ಹಾಸನ : ಆತ್ಮಹತ್ಯೆಗೆ ಯತ್ನಿಸಿದ ಹಾಸನ ಎಸಿ ವಿರುದ್ಧ ಎಫ್‌ಐಆರ್?

Posted By:
Subscribe to Oneindia Kannada

ಹಾಸನ, ಜುಲೈ 23 : ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಸನ ಉಪವಿಭಾಗಾಧಿಕಾರಿ ವಿಜಯಾ ಅವರ ವಿರುದ್ಧ ಎಫ್‌ಐಆರ್ ದಾಖಲಾಗುವ ಸಾಧ್ಯತೆ ಇದೆ. ಗುರುವಾರ ಸಂಜೆ ವಿಜಯಾ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.

ಉಪವಿಭಾಗಾಧಿಕಾರಿ ವಿಜಯಾ ಅವರ ವಿರುದ್ಧ ಆತ್ಮಹತ್ಯೆಗೆ ಯತ್ನಿಸಿದ್ದಕ್ಕಾಗಿ ಐಪಿಸಿ ಸೆಕ್ಷನ್ 309ರ ಅನ್ವಯ ಎಫ್‌ಐಆರ್ ದಾಖಲು ಮಾಡಲು ಅವಕಾಶವಿದೆ. ಒಂದು ವೇಳೆ ಅವರ ಮೇಲಿನ ಆರೋಪ ಸಾಬೀತಾದರೆ 1 ವರ್ಷದ ತನಕ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.[ಹಿರಿಯ ಅಧಿಕಾರಿಗಳೇ ಹೊಣೆ : ಎಸಿ ವಿಜಯಾ ತಾಯಿ ಆರೋಪ]

vijaya

ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯಾ ಅವರು ಇನ್ನೂ ಪೊಲೀಸರಿಗೆ ತಮ್ಮ ಹೇಳಿಕೆ ನೀಡಿಲ್ಲ. ಅವರು ನೀಡುವ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಎಫ್‌ಐಆರ್ ದಾಖಲು ಮಾಡುವ ಕುರಿತು ಪೊಲೀಸರು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.[ಮನೆಯಲ್ಲೆ ಆತ್ಮಹತ್ಯೆಗೆ ಯತ್ನಿಸಿದ ಹಾಸನ ಎಸಿ ವಿಜಯಾ]

ಶೋಭಾರಾಣಿ ನಾಪತ್ತೆ : ವಿಜಯಾ ಅವರ ಆತ್ಮಹತ್ಯೆ ಮಾಡಿಕೊಳ್ಳು ಮುಂದಾದಾಗ ಅವರನ್ನು ರಕ್ಷಣೆ ಮಾಡಿದ್ದ ಎಎಸ್ಪಿ ಶೋಭಾರಾಣಿ ಅವರು ನಾಪತ್ತೆಯಾಗಿದ್ದಾರೆ. ಶುಕ್ರವಾರ ಅವರು ಕಚೇರಿಗೆ ಬಂದಿಲ್ಲ. ವಿಜಯಾ ಅವರು ಡೆತ್‌ನೋಟ್ ಬರೆದಿಟ್ಟಿದ್ದರು ಎಂದು ಶೋಭಾರಾಣಿ ಹೇಳಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರ ಕಿರುಕುಳದಿಂದಾಗಿ ವಿಜಯಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದೂ ಆರೋಪಿಸಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Hassan police may filing a case against KAS officer E. Vijaya, who attempted suicide on Thursday, under the Section 309 of the Indian Penal Code Attempt to commit suicide.
Please Wait while comments are loading...