲಾನ್‌ ಮಾಡಿಕೊಂಡು ಕಾಂಗ್ರೆಸ್‌ನಲ್ಲಿ ಎರಡೆರಡು ಪ್ರತ್ಯೇಕ ಬಣಗಳಾಗಿ ಪಾದಯಾತ್ರೆ ನಡೆಸಲು ಸಜ್ಜಾಗಿದ್ದವು. ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಬೆಂಬಲಿಗರಿಂದ ಪ್ರತ್ಯೇಕ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಸ್ವಾತಂತ್ರ್ಯೋತ್ಸವ, ಅಮೃತ ಮಹೋತ್ಸವ ಹೆಸರಿನಲ್ಲಿ ಕೆಪಿಸಿಸಿಯಿಂದ ಪಾದಯಾತ್ರೆಗೆ ಸೂಚನೆ ನೀಡಿದ್ದಾರೆ. ಆದರೆ ಸ್ಥಳೀಯವಾಗಿ ನಾಯಕರ ಬೆಂಬಲಿತ‌ ಗುಂಪುಗಳಿಂದ ಪ್ರತ್ಯೇಕ ಪಾದಯಾತ್ರೆ ಆರಂಭಿಸಿದ್ದಾರೆ.

Siddaramaiah fans blocked the march DK Shivakumar supporters

ಹೀಗೆ ಡಿ.ಕೆ.ಶಿವಕುಮಾರ್ ಬಣದ ಮುಖಂಡರ ಪಾದಯಾತ್ರೆಗೆ ನಿನ್ನೆ ಸಿದ್ದರಾಮಯ್ಯ ಬೆಂಬಲಿಗರು ಅಡ್ಡಿಪಡಿಸಿದರು. ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಒಳ ರಾಜಕೀಯ ಇರಿಸುಮುರುಸುಗಳು ನಡೆದುಕೊಂಡೇ ಬಂದಿವೆ. ಒಂದೇ ಪಕ್ಷದಲ್ಲಿ ಎರಡೆರಡು ಬಣಗಳಾಗಿ ಸಮರದವರೆಗೂ ನಿಂತುಬಿಟ್ಟಿವೆ. ಸ್ಥಳೀಯವಾಗಿ ಪಕ್ಷದಲ್ಲಿರುವ ಮುಖಂಡರ ನಡುವೆ ಹೊಂದಾಣಿಕೆ ಇಲ್ಲ ಎಂಬುದು ನಿನ್ನೆ ನಡೆದ ಘಟನೆಯೇ ಪ್ರಮುಖ ಸಾಕ್ಷಿಯಾಗಿದೆ.

Recommended Video

      ಆತುರ ಪಟ್ಟು ಶುಬ್ಮನ್ ಗಿಲ್ ವಿಚಾರದಲ್ಲಿ ಮಾಡಿದ ಎಡವಟ್ಟಿನಿಂದ RCB ಗೆ ಭಾರಿ ಅವಮಾನ | *Cricket | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+