Prajwal Revanna Case: ಆಗ ಪ್ರಜ್ವಲ್ ವಿರುದ್ಧ ಕಾನೂನು ಹೋರಾಟ, ಈಗ ಭಾವುಕ ಪೋಸ್ಟ್!
ಹಾಸನ, ಮೇ. 13 : ಅರಕಲಗೂಡು ಶಾಸಕ ಎ ಮಂಜು ಮತ್ತು ಹಾಸನದ ಎಂಪಿ ಪ್ರಜ್ವಲ್ ರೇವಣ್ಣ ನಡುವಿನ ಮುನಿಸು ಎಲ್ಲರಿಗೂ ಗೊತ್ತೆ ಇದೆ. ಪ್ರಜ್ವಲ್ ವಿರುದ್ಧ 2019 ರಲ್ಲಿ ಕೋರ್ಟ್ ಮೆಟ್ಟಿಲೆರಿದ್ದರು ಅವರು. ಇದಾದ ನಂತರ ಇತ್ತೀಚೆಗಷ್ಟೇ ದೇಶಾದ್ಯಂತ ಸದ್ದು ಮಾಡಿರುವ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹಿಸಿದ್ದ ಶಾಸಕ ಎ ಮಂಜು ಈಗ ದೇವೇಗೌಡರ ಬಗ್ಗೆ ಭಾವುಕರಾಗಿ ಫೋಸ್ಟ್ ಹಂಚಿಕೊಂಡಿದ್ದಾರೆ.
ಕುತಂತ್ರ ರಾಜಕಾರಣದಿಂದ ಇಂದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವುದು ಅಸಹ್ಯದ ವಿಚಾರವಾಗಿದೆ ತಪ್ಪು ಯಾರದ್ದೆ ಇರಲಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದರು. ಜೊತೆಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇನ್ನು, ಪ್ರಜ್ವಲ್ ಪ್ರಕಣದಲ್ಲಿ ಇವರ ಹೆಸರು ಕೂಡ ತಗಲಾಕಿಕೊಂಡಿದೆ. ಅದರ ಬೆನ್ನಲ್ಲೇ ಭಾವನಾತ್ಮಕ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಗಳಲ್ಲಿ ಶೇರ್ ಮಾಡಿದ್ದಾರೆ.

ಅರಕಲಗೂಡು ಶಾಸಕ ಎ ಮಂಜು ಹೇಳಿದ್ದೇನು?
"ನಾನು ವಿದ್ಯಾರ್ಥಿ ದಿನಗಳಲ್ಲೇ ರಾಜಕೀಯಕ್ಕೆ ಬಂದವನು ಅಂದೇ ನನ್ನನ್ನು ಗುರುತಿಸಿದ್ದ ಸನ್ಮಾನ್ಯ ಎಚ್.ಡಿ. ದೇವೆಗೌಡರು.. ಇಂದು ನನ್ನ ರಾಜಕೀಯ ಕೊನೆಗಾಲದ ಗುರುವಾಗಿರುವುದು ನನ್ನ ಪುಣ್ಯಾ. ನನಗೆ ಈಗ 67 ವರ್ಷ ನನಗೂ ಒಂದು ಕುಟುಂಬವಿದೆ ಈ ಇಳಿಯ ವಯ್ಯಸ್ಸಿನಲ್ಲಿ ಹೆಸಿಗೆ ಮತ್ತು ಅಸಹ್ಯವಾದ ರಾಜಕಾರಣ ಮಾಡಲೂ ನಾನು ಬಯಸುವುದಿಲ್ಲಾ. ಏನೆ ಇದ್ದರು, ನೇರಾ ನೇರಾ ರಾಜಕಾರಣ ಮಾಡಿಕೊಂಡು ಬಂದವ ನಾನು".
"ಹಲವು ಏಳು ಬೀಳುಗಳನ್ನು ಕಂಡಿದ್ದೇನೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿದ್ದೇನೆ. ಬಹುಷಃ ಕರ್ನಾಟಕದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಮೂರು ಪಕ್ಷಗಳಲ್ಲಿಯೂ ಶಾಸಕನಾಗಿ, ಸಚಿವನಾಗಿ ಇಂದಿಗೂ ಕೂಡ ಹಾಲಿ ಶಾಸಕನಾಗಿ ಜನಪರ ಕೆಲಸ ಮಾಡುತ್ತಿದ್ದೇನೆ. ಕಾರಣವಿಷ್ಟೇ ಮತದಾರನಿಗೂ ಮಾನವಿಯತೆಗೂ ಮನುಷ್ಯತ್ವಕ್ಕೂ ಇರುವ ಬೆಸುಗೆ. ದ್ವೇಷದ ರಾಜಕಾರಣ ನನ್ನ ಮನಸ್ಸಿನಲ್ಲಿರಲಿ ಕನಸ್ಸಲ್ಲೂ ಕೂಡ ಮಾಡಿಲ್ಲ".
"ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ಸನ್ಮಾನ್ಯ ಎಚ್.ಡಿ. ದೇವೇಗೌಡರು ನಾನು ಅವರ ವಿರುದ್ಧ ರಾಜಕಾರಣವನ್ನು ಸತತ 25 ವರ್ಷಗಳ ಕಾಲ ಮಾಡಿದ್ದು ನಿಜ. ಆದರೇ ನಾನು ಅಂದಿನ ಕಾಲಘಟ್ಟಕ್ಕೆ ರಾಜಕೀಯವಾಗಿ ವೈರಿಯೆ ಹೊರತು. ಅವರ ತೇಜೋವಧೆ ಮಾಡುವಷ್ಟು ಕೆಳಮಟ್ಟದ ರಾಜಕಾರಣ ಮಾಡಿಲ್ಲಾ, ಮಾಡುವುದು ಇಲ್ಲಾ ಎಂಬುದು ಹಾಸನದ ಜನತೆಗೆ ತಿಳಿದಿರುವ ವಿಚಾರ".

"ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡಿಲ್ಲಾ ನನ್ನ ಕನಸಿನಲ್ಲಿಯೂ ಕೂಡ ಮಾಡುವವನು ನಾನಲ್ಲ. ಪ್ರಜ್ವಲ್ ವಿರುದ್ದ 2019ರಲ್ಲಿ ಕೋರ್ಟ್ ಮೆಟ್ಟಿಲೆರಿದ್ದು ನಿಜ ಆದರೆ ಅದು ಚುನಾವಣಾ ಸಂದರ್ಭದಲ್ಲಿ, ನಾಮಪತ್ರದ ಏರುಪೇರುಗಳ ಬಗ್ಗೆ ಹೊರತು. ದೇವೆಗೌಡರ ಕುಟುಂಬದ ವಿರುದ್ಧವಾಗಿ ಅಲ್ಲ".
"ಪೆನ್ ಡ್ರೈವ್ ಪ್ರಕರಣದಿಂದ ದೇವೇಗೌಡರು ಮಾನಸಿಕವಾಗಿ ಬಹಳ ನೊಂದಿದ್ದಾರೆ. ಅವರನ್ನ ಮೊನ್ನೆ ಭೇಟಿ ಮಾಡಿದಾಗ ಈ ವಿಚಾರದ ಬಗ್ಗೆ ನನಗೆ ಯಾಕೆ ಮೊದಲೇ ತಿಳಿಸಲಿಲ್ಲ ಎಂದು ಕೇಳಿದರು. ಆಗ ನನ್ನ ಮನಸ್ಸಿಗೆ ಬಹಳ ನೋವಾಗಿದ್ದು ಸತ್ಯ, ಆದರೇ, ವಿಷಯ ನನ್ನ ಗಮನಕ್ಕೆ ಬಂದಿದ್ದೇ ತಡವಾಗಿ, ಹೀಗಿರುವಾಗ ನನ್ನ ತಂದೆಯ ಸಮಾನರಾದ ದೊಡ್ಡಗೌಡರಿಗೆ ನಾನು ಉತ್ತರ ಕೋಡುವಾದರು ಏನು..? ಅದೇನೆ ಇರಲಿ ಏನೇ ಆಗಲಿ ಸಮಾಜದ ಸ್ವಾಸ್ಥ್ಯ ಕೆಡಿಸಿ ಈ ಇಳಿಯ ವಯಸ್ಸಿನಲ್ಲಿ ನನ್ನ ತಂದೆಯ ಸಮಾನರಾದ ದೇವೆಗೌಡರಿಗೆ ಆಗಲಿ ಮತ್ತೊಬ್ಬರಿಗೆ ಆಗಲಿ ಯಾರಿಗೂ ಇಂತಹ ಪರಿಸ್ಥಿತಿ ನಿರ್ಮಾಣವಾಗಬಾರದು".
"ನಾನು ಇಂದು ಸದ್ಯದ ಸ್ಥಿತಿಯಲ್ಲಿ ಜೈಲಿನಲ್ಲಿರುವ ರೇವಣ್ಣ ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಅವರ ಪ್ರತಿ ಕಷ್ಟ ಕಾಲದಲ್ಲೂ ನಾನು ಇರುತ್ತೇನೆ. ನಾನು ಅವರ ಕುಟುಂಬದ ಜೊತೆಯಲ್ಲಿ ಇದ್ದೇನೆ ಎಂಬ ಒಂದೆ ಒಂದು ಕಾರಣಕ್ಕಾಗಿಯೇ ಈಗ ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲು ಪ್ರಯತ್ನಿಸುತ್ತಿದ್ದಾರೆ".
"ಕಾರಣ ಇಷ್ಟೇ ನಾನು ನಲವತ್ತು ವರ್ಷಗಳಿಂದ ನೇರಾನೇರಾ ರಾಜಕಾರಣ ಮಾಡಿಕೊಂಡು ಬಂದವನು, ಕರ್ನಾಟಕದ ಮೂಲೆ ಮೂಲೆಗಳಲ್ಲಿಯೂ ಸಹ ನನ್ನನ್ನು ಗುರುತಿಸುವುದರ ಜೊತೆಗೆ ಅಣ್ಣ ಒಂದು ಫೋಟೋ ತೆಗೆಸಿಕೊಳ್ಳುತ್ತೇವೆ ಎಂದಾಗ ನಾನು ಇಲ್ಲಾ ಬೇಡಾ ಎಂದು ಯಾರಿಗೂ ಹೇಳಿಲ್ಲ, ಹೀಗಿದ್ದಾಗ ಇದನ್ನೆ ಅಸ್ತ್ರ ವಾಗಿ ಬಳಸಿ ನನ್ನ ಮತದಾರರನ್ನು ಹಾಗೂ ಜೆಡಿಎಸ್ ಕಾರ್ಯಕರ್ತರನ್ನು ದಿಕ್ಕೆಡಿಸುವ ಕೆಲಸ ಮಾಡುತ್ತಿದ್ದಾರೆ".
"ಈ ರೀತಿ ಕೆಲಸ ಮಾಡುತ್ತಿರುವವರು ಥರ್ಡ್ ಕ್ಲಾಸ್‌ಗಳು, ರಾಜಕೀಯ ನೇರಾ ನೇರಾ ಇರಬೇಕೆ ಹೊರತು ಒಂದು ಕುಟುಂಬ ಹಾಳು ಮಾಡುವುಷ್ಟು ತಳ ಮಟ್ಟಕ್ಕೆ ಇಳಿಯಬಾರದು. ನಾನು ಒಬ್ಬ ರಾಜಕಾರಣಿ ಎಂಬುವುದಕ್ಕಿಂತ ಮುಂಚೆ, ವಕೀಲ ಎಂಬುದು ಬಹಳಷ್ಟು ಮಂದಿಗೆ ತಿಳಿದಿದೆ ಎಂದು ಭಾವಿಸುತ್ತೇನೆ. ಕೊನೆಗೆ ಗೆಲ್ಲುವುದು ಸತ್ಯವೆ ಹೊರತು ನೀಚ ರಾಜಕಾರಣವಲ್ಲಾ. ದೇವೆಗೌಡ್ರು ಎಂಬಾ ಹಿರಿಯ ಜೀವಾ ನಮ್ಮ ಕನ್ನಡಿಗರ ಅಸ್ತಿತ್ವ ಆ ಜೀವಕ್ಕೆ ಎಂದಿಗೂ ಕೇಡು ಬಯಸಬೇಡಿ. ಸತ್ಯಮೇವ ಜಯತೇ! ಸತ್ಯಕ್ಕೆ ಸಾವಿಲ್ಲ!. ಧರ್ಮದ ಏಟು ತಪ್ಪ ಬಹುದು ಆದರೇ ಕರ್ಮದ ಏಟು ತಪ್ಪುವುದಿಲ್ಲ ಕಾದು ನೋಡಿ!?" ಎಂದು ಉದ್ದದ ಪೋಸ್ಟ್ ಹಾಕಿದ್ದಾರೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications